ಜನಸ್ಪಂದನ ನ್ಯೂಸ್, ಬೆಂಗಳೂರು : ಧರ್ಮಸ್ಥಳ (Dharmasthala) ದಲ್ಲಿ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದೆ ಎಂಬ ಕಥೆ ಸಂಪೂರ್ಣ ಸುಳ್ಳು ಎಂದು ಸುಜಾತಾ ಭಟ್ ಖಾಸಗಿ ಯೂಟ್ಯೂಬ್ ಚಾನೆಲ್‌ಗೊ೦ದು ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.
ಅವರು ಹೇಳುವಂತೆ, ಆಸ್ತಿ ವಿಚಾರದ ಒತ್ತಡದಿಂದಾಗಿ ಈ ಕಥೆಯನ್ನು ರಚಿಸಲಾಗಿತ್ತು. ನನ್ನ ಮಗಳು ಅನನ್ಯಾ ಭಟ್ ಎಂಬುದು ನಿಜವಲ್ಲ. ಗಿರೀಶ್ ಮಟ್ಟೆಣ್ಣನವರ್ ಹಾಗೂ ಜಯಂತ್ ಟಿ ಹೇಳಿದ ಮಾತಿನ ಆಧಾರದಲ್ಲಿ ನಾನು ಆ ಕಥೆಯನ್ನು ಮುಂದುವರಿಸಿದ್ದೆ.
Cruel : ಈ 4 ರಾಶಿಯವರು ಕ್ರೌರ್ಯಕ್ಕೆ ಹೆಸರುವಾಸಿ ; ಕೋಪ ಬಂದರೆ ಕರುಣೆ ತೋರದವರು.!
ನನ್ನ ತಾತನ ಆಸ್ತಿಯನ್ನು ಧರ್ಮಸ್ಥಳ (Dharmasthala) ಕ್ಕೆ ದಾನವಾಗಿ ನೀಡಿದ ವಿಷಯದಲ್ಲಿ ನನಗೆ ಪಾಲು ಸಿಗಬೇಕಾಗಿತ್ತು, ಆದರೆ ಸಿಗಲಿಲ್ಲ ಎಂಬ ನೋವಿನಿಂದ ನಾನು ಈ ಸುಳ್ಳು ಹೇಳಿಕೆ ನೀಡಿದ್ದೆ ಎಂದು ಸುಜಾತಾ ಭಟ್ ಸ್ಪಷ್ಟಪಡಿಸಿದ್ದಾರೆ.
ಅವರು ತಮ್ಮ ಮಗಳ ಫೋಟೋ ಸಹ ನಕಲಿಯೇ ಎಂದು ಒಪ್ಪಿಕೊಂಡಿದ್ದು, “ಜನರ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ. ಆದರೆ ಕೆಲವು ಜನರ ಪ್ರಚೋದನೆಯಿಂದ ಆ ರೀತಿಯ ಹೇಳಿಕೆ ನೀಡಬೇಕಾಯಿತು” ಎಂದು ಹೇಳಿದ್ದಾರೆ.
Women : 25 ವರ್ಷದ ಯುವತಿ ಜೊತೆ ಓಡಿ ಹೋದ 16 ರ ಅಪ್ರಾಪ್ತ ; ಮುಂದೆನಾಯ್ತು.?
ಜೊತೆಗೆ ಧರ್ಮಸ್ಥಳ (Dharmasthala) ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ದೇವಸ್ಥಾನದ ಪ್ರತಿಷ್ಠೆಗೆ ತಾನು ಧಕ್ಕೆ ತಂದಿಲ್ಲ ಎಂದು ಸುಜಾತಾ ಭಟ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ಇನ್ನೊಂದೆಡೆ, ಧರ್ಮಸ್ಥಳ (Dharmasthala) ಬಳಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ದೂರು ಸಂಪೂರ್ಣ ಸುಳ್ಳು ಎಂದು ಎಸ್‌ಐಟಿ ತನಿಖೆಯಿಂದ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ದೂರು ನೀಡಿದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
benefits-of-climbing-stairs : ಮೆಟ್ಟಿಲು ಹತ್ತುವ ಅಥವಾ ಇಳಿಯುವ ಅವಕಾಶ ಸಿಕ್ಕರೆ ಖಂಡಿತಾ ಮಿಸ್ ಮಾಡ್ಕೋಬೇಡಿ.!
ಮೂಲಗಳ ಪ್ರಕಾರ, ಆಗಸ್ಟ್ 22ರಂದು ಮಂಗಳೂರು ಸಮೀಕ್ಷಾಧಿಕಾರಿಗಳ ಮೂಲಕ ನೀಡಲಾಗಿದ್ದ ಪ್ರೊಟೆಕ್ಷನ್ ಆದೇಶವನ್ನು ರದ್ದುಪಡಿಸಲಾಗಿದ್ದು, ಆಗಸ್ಟ್ 23ರಂದು ಬೆಳಿಗ್ಗೆ ಆರೋಪಿಯನ್ನು ಬಂಧಿಸಿ ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
Women : 25 ವರ್ಷದ ಯುವತಿ ಜೊತೆ ಓಡಿ ಹೋದ 16 ರ ಅಪ್ರಾಪ್ತ ; ಮುಂದೆನಾಯ್ತು.?
ಜನಸ್ಪಂದನ ನ್ಯೂಸ್, ಡೆಸ್ಕ್ : 16 ವರ್ಷದ ಅಪ್ರಾಪ್ತ ಬಾಲಕನೊಬ್ಬ 25 ವರ್ಷದ ಯುವತಿ (Women) ಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿರುವ ಬೆಚ್ಚಿಬೀಳಿಸುವ ಘಟನೆಯೊಂದು ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
16 ವರ್ಷದ ಅಪ್ರಾಪ್ತ ಬಾಲಕನೊಬ್ಬ 25 ವರ್ಷದ ಯುವತಿ (Women) ಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಹುಡುಗಿ (Women) ಯ ಕುಟುಂಬವು ಬಾಲಕನನ್ನು 8 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಹಗ್ಗದಿಂದ ಕೈ ಕಟ್ಟಿ, ಬೆಲ್ಟಿನಿಂದ ಥಳಿಸಿರುವುದು ಪತ್ತೆಯಾಗಿದೆ.
KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 15000+ ಹುದ್ದೆಗಳ ನೇಮಕಾತಿ.!
ಹೀಗೆ 8 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಹಗ್ಗದಿಂದ ಕೈ ಕಟ್ಟಿ, ಬೆಲ್ಟಿನಿಂದ ಥಳಿಸಿರುವ ಈ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
ಘಟನೆ ಹೇಗೆ ನಡೆಯಿತು?
ಪೊಲೀಸರ ತನಿಖೆಯ ಪ್ರಕಾರ, ಜನವರಿ 19ರಂದು ಮಧ್ಯಪ್ರದೇಶದ ದಾಟಿ ಪ್ರದೇಶದ 16 ವರ್ಷದ ಬಾಲಕ, ಕೋಟಾ ಜಿಲ್ಲೆಯ ಹಿರಾಯಖೇಡಿ ಗ್ರಾಮದಿಂದ 25 ವರ್ಷದ ಯುವತಿ (Women) ಯನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಆದರೆ ವಿಚಾರಣೆಯ ಸಮಯದಲ್ಲಿ ಹುಡುಗಿ ತನ್ನ ಸ್ವಂತ ಇಚ್ಛೆಯಿಂದಲೇ ಹೋಗಿದ್ದೇನೆ, ನನ್ನೊಂದಿಗೆ ಯಾವುದೇ ತಪ್ಪು ಸಂಭವಿಸಿಲ್ಲ ಎಂದು ಯುವತಿ (Women) ಹೇಳಿದ್ದಾಳೆ.
Bike-Scooter-collision : 2-3 ಸುತ್ತು ಹಾಕಿ ಕೆಳಗೆ ಬಿದ್ದ ಬೈಕ್ ಸವಾರ ; ವಿಡಿಯೋ ವೈರಲ್.!
ಪೊಲೀಸರು ಹುಡುಗಿ (Women) ಯನ್ನು ಹುಡುಕಿಕೊಂಡು ಬಂದು ಕುಟುಂಬಕ್ಕೆ ಒಪ್ಪಿಸಿದರು. ಆದರೆ ಇದಾದ ನಂತರ ಹುಡುಗಿಯ ಕುಟುಂಬವೇ ಬಾಲಕನನ್ನು ಹಿಡಿದು ತಮ್ಮ ಮನೆಯಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡು 8 ದಿನಗಳ ಕಾಲ ಥಳಿಸಿರುವುದು ಬಹಿರಂಗವಾಗಿದೆ.
ಪೊಲೀಸರ ಕ್ರಮ :
ಘಟನೆಯ ವಿಡಿಯೋ ಹೊರಬಂದ ನಂತರ, ಕೋಟಾ ಜಿಲ್ಲಾ ಗ್ರಾಮೀಣ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಕೋಟಾ ಜಿಲ್ಲಾ ಗ್ರಾಮೀಣ ಎಸ್ಪಿ ಸುಜಿತ್ ಶಂಕರ್ ಅವರು, Dharmasthala ಪ್ರಕರಣದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ತನಿಖೆ ಮುಂದುವರಿದಿದೆ.
ಯುವತಿಯ (Women) ಕುಟುಂಬಸ್ಥರ ಹಲ್ಲೆಯ ವಿಡಿಯೋ :
“8 दिन तक बनाया बंधक युवती के प्रेमी को, और परिवार संग निर्दयता से लटका कर पीटते रहे नाबालिग को।”
आपके संज्ञान के लिए @KanoongoPriyank ji #Rajasthan #Jhalawar @NCPCR_ @JhalawarPolice @PoliceRajasthan pic.twitter.com/Vn1blAMFNq— Sujeet Swami️ (@shibbu87) February 19, 2025
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.