Wednesday, September 17, 2025

Janaspandhan News

HomeBelagavi NewsKills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!
spot_img
spot_img
spot_img

Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬಳು ತನ್ನಿಂದ ದೂರವಾದ ಹಿನ್ನೆಲೆಯಲ್ಲಿ ಕೋಪಗೊಂಡು ಆಕೆಯನ್ನೇ ಕೊಲೆ (Kill /Murder) ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಘಟನೆಯಲ್ಲಿ ಕೊಲೆಯಾದ (Kill) ವಿವಾಹಿತೆynfnu ರೇಶ್ಮಾ (29) ಎಂದು, ಆನಂದ ಸುತಾರ (31) ಆತ್ಮಹತ್ಯೆಗೆ ಶರಣಾದ ಕೊಲೆ ಆರೋಪಿ ವ್ಯಕ್ತಿ ಎಂದು ಗುರುತಿಸಲಾಗಿದೆ.

Coaching ಸೆಂಟರ್‌ನಲ್ಲಿ ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅಸಭ್ಯ ವರ್ತನೆ ; ವಿಡಿಯೋ ವೈರಲ್.!
ಘಟನೆ ಹೇಗೆ ನಡೆದಿದೆ?

ಆನಂದ-ರೇಶ್ಮಾ ಇವರಿಬ್ಬರು ಒಂದೇ ಗ್ರಾಮದವರಾಗಿದ್ದು ಇಬ್ಬರ ನಡುವೆ ಮೊದಲಿನಿಂದಲೂ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ ಇವರಿಬ್ಬರೂ ವಿವಾಹಿತರಾಗಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ. ರೇಶ್ಮಾ ವಿವಾಹಿತೆ ಎಂದು ಗೊತ್ತಿದ್ದರೂ ಆನಂದ ಅವಳ ಜೊತೆ ಸಂಬಂಧವನ್ನು ಮುಂದುವರೆಸಿದ್ದ.

ಇವರಿಬ್ಬರೂ ಮೇಲಿಂದ ಮೇಲೆ ಭೇಟಿಯಾಗುತ್ತಿದ್ದರು ಮತ್ತು ಮೊಬೈಲ್ ನಲ್ಲಿ ದಿನನಿತ್ಯ ಮಾತಾಡುತ್ತಿದ್ದರು. ರೇಶ್ಮಾಳ ಮನೆಗೆ ಆನಂದ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ರೇಶ್ಮಾ ಮತ್ತು ಆನಂದ ಅವರ ಸಂಬಂಧದ ವಿಷಯ ರೇಶ್ಮಾಳ ಪತಿಗೆ ಕೆಲ ದಿನಗಳ ಹಿಂದೆ ತಿಳಿದಿದೆ.

ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!

ರೇಶ್ಮಾಳ ಪತಿ ಈ ಸಂಬಂಧದ ಬಗ್ಗೆ ಹಿರಿಯರ ಮೂಲಕ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಆನಂದನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ, ರೇಶ್ಮಾಳ ಜೀವನದಲ್ಲಿ ತೊಂದರೆ ಮಾಡಬಾರದೆಂದು ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಬಿಡಿಸಿದ್ದರು. ಈ ಘಟನೆ ಬಳಿಕ ರೇಶ್ಮಾ ಮತ್ತು ಆನಂದ ಹಲವಾರು ದಿನಗಳ ಕಾಲ ಪರಸ್ಪರ ಸಂಪರ್ಕದಲ್ಲಿರಲಿಲ್ಲ.

ಇದರಿಂದ ಅಸಮಾಧಾನಗೊಂಡ ಆನಂದ, ಶುಕ್ರವಾರ ರೇಶ್ಮಾಳ ಮನೆಯಲ್ಲಿ ನುಗ್ಗಿ ಚಾಕುವಿನಿಂದ ಹೊಟ್ಟೆ ಮತ್ತು ಎದೆಗೆ  9 ಬಾರಿ ಇರಿದು ಹತ್ಯೆ (Kill /Murder)ಗೈದಿದ್ದಾನೆ.

ಸ್ವಾತಂತ್ರ್ಯೋತ್ಸವ ದಿನವೇ PSI ಪತ್ನಿ ಆತ್ಮಹತ್ಯೆ.!
ಆತ್ಮಹತ್ಯೆಗೆ ಶರಣಾದ ಆನಂದ :

ಪ್ರೇಯಸಿಯನ್ನು ಹತ್ಯೆ (Kill /Murder) ಗೈದ ನಂತರ ಆನಂದ ತಾನೂ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದನು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ನಂದಗಡ ಪೊಲೀಸ್ ಠಾಣೆ ಮಾಹಿತಿ ನೀಡಿದೆ.

ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ.


Coaching ಸೆಂಟರ್‌ನಲ್ಲಿ ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅಸಭ್ಯ ವರ್ತನೆ ; ವಿಡಿಯೋ ವೈರಲ್.!

coaching

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬಿಹಾರದ ಮಧುಬನಿ ಜಿಲ್ಲೆಯ ಜೈನಗರ ಪ್ರದೇಶದಲ್ಲಿ ಕೋಚಿಂಗ್ (Coaching) ಸೆಂಟರ್‌ನಲ್ಲಿ ನಡೆದ ಅಸಭ್ಯ ವರ್ತನೆಯ ಪ್ರಕರಣ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಕೋಚಿಂಗ್ (Coaching) ಸೆಂಟರ್‌ನೊಬ್ಬ ಶಿಕ್ಷಕ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಕಾಣಿಸಿಕೊಂಡಿದೆ.

ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!

ಈ ಘಟನೆ ಜೈನಗರದ ಭೇಲ್ವಾ ಚೌಕ್ ಸಮೀಪದ ಕೋಚಿಂಗ್ (Coaching) ಸಂಸ್ಥೆಯಲ್ಲಿ ನಡೆದಿದ್ದು, ಆರೋಪಿಯ ಹೆಸರನ್ನು ರಾಕೇಶ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಇದೇ ವ್ಯಕ್ತಿಯ ಮೇಲೆ ಇದೇ ರೀತಿಯ ಆರೋಪ ಮೊದಲು ಕೂಡ ಕೇಳಿಬಂದಿದೆ.

ಸ್ಥಳೀಯರು ಆರೋಪಿಯನ್ನು ತಕ್ಷಣ ಬಂಧಿಸುವಂತೆ ಹಾಗೂ ಸಂಬಂಧಿಸಿದ ತರಬೇತಿ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಪೋಷಕರು ಮಕ್ಕಳಿಗೆ ಜಾಗೃತಿ ಮೂಡಿಸಿ, ಅವರ ಸುರಕ್ಷತೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.

Student : ಕೇವಲ 2 ಅಂಕ ಕಡಿಮೆ ನೀಡಿದಕ್ಕೆ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಹಲ್ಲೆ ; ಸಿಸಿಟಿವಿ ದೃಶ್ಯ ವೈರಲ್!”

ಪೊಲೀಸರು ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಪ್ರಸ್ತುತ ಆರೋಪಿಯು ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಸಂಬಂಧಿತ ಕೋಚಿಂಗ್ (Coaching) ಸೆಂಟರ್ ತನ್ನ ಸ್ಥಳವನ್ನು ಬದಲಾಯಿಸಿರುವುದಾಗಿ ತಿಳಿದುಬಂದಿದೆ.

ಕೋಚಿಂಗ್ (Coaching) ಸೆಂಟರ್‌ನಲ್ಲಿ ನಡೆದ ಅಸಭ್ಯ ವರ್ತನೆಯ ವಿಡಿಯೋ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments