Tuesday, September 16, 2025

Janaspandhan News

HomeGeneral NewsA strange love story : 25 ವರ್ಷದ ಯುವತಿಗೆ 76 ವರ್ಷದ ಅಜ್ಜನ ಮೇಲೆ...
spot_img
spot_img
spot_img

A strange love story : 25 ವರ್ಷದ ಯುವತಿಗೆ 76 ವರ್ಷದ ಅಜ್ಜನ ಮೇಲೆ ಪ್ರೀತಿ, ಮದುವೆ.!

- Advertisement -

ಜನಸ್ಪಂದನ ನ್ಯೂಸ್, ಡೆಸ್ಕ್ : ಇಲ್ಲೊಂದು ವಿಚಿತ್ರ ಪ್ರೇಮಕಥೆ (Love story) ಯ ಘಟನೆಯೊಂದು ನಡೆದಿರುವ ಬಗ್ಗೆ ತಿಳಿದು ಬಂದಿದೆ.

ಇಂದಿನ ಕಾಲದಲ್ಲಿ ಪ್ರೀತಿ (Love), ಮದುವೆ ಎಂದರೆ ಕೇವಲ ವಯಸ್ಸಿನ ಅಂತರಕ್ಕಷ್ಟೇ ಸೀಮಿತವಾಗಿಲ್ಲ ಎಂಬುದನ್ನು ಅಮೇರಿಕಾದ ಸ್ಯಾನ್ ಡಿಯಾಗೋದಲ್ಲಿ ನಡೆದ ಒಂದು ಘಟನೆ ತೋರಿಸಿದೆ.

25 ವರ್ಷದ ಯುವತಿ ಮತ್ತು 76 ವರ್ಷದ ಅಜ್ಜ ಅವರು ವಿವಾಹವಾಗಿದ್ದು, ತಮ್ಮ ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದಾರೆ.

LPG : ಹೋಮ್ ಡೆಲಿವರಿ ಮಾಡುವ ಸಿಲಿಂಡರ್‌ಗೆ ಹೆಚ್ಚುವರಿ ಹಣ ಕೊಡಬೇಡಿ ; ಕೇಳಿದರೆ ದೂರು ಕೊಡಿ.!

ಡಯಾನಾ ಮೊಂಟಾನೊ (25) ಮತ್ತು ಎಡ್ಜಿಯರ್ (76) ಎಂಬ ಜೋಡಿಯ ಈ ಸಂಬಂಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

ಇಬ್ಬರ ನಡುವೆ 51 ವರ್ಷದ ವಯಸ್ಸಿನ ಅಂತರ ಇದ್ದರೂ, “ನಾವು ಪರಸ್ಪರ ಪ್ರೀತಿಸಿ (Love) ಅರ್ಥ ಮಾಡಿಕೊಂಡಿದ್ದೇವೆ, ಗೌರವ ನೀಡುತ್ತೇವೆ, ಖುಷಿಯಿಂದ ಬದುಕುತ್ತಿದ್ದೇವೆ” ಎಂದು ಡಯಾನಾ ಹೇಳಿದ್ದಾರೆ.

ಪ್ರೀತಿ ( Love) ಹೇಗೆ ಆರಂಭವಾಯಿತು?

ಡಯಾನಾ ಮತ್ತು ಎಡ್ಜಿಯರ್ ಅವರ ಮೊದಲ ಭೇಟಿಗೆ ಮ್ಯೂಚುವಲ್ ಫ್ರೆಂಡ್ ಕಾರಣ. ಮೊದಲಿಗೆ ಕೇವಲ ಸ್ನೇಹಿತರಾಗಿದ್ದ ಇವರ ಸಂಬಂಧ, ನಂತರ ನಿಧಾನವಾಗಿ ಪ್ರೀತಿಗೆ ತಿರುಗಿತು.

Lemon ಫ್ರಿಡ್ಜ್‌ನಲ್ಲಿಡುವುದರಿಂದ ಎಷ್ಟೊಂದು ಅದ್ಭುತ ಪ್ರಯೋಜನಗಳಿವೇ ಗೊತ್ತಾ.?

ಜುಲೈ 2024ರಲ್ಲಿ ಇವರಿಬ್ಬರೂ ಮದುವೆಯಾದರು. ಆದರೆ ಈ ಸಂಬಂಧವನ್ನು ಡಯಾನಾ ಅವರ ಕುಟುಂಬ ಹಾಗೂ ಹಲವರು ವಿರೋಧಿಸಿದ್ದರು.

ಡಯಾನಾ ಹೇಳುವಂತೆ, “ವಯಸ್ಸಿನ ಅಂತರ ನಮಗೆ ಎಂದೂ ಅಡ್ಡಿಯಾಗಿಲ್ಲ. ಎಡ್ಜಿಯರ್ ನನಗೆ ಗೌರವ ಕೊಡುತ್ತಾರೆ, ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ನಮ್ಮ ಆಲೋಚನೆಗಳು ಒಂದೇ ರೀತಿ ಇರುವುದರಿಂದ ಜೀವನ ಸುಲಭವಾಗಿದೆ” ಎಂದಿದ್ದಾರೆ.

ಸಮಾಜದ ವಿರೋಧ :

ಇಬ್ಬರ ಪ್ರೀತಿ (Love) ಗೆ ಸಮಾಜದಿಂದ ಟೀಕೆಗಳು ಬಂದಿವೆ. “ಹಿರಿಯರ ಜೊತೆ ಜೀವನ ನಡೆಸುತ್ತಿದ್ದೀಯ, ನಿನ್ನ ಭವಿಷ್ಯ ಹಾಳುಮಾಡಿಕೊಂಡಿದ್ದೀಯ” ಎಂಬ ಟೀಕೆಗಳು ಡಯಾನಾಗೆ ನೋವುಂಟು ಮಾಡಿದವು. ಆದರೆ ಇವತ್ತು ಅವುಗಳನ್ನು ನೋಡಿದರೆ ಕೇವಲ ನಗುವಷ್ಟೇ ಬರುತ್ತದೆ ಎಂದು ಆಕೆ ಹೇಳಿದ್ದಾರೆ.

Cruel : ಈ 4 ರಾಶಿಯವರು ಕ್ರೌರ್ಯಕ್ಕೆ ಹೆಸರುವಾಸಿ ; ಕೋಪ ಬಂದರೆ ಕರುಣೆ ತೋರದವರು.!
ಹೊಸ ಜೀವನದ ಸವಾಲುಗಳು :

ಡಯಾನಾ ಪ್ರಕಾರ, ಮದುವೆಯಾದ ಬಳಿಕ ಹಿರಿಯರೊಂದಿಗೆ ಹೆಚ್ಚು ಬೆರೆಯುವ ಪರಿಸ್ಥಿತಿ ಎದುರಾಗಿದೆ. ಕೆಲವೊಮ್ಮೆ ಜನರು ನೇರವಾಗಿ ಟೀಕೆ ಮಾಡಿದರೂ, ತಮ್ಮ ಪ್ರೀತಿ (Love) ಯಲ್ಲಿ ಅದರಿಂದ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ.


Fire : 36 ಲಕ್ಷ ವರದಕ್ಷಿಣೆ ಬೇಡಿಕೆ : ಪತ್ನಿ ಸುಟ್ಟು ಹಾಕಿದ ಪತಿ ; ಸತ್ಯ ಬಿಚ್ಚಿಟ್ಟ ಮಗ.!

Fire

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವರದಕ್ಷಿಣೆ ವಿಚಾರವಾಗಿ ಪತಿಯೋರ್ವ ಪತ್ನಿಗೆ ಬೆಂಕಿ (Fire) ಹಚ್ಚಿ ಕೊಲೆ ಮಾಡಿರುವ ಘಟನೆಯೋದು ನಡೆದಿರುವ ಬಗ್ಗೆ ವರದಿಯಾಗಿದೆ.

ಗ್ರೇಟರ್ ನೋಯ್ಡಾದ ಕಸ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿರ್ಸಾ ಗ್ರಾಮದಲ್ಲಿ ನಡೆದ ದಾರುಣ ಘಟನೆಯಲ್ಲಿ, ಬೆಂಕಿ (Fire) ಹಚ್ಚಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ 6 ವರ್ಷದ ಮಗ ನೀಡಿದ ಹೇಳಿಕೆ ಪೊಲೀಸರಿಗೆ ಪ್ರಮುಖ ಸುಳಿವು ಒದಗಿಸಿದೆ.

ಮಗನ ಹೇಳಿಕೆಯ ಪ್ರಕಾರ, ತನ್ನ ಅಪ್ಪನೇ ತಾಯಿಯನ್ನು ತನ್ನ ಮುಂದೆಯೇ ಹಲ್ಲೆ ಮಾಡಿ ಬೆಂಕಿ (Fire) ಹಚ್ಚಿದ್ದಾನೆ. ಆಕೆ ಹಲವು ದಿನಗಳಿಂದ ಹಿಂಸೆಗೆ ಒಳಗಾಗುತ್ತಿದ್ದಾಳೆ ಎಂಬುದನ್ನೂ ಬಾಲಕ ಬಿಚ್ಚಿಟ್ಟಿದ್ದಾನೆ.

Dharmasthala ಪ್ರಕರಣಕ್ಕೆ ಟ್ವಿಸ್ಟ್ : ಸುಜಾತಾ ಭಟ್ ಬಾಯ್ಬಿಟ್ಟ ಸತ್ಯ, ಮಾಸ್ಕ್ ಮ್ಯಾನ್ ಬಂಧನ.!

ಘಟನೆಯ ವಿಡಿಯೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವುಗಳಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ಹಾಗೂ ಬೆಂಕಿ (Fire) ಹೊತ್ತಿಕೊಂಡ ನಂತರ ಆಕೆ ಮೆಟ್ಟಿಲುಳಿದು ಬರುತ್ತಿರುವ ದೃಶ್ಯಗಳು ಕಾಣಿಸಿವೆ.

ಮೃತಳ ಅಕ್ಕ ಕಾಂಚನ್ ಮಾತನಾಡಿ, ತಮ್ಮ ತಂಗಿಯ ಪತಿ ವಿಪಿನ್ ಹಾಗೂ ಆತನ ಮನೆಯವರು 36 ಲಕ್ಷ ರೂ. ವರದಕ್ಷಿಣೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ತಂಗಿ ನಿರಂತರ ಹಿಂಸೆಗೆ ಒಳಗಾಗುತ್ತಿದ್ದರು ಎಂದು ಅವರು ಹೇಳಿದ್ದಾರೆ.

KSCCF : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತದಲ್ಲಿ ಉದ್ಯೋಗವಕಾಶ.!

ಕಾಂಚನ್ ಅವರ ಪ್ರಕಾರ, ತಂಗಿಯನ್ನು ಹಲ್ಲೆ ಮಾಡಿದ ನಂತರ ಬೆಂಕಿ (Fire) ಹಚ್ಚಲಾಯಿತು. ತಂಗಿಯ ಮಕ್ಕಳೂ ಆ ಸಮಯದಲ್ಲಿ ಅಲ್ಲೇ ಇದ್ದರು. ತಮಗೂ ಹಲ್ಲೆ ನಡೆಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments