ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟದಲ್ಲಿ ಇಂದು ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ದೇವಾಲಯದ ಮುಖ್ಯ ಅರ್ಚಕ ಸೇರಿ ಇಬ್ಬರು ಸಾವನ್ನಪ್ಪಿದ್ದು, ನಾಲ್ಕು ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಅಪಘಾತವು ಮುಳ್ಳೂರ ಘಾಟದ ಶಿವನ ಮೂರ್ತಿ ಬಳಿ ಸಂಭವಿಸಿದ್ದು, ಹಾವೇರಿಯಿಂದ ಬೆಳಗಾವಿ (Belagavi) ಯ ರಾಮದುರ್ಗದತ್ತ ಬರುತ್ತಿದ್ದ ಗೂಡ್ಸ್ ವಾಹನವು ನಿಯಂತ್ರಣ ತಪ್ಪಿ ದೇವಸ್ಥಾನಕ್ಕೆ ಹೊರಟಿದ್ದ ಅರ್ಚಕ ಸವಾರಿಯಲ್ಲಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.
ಮಳೆಗಾಲದಲ್ಲಿ ಬಟ್ಟೆಗಳಿಂದ bad-smell ಬರುತ್ತಿದೆಯೇ? ಈ 3 ಮನೆಮದ್ದುಗಳಿಂದ 5 ನಿಮಿಷದಲ್ಲಿ ಪರಿಹಾರ.!
ಪರಿಣಾಮವಾಗಿ, ಶಿವಲಿಂಗ ದೇವಸ್ಥಾನದ ಮುಖ್ಯ ಅರ್ಚಕ ವಿಜಯಕುಮಾರ್ ಘೋಡಬೋಲೆ (55) ಹಾಗೂ ಗೂಡ್ಸ್ ವಾಹನದ ಚಾಲಕ ಅನಿಲ್ ರಮೇಶ ಬಿರಾದಾರ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ತೀವ್ರತೆಗೆ ವಾಹನ ಪಲ್ಟಿಯಾಗಿದ್ದು, ಸ್ಥಳದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ರಾಮದುರ್ಗ (Belagavi) ಡಿವೈಎಸ್ಪಿ ಚಿದಂಬರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
Courtesy : Zee News Kannada
ಮೂತ್ರನಾಳದ ಸೋಂಕು (UTI) : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳು.!
ಜನಸ್ಪಂದನ ನ್ಯೂಸ್, ಆರೋಗ್ಯ : ಮಾನವನ ದೇಹವು ಆರೋಗ್ಯವಾಗಿರಬೇಕಾದರೆ ಮೂತ್ರನಾಳದ ಸೋಂಕು (UTI) ಆಗದಂತೆ ನೋಡಿಕೊಳ್ಳಬೇಕು. ಬನ್ನಿ ಇಂದು ಮೂತ್ರನಾಳದ ಸೋಂಕು (UTI) ಗೆ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳ ಬಗ್ಗೆ ತಿಳಿಯೋಣ.!
ಮಾನವನ ದೇಹದ ಮೂತ್ರಜನಕಾಂಗ ವ್ಯವಸ್ಥೆ ಮುಖ್ಯವಾಗಿ ಮೂತ್ರಪಿಂಡ, ಮೂತ್ರನಾಳಗಳು, ಮೂತ್ರಕೋಶ ಮತ್ತು ಮೂತ್ರನಳ್ಳಿಗಳಿಂದ ರೂಪುಗೊಂಡಿದೆ. ಈ ಅಂಗಾಂಗಗಳ ಪ್ರಮುಖ ಕಾರ್ಯ ದೇಹದಲ್ಲಿರುವ ತ್ಯಾಜ್ಯವನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುವುದು.
Bribe : ಲಂಚ ಸ್ವೀಕರಿಸುತ್ತಿದ್ದ ವೇಳೆ PI, PSI ಸೇರಿ 3 ಜನರ ಬಂಧನ.!
ಮೂತ್ರನಾಳದ ಸೋಂಕು (UTI) ಎಂದರೇನು?
ಮೂತ್ರಜನಕಾಂಗ ವ್ಯವಸ್ಥೆಯ ಯಾವುದೇ ಭಾಗದಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳ ಪ್ರವೇಶದಿಂದ ಉಂಟಾಗುವ ಅಸ್ವಸ್ಥತೆಯನ್ನು ಮೂತ್ರನಾಳದ ಸೋಂಕು (UTI) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಸೋಂಕು ಮೂತ್ರಕೋಶ ಮತ್ತು ಮೂತ್ರನಳ್ಳಿಯಲ್ಲೇ ಹೆಚ್ಚು ಕಂಡುಬರುತ್ತದೆ.
ಎಷ್ಟು ಸಾಮಾನ್ಯ?
ಇದು ಇಂದಿನ ಜೀವನಶೈಲಿಯಲ್ಲಿ ಅತ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ.
- ಮಹಿಳೆಯರಲ್ಲಿ ಸುಮಾರು 50% ಜನರು ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿ ಈ ಸೋಂಕಿಗೆ ಒಳಗಾಗುತ್ತಾರೆ.
- ಪುರುಷರಲ್ಲಿ ಇದರ ಪ್ರಮಾಣ ಕಡಿಮೆ ಇದ್ದರೂ, ಸುಮಾರು 12% ಪುರುಷರು ಜೀವನದಲ್ಲಿ ಕನಿಷ್ಠ ಒಂದು ಬಾರಿ ಇದನ್ನು ಅನುಭವಿಸುತ್ತಾರೆ.
- ಮಕ್ಕಳಲ್ಲಿ ಇದು ಅಪರೂಪವಾಗಿದ್ದು, ಕೇವಲ 1-2% ಮಕ್ಕಳಿಗೆ ಮಾತ್ರ ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುತ್ತದೆ.
Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!
ಮೂತ್ರನಾಳದ ಸೋಂಕಿ (UTI) ನ ಮುಖ್ಯ ಲಕ್ಷಣಗಳು :
- ಮೂತ್ರ ಮಾಡುವಾಗ ಉರಿಯೂತ ಅಥವಾ ನೋವು
- ಆಗಾಗ ಮೂತ್ರ ವಿಸರ್ಜನೆ ಮಾಡುವ ಅಗತ್ಯ
- ದುರ್ವಾಸನೆಯ ಮೂತ್ರ
- ಮೂತ್ರದಲ್ಲಿ ರಕ್ತದ ಚಿಹ್ನೆಗಳು
- ಹೊಟ್ಟೆಯ ಕೆಳಭಾಗ, ಬೆನ್ನು ಅಥವಾ ಸೊಂಟದಲ್ಲಿ ನೋವು
- ಜ್ವರ, ಚಳಿ ಅಥವಾ ನಿಶ್ಶಕ್ತಿ ಅನುಭವ
- ಮಕ್ಕಳಲ್ಲಿ ಹಸಿವು ಕಡಿಮೆಯಾಗುವುದು ಮತ್ತು ಆಲಸ್ಯ
ಮೂತ್ರನಾಳದ ಸೋಂಕು (UTI) ಪತ್ತೆಹಚ್ಚುವುದು ಹೇಗೆ?
ವೈದ್ಯಕೀಯ ಮಾಹಿತಿ, ದೈಹಿಕ ಪರೀಕ್ಷೆ, ಮೂತ್ರ ಮತ್ತು ರಕ್ತ ಪರೀಕ್ಷೆ, ಜೊತೆಗೆ ಅಲ್ಟ್ರಾಸೌಂಡ್ ಪರೀಕ್ಷೆ ಮೂಲಕ ಸೋಂಕು ದೃಢಪಡಿಸಲಾಗುತ್ತದೆ.
ಮೂತ್ರನಾಳದ ಸೋಂಕಿ (UTI) ಗೆ ಕಾರಣಗಳು :
- ಸಮರ್ಪಕ ಸ್ವಚ್ಛತೆಯ ಕೊರತೆ
- ಸಾಕಷ್ಟು ನೀರು ಕುಡಿಯದಿರುವುದು
- ಹೆಚ್ಚು ಸಮಯ ಮೂತ್ರವನ್ನು ತಡೆದಿಡುವುದು
- ಗರ್ಭಾವಸ್ಥೆಯ ಹಾರ್ಮೋನ್ ಬದಲಾವಣೆಗಳು
- ಸಾರ್ವಜನಿಕ ಶೌಚಾಲಯಗಳ ಬಳಕೆ
- ಬಿಗಿಯಾದ ಅಥವಾ ಸಿಂಥೆಟಿಕ್ ಒಳಉಡುಪು ಧರಿಸುವುದು
- ನಿಯಂತ್ರಣವಿಲ್ಲದ ಮಧುಮೇಹ
- ವಯೋಸಹಜ ಪ್ರೋಸ್ಟೇಟ್ ಸಮಸ್ಯೆ (ಪುರುಷರಲ್ಲಿ)
- ಮೂತ್ರಕೋಶಕ್ಕೆ ಕೊಳವೆ (ಕ್ಯಾಥೆಟರ್) ಹಾಕಿದಾಗ
- ಮೂತ್ರಕಲ್ಲುಗಳು ಅಥವಾ ಅಡಚಣೆಗಳು
- ಲೈಂಗಿಕ ಚಟುವಟಿಕೆ ನಂತರ ಮೂತ್ರನಾಳಕ್ಕೆ ಸೋಂಕು ಹರಡುವುದು
ಈ ಲಕ್ಷಣಗಳು ಕಾಣಿಸಿಕೊಂಡರೆ ಅದು ರಕ್ತನಾಳಗಳು Blocked ಆಗಿರುವ ಎಚ್ಚರಿಕೆ.!
ಮೂತ್ರನಾಳದ ಸೋಂಕು (UTI) ತಡೆಗಟ್ಟುವ ಮಾರ್ಗಗಳು :
- ದಿನಕ್ಕೆ ಕನಿಷ್ಠ 2.5 ಲೀಟರ್ ನೀರು ಕುಡಿಯುವುದು
- ಶೌಚಾಲಯ ಬಳಸಿ ಮುಗಿದ ಬಳಿಕ ಮುಂಭಾಗದಿಂದ ಹಿಂಭಾಗಕ್ಕೆ ಸ್ವಚ್ಛತೆ ಕಾಪಾಡುವುದು
- ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವುದು
- ಸಾರ್ವಜನಿಕ ಶೌಚಾಲಯ ಬಳಸುವಾಗ ಮುನ್ನೆಚ್ಚರಿಕೆ ವಹಿಸುವುದು
- ಹತ್ತಿಯ ಒಳ ಉಡುಪು ಧರಿಸುವುದು ಮತ್ತು ಸಿಂಥೆಟಿಕ್ ಬಟ್ಟೆಗಳನ್ನು ತಪ್ಪಿಸುವುದು
- ಒಳ ಉಡುಪುಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸುವುದು
- ತುರ್ತು ಸ್ಥಿತಿಯಲ್ಲಿ ಮೂತ್ರ ತಡೆದಿಡದೆ ತಕ್ಷಣ ವಿಸರ್ಜನೆ ಮಾಡುವುದು
- ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ ಮಾಡಿ, ಭಾಗಗಳನ್ನು ಸ್ವಚ್ಛಗೊಳಿಸುವುದು
- ಮಕ್ಕಳಿಗೆ ಶೌಚದ ಸ್ವಚ್ಛತೆಯ ಅಭ್ಯಾಸ ಕಲಿಸುವುದು
- ಮಸಾಲೆಯುಕ್ತ, ಎಣ್ಣೆಯುಕ್ತ, ಹೆಚ್ಚು ಸಕ್ಕರೆ ಇರುವ ಆಹಾರ ಹಾಗೂ ಮದ್ಯಪಾನ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ನಿಯಂತ್ರಿಸುವುದು
- ಸುಗಂಧ ದ್ರವ್ಯಗಳು ಅಥವಾ ರಾಸಾಯನಿಕ ಇರುವ ಉತ್ಪನ್ನಗಳನ್ನು ಗುಪ್ತಾಂಗಗಳ ಬಳಿ ಬಳಸುವುದನ್ನು ತಪ್ಪಿಸುವುದು
ಸಂಪಾದಕೀಯ : ಮೂತ್ರನಾಳದ ಸೋಂಕು (UTI) ಸಾಮಾನ್ಯವಾದರೂ, ಸರಿಯಾದ ಸ್ವಚ್ಛತೆ, ಸಮರ್ಪಕ ನೀರಿನ ಸೇವನೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಇದನ್ನು ತಡೆಗಟ್ಟಬಹುದು. ಸಮಸ್ಯೆ ಗಂಭೀರವಾಗಿ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.