ಶುಕ್ರವಾರ, ಜನವರಿ 2, 2026

Janaspandhan News

HomeGeneral Newsಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ toll-plaza ಸಿಬ್ಬಂದಿ ; 4 ಜನರ ಬಂಧನ.!
spot_img
spot_img
spot_img

ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ toll-plaza ಸಿಬ್ಬಂದಿ ; 4 ಜನರ ಬಂಧನ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಓರ್ವ ಯೋಧನನ್ನು ಕಂಬಕ್ಕೆ ಕಟ್ಟಿ ಹಾಕಿ ಟೋಲ್ ಪ್ಲಾಜಾ (toll-plaza) ಸಿಬ್ಬಂದಿ ಥಳಿಸಿದ ಅಮಾನವೀಯ ಘಟನೆಯೊಂದು ಉತ್ತರಪ್ರದೆಶದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಉತ್ತರ ಪ್ರದೇಶದ ಮೀರತ್‌ನಲ್ಲಿ ಸೇನಾ ಯೋಧನ ಮೇಲೆ ನಡೆದ ಹಲ್ಲೆಯ ಘಟನೆ ಆತಂಕ ಮೂಡಿಸಿದೆ. ಟೋಲ್ ಪ್ಲಾಜಾ (toll-plaza) ಬಳಿ ಉಂಟಾದ ವಾಗ್ವಾದದ ವೇಳೆ ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

POCSO : ರಾಜ್ಯದಲ್ಲಿ 3 ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ.!

ಮೀರತ್‌ನ ಟೋಲ್ ಪ್ಲಾಜಾ (toll-plaza) ದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಯೋಧನನ್ನು ಕಪಿಲ್ ಕವಾಡ್ (Kapil, an Indian Army Soldier) ಎಂದು ಗುರುತಿಸಲಾಗಿದ್ದು, ಅವರು ಭಾರತೀಯ ಸೇನೆಯ ರಾಜಪೂತ ರೆಜಿಮೆಂಟ್‌ನ ಸದಸ್ಯರಾಗಿದ್ದಾರೆ.

ಮಾಹಿತಿ ಪ್ರಕಾರ, ಕಪಿಲ್ ರಜೆ ಮುಗಿಸಿಕೊಂಡು ಶ್ರೀನಗರದಲ್ಲಿರುವ ಕರ್ತವ್ಯದ ಸ್ಥಳಕ್ಕೆ ಮರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಟೋಲ್ ಪ್ಲಾಜಾ (toll-plaza) ದಲ್ಲಿ ವಾಹನ ಸಿಲುಕಿಕೊಂಡ ಕಾರಣ, ವಿಮಾನಕ್ಕೆ ತಡವಾಗುವ ಆತಂಕದಿಂದ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದಾಗ ವಾಗ್ವಾದ ಉಂಟಾಯಿತು.

Exclusive photo reveal : ಅರೆಸ್ಟ್ ಆದ್ಮೇಲೆ ದರ್ಶನ್-ಪವಿತ್ರಾಗೌಡ ಹೇಗಿದ್ದಾರೆ ನೋಡಿ.!

ವಾಗ್ವಾದ ತೀವ್ರಗೊಂಡು, ಟೋಲ್ ಪ್ಲಾಜಾ (toll-plaza) ದ ಐವರು ಸಿಬ್ಬಂದಿ ಕಪಿಲ್ ಹಾಗೂ ಅವರ ಸಂಬಂಧಿಯ ಮೇಲೆ ದಾಳಿ ನಡೆಸಿದ್ದಾರೆ. ದೊಣ್ಣೆಯಿಂದ ಹೊಡೆದಿರುವುದು ಮಾತ್ರವಲ್ಲದೆ, ಯೋಧನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ವೈರಲ್ ಆಗಿವೆ.

ಈ ಘಟನೆ ದೇಶಾದ್ಯಂತ ಆಕ್ರೋಶ ಮೂಡಿಸಿದ್ದು, ಪೊಲೀಸರ ತಕ್ಷಣದ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಹಲ್ಲೆ ಮಾಡಿದ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ toll-plaza ಸಿಬ್ಬಂದಿ ವಿಡಿಯೋ :

https://twitter.com/i/status/1957280075033780705

toll-plaza : A toll road, also known as a turnpike or tollway, is a public or private road for which a fee (or toll) is assessed for passage. It is a form of road pricing typically implemented to help recoup the costs of road construction and maintenance.

ಮೂತ್ರನಾಳದ ಸೋಂಕು (UTI) : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳು.!

uti

ಜನಸ್ಪಂದನ ನ್ಯೂಸ್‌, ಆರೋಗ್ಯ : ಮಾನವನ ದೇಹವು ಆರೋಗ್ಯವಾಗಿರಬೇಕಾದರೆ ಮೂತ್ರನಾಳದ ಸೋಂಕು (UTI) ಆಗದಂತೆ ನೋಡಿಕೊಳ್ಳಬೇಕು. ಬನ್ನಿ ಇಂದು ಮೂತ್ರನಾಳದ ಸೋಂಕು (UTI) ಗೆ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳ ಬಗ್ಗೆ ತಿಳಿಯೋಣ.!

ಮಾನವನ ದೇಹದ ಮೂತ್ರಜನಕಾಂಗ ವ್ಯವಸ್ಥೆ ಮುಖ್ಯವಾಗಿ ಮೂತ್ರಪಿಂಡ, ಮೂತ್ರನಾಳಗಳು, ಮೂತ್ರಕೋಶ ಮತ್ತು ಮೂತ್ರನಳ್ಳಿಗಳಿಂದ ರೂಪುಗೊಂಡಿದೆ. ಈ ಅಂಗಾಂಗಗಳ ಪ್ರಮುಖ ಕಾರ್ಯ ದೇಹದಲ್ಲಿರುವ ತ್ಯಾಜ್ಯವನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುವುದು.

Bribe : ಲಂಚ ಸ್ವೀಕರಿಸುತ್ತಿದ್ದ ವೇಳೆ PI, PSI ಸೇರಿ 3 ಜನರ ಬಂಧನ.!
ಮೂತ್ರನಾಳದ ಸೋಂಕು (UTI) ಎಂದರೇನು?

ಮೂತ್ರಜನಕಾಂಗ ವ್ಯವಸ್ಥೆಯ ಯಾವುದೇ ಭಾಗದಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳ ಪ್ರವೇಶದಿಂದ ಉಂಟಾಗುವ ಅಸ್ವಸ್ಥತೆಯನ್ನು ಮೂತ್ರನಾಳದ ಸೋಂಕು (UTI) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಸೋಂಕು ಮೂತ್ರಕೋಶ ಮತ್ತು ಮೂತ್ರನಳ್ಳಿಯಲ್ಲೇ ಹೆಚ್ಚು ಕಂಡುಬರುತ್ತದೆ.

ಎಷ್ಟು ಸಾಮಾನ್ಯ?

ಇದು ಇಂದಿನ ಜೀವನಶೈಲಿಯಲ್ಲಿ ಅತ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ.

  • ಮಹಿಳೆಯರಲ್ಲಿ ಸುಮಾರು 50% ಜನರು ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿ ಈ ಸೋಂಕಿಗೆ ಒಳಗಾಗುತ್ತಾರೆ.
  • ಪುರುಷರಲ್ಲಿ ಇದರ ಪ್ರಮಾಣ ಕಡಿಮೆ ಇದ್ದರೂ, ಸುಮಾರು 12% ಪುರುಷರು ಜೀವನದಲ್ಲಿ ಕನಿಷ್ಠ ಒಂದು ಬಾರಿ ಇದನ್ನು ಅನುಭವಿಸುತ್ತಾರೆ.
  • ಮಕ್ಕಳಲ್ಲಿ ಇದು ಅಪರೂಪವಾಗಿದ್ದು, ಕೇವಲ 1-2% ಮಕ್ಕಳಿಗೆ ಮಾತ್ರ ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುತ್ತದೆ.
Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!
ಮೂತ್ರನಾಳದ ಸೋಂಕಿ (UTI) ನ ಮುಖ್ಯ ಲಕ್ಷಣಗಳು :
  • ಮೂತ್ರ ಮಾಡುವಾಗ ಉರಿಯೂತ ಅಥವಾ ನೋವು
  • ಆಗಾಗ ಮೂತ್ರ ವಿಸರ್ಜನೆ ಮಾಡುವ ಅಗತ್ಯ
  • ದುರ್ವಾಸನೆಯ ಮೂತ್ರ
  • ಮೂತ್ರದಲ್ಲಿ ರಕ್ತದ ಚಿಹ್ನೆಗಳು
  • ಹೊಟ್ಟೆಯ ಕೆಳಭಾಗ, ಬೆನ್ನು ಅಥವಾ ಸೊಂಟದಲ್ಲಿ ನೋವು
  • ಜ್ವರ, ಚಳಿ ಅಥವಾ ನಿಶ್ಶಕ್ತಿ ಅನುಭವ
  • ಮಕ್ಕಳಲ್ಲಿ ಹಸಿವು ಕಡಿಮೆಯಾಗುವುದು ಮತ್ತು ಆಲಸ್ಯ
ಮೂತ್ರನಾಳದ ಸೋಂಕು (UTI) ಪತ್ತೆಹಚ್ಚುವುದು ಹೇಗೆ?

ವೈದ್ಯಕೀಯ ಮಾಹಿತಿ, ದೈಹಿಕ ಪರೀಕ್ಷೆ, ಮೂತ್ರ ಮತ್ತು ರಕ್ತ ಪರೀಕ್ಷೆ, ಜೊತೆಗೆ ಅಲ್ಟ್ರಾಸೌಂಡ್ ಪರೀಕ್ಷೆ ಮೂಲಕ ಸೋಂಕು ದೃಢಪಡಿಸಲಾಗುತ್ತದೆ.

ಮೂತ್ರನಾಳದ ಸೋಂಕಿ (UTI) ಗೆ ಕಾರಣಗಳು :
  • ಸಮರ್ಪಕ ಸ್ವಚ್ಛತೆಯ ಕೊರತೆ
  • ಸಾಕಷ್ಟು ನೀರು ಕುಡಿಯದಿರುವುದು
  • ಹೆಚ್ಚು ಸಮಯ ಮೂತ್ರವನ್ನು ತಡೆದಿಡುವುದು
  • ಗರ್ಭಾವಸ್ಥೆಯ ಹಾರ್ಮೋನ್ ಬದಲಾವಣೆಗಳು
  • ಸಾರ್ವಜನಿಕ ಶೌಚಾಲಯಗಳ ಬಳಕೆ
  • ಬಿಗಿಯಾದ ಅಥವಾ ಸಿಂಥೆಟಿಕ್ ಒಳಉಡುಪು ಧರಿಸುವುದು
  • ನಿಯಂತ್ರಣವಿಲ್ಲದ ಮಧುಮೇಹ
  • ವಯೋಸಹಜ ಪ್ರೋಸ್ಟೇಟ್ ಸಮಸ್ಯೆ (ಪುರುಷರಲ್ಲಿ)
  • ಮೂತ್ರಕೋಶಕ್ಕೆ ಕೊಳವೆ (ಕ್ಯಾಥೆಟರ್) ಹಾಕಿದಾಗ
  • ಮೂತ್ರಕಲ್ಲುಗಳು ಅಥವಾ ಅಡಚಣೆಗಳು
  • ಲೈಂಗಿಕ ಚಟುವಟಿಕೆ ನಂತರ ಮೂತ್ರನಾಳಕ್ಕೆ ಸೋಂಕು ಹರಡುವುದು
ಈ ಲಕ್ಷಣಗಳು ಕಾಣಿಸಿಕೊಂಡರೆ ಅದು ರಕ್ತನಾಳಗಳು Blocked ಆಗಿರುವ ಎಚ್ಚರಿಕೆ.!
ಮೂತ್ರನಾಳದ ಸೋಂಕು (UTI) ತಡೆಗಟ್ಟುವ ಮಾರ್ಗಗಳು :
  • ದಿನಕ್ಕೆ ಕನಿಷ್ಠ 2.5 ಲೀಟರ್ ನೀರು ಕುಡಿಯುವುದು
  • ಶೌಚಾಲಯ ಬಳಸಿ ಮುಗಿದ ಬಳಿಕ ಮುಂಭಾಗದಿಂದ ಹಿಂಭಾಗಕ್ಕೆ ಸ್ವಚ್ಛತೆ ಕಾಪಾಡುವುದು
  • ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವುದು
  • ಸಾರ್ವಜನಿಕ ಶೌಚಾಲಯ ಬಳಸುವಾಗ ಮುನ್ನೆಚ್ಚರಿಕೆ ವಹಿಸುವುದು
  • ಹತ್ತಿಯ ಒಳ ಉಡುಪು ಧರಿಸುವುದು ಮತ್ತು ಸಿಂಥೆಟಿಕ್ ಬಟ್ಟೆಗಳನ್ನು ತಪ್ಪಿಸುವುದು
  • ಒಳ ಉಡುಪುಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸುವುದು
  • ತುರ್ತು ಸ್ಥಿತಿಯಲ್ಲಿ ಮೂತ್ರ ತಡೆದಿಡದೆ ತಕ್ಷಣ ವಿಸರ್ಜನೆ ಮಾಡುವುದು
  • ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ ಮಾಡಿ, ಭಾಗಗಳನ್ನು ಸ್ವಚ್ಛಗೊಳಿಸುವುದು
  • ಮಕ್ಕಳಿಗೆ ಶೌಚದ ಸ್ವಚ್ಛತೆಯ ಅಭ್ಯಾಸ ಕಲಿಸುವುದು
  • ಮಸಾಲೆಯುಕ್ತ, ಎಣ್ಣೆಯುಕ್ತ, ಹೆಚ್ಚು ಸಕ್ಕರೆ ಇರುವ ಆಹಾರ ಹಾಗೂ ಮದ್ಯಪಾನ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ನಿಯಂತ್ರಿಸುವುದು
  • ಸುಗಂಧ ದ್ರವ್ಯಗಳು ಅಥವಾ ರಾಸಾಯನಿಕ ಇರುವ ಉತ್ಪನ್ನಗಳನ್ನು ಗುಪ್ತಾಂಗಗಳ ಬಳಿ ಬಳಸುವುದನ್ನು ತಪ್ಪಿಸುವುದು

ಸಂಪಾದಕೀಯ : ಮೂತ್ರನಾಳದ ಸೋಂಕು Kapil, an Indian Army Soldier) ಸಾಮಾನ್ಯವಾದರೂ, ಸರಿಯಾದ ಸ್ವಚ್ಛತೆ, ಸಮರ್ಪಕ ನೀರಿನ ಸೇವನೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಇದನ್ನು ತಡೆಗಟ್ಟಬಹುದು. ಸಮಸ್ಯೆ ಗಂಭೀರವಾಗಿ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments