Wednesday, September 17, 2025

Janaspandhan News

HomeCrime Newsಸ್ವಾತಂತ್ರ್ಯೋತ್ಸವ ದಿನವೇ PSI ಪತ್ನಿ ಆತ್ಮಹತ್ಯೆ.!
spot_img
spot_img
spot_img

ಸ್ವಾತಂತ್ರ್ಯೋತ್ಸವ ದಿನವೇ PSI ಪತ್ನಿ ಆತ್ಮಹತ್ಯೆ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬಳ್ಳಾರಿ ಜಿಲ್ಲೆಯ ಮೋಕಾ ಪೊಲೀಸ್ ಠಾಣೆಯ ಪಿಎಸ್‌ಐ (PSI) ಕಾಳಿಂಗ ಅವರ ಪತ್ನಿ ಚೈತ್ರಾ (36) ಅವರು ಸ್ವಾತಂತ್ರ್ಯ ದಿನದ ಬೆಳಿಗ್ಗೆ ಮನೆಯಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಚೈತ್ರಾ ಅವರ ಪತಿ (PSI) ಹಾಗೂ ಮಕ್ಕಳನ್ನು ಧ್ವಜಾರೋಹಣ ಕಾರ್ಯಕ್ರಮಕ್ಕೆ ಕಳುಹಿಸಿದ ಬಳಿಕ ಈ ದುರ್ಘಟನೆ ನಡೆದಿದೆ. ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲದಿದ್ದರೂ, ಅವರು ಇತ್ತೀಚೆಗೆ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಕುಟುಂಬ ಮೂಲಗಳಿಂದ ಲಭ್ಯವಾಗಿದೆ.

Medicine : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ ಅಪಾಯ.!

ಎರಡು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದ PSI ಪತ್ನಿ ಚೈತ್ರಾ, ಮನೆಗೆ ಮರಳಿದ ನಂತರವೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ವಾತಂತ್ರ್ಯೋತ್ಸವದ ದಿನವೇ ಸಂಭವಿಸಿದ ಈ ಘಟನೆಯಿಂದ ಕುಟುಂಬಸ್ಥರು, PSI ಬಂಧು-ಬಳಗ ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Courtesy : Suvarna News


IBPS : ದೇಶದಾದ್ಯಂತ 10,377 ಹುದ್ದೆಗಳ ಭರ್ತಿ ; ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನ.!

IBPS

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ದೇಶದಾದ್ಯಂತ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 10,377 ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಕರ್ನಾಟಕಕ್ಕೆ ಮಾತ್ರ 1,170 ಹುದ್ದೆಗಳು ಲಭ್ಯವಿವೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ IBPS ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Astrology : ಹೇಗಿದೆ ಗೊತ್ತಾ.? ಅಗಷ್ಟ 13 ರ ದ್ವಾದಶ ರಾಶಿಗಳ ಫಲಾಫಲ.!
ವೇತನ ಶ್ರೇಣಿ :
  • ಮೂಲ ವೇತನ ರೂ. 24,050/- ರಿಂದ ರೂ. 64,480/- ವರೆಗೆ ಇರುತ್ತದೆ.
  • ಇದರ ಜೊತೆಗೆ ಮನೆ ಬಾಡಿಗೆ ಭತ್ಯೆ, ತುಟ್ಟಿಭತ್ಯೆ ಹಾಗೂ ಇತರೆ ಸೌಲಭ್ಯಗಳೂ ಲಭ್ಯ.
ವಯೋಮಿತಿ :
  • 01 ಆಗಸ್ಟ್ 2025ಕ್ಕೆ ಕನಿಷ್ಠ 20 ವರ್ಷ ಹಾಗೂ
  • ಗರಿಷ್ಠ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ವಯೋಮಿತಿ ಸಡಿಲಿಕೆ :
  • ಪಜಾ ಮತ್ತು ಪಪಂ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ
  • ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಸಡಿಲಿಕೆ ಇದೆ.
 IBPS ಶೈಕ್ಷಣಿಕ ಅರ್ಹತೆ :
  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
Wild boarಗಳ ಹಿಂಡಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ್ತಿಗೆ ಗಂಭೀರ ಗಾಯ : ದೃಶ್ಯ ಸಿಸಿಟಿವಿಯಲ್ಲಿ ಸೆರೆ.!
ಅರ್ಜಿ ಶುಲ್ಕ :
  • GM, OBC ಮತ್ತು EWS ಅಭ್ಯರ್ಥಿಗಳಿಗೆ : ರೂ.850/-
  • SC, ST, PwD ಮತ್ತು ಮಾಜಿ ಸೈನಿಕರಿಗೆ : ರೂ.150/-
ಆಯ್ಕೆ ಪ್ರಕ್ರಿಯೆ :

IBPS ನೇಮಕಾತಿ ಮೂರು ಹಂತಗಳಲ್ಲಿ ನಡೆಯಲಿದೆ.

  • ಪ್ರಾಥಮಿಕ ಆನ್‌ಲೈನ್ ಪರೀಕ್ಷೆ.
  • ವಸ್ತುನಿಷ್ಠ ಪರೀಕ್ಷೆ ಮತ್ತು
  • ವಿವರಣಾತ್ಮಕ ಪರೀಕ್ಷೆ.
ಅರ್ಜಿ ಸಲ್ಲಿಸುವ ವಿಧಾನ :
  • ಅಭ್ಯರ್ಥಿಗಳು ಮೊದಲು ತಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ಸಕ್ರಿಯವಾಗಿಟ್ಟುಕೊಳ್ಳಬೇಕು.
  • ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ದಪಡಿಸಿ.
  • ನಂತರ www.ibps.in ಗೆ ಭೇಟಿ ನೀಡಿ, ‘Apply Online’ ಲಿಂಕ್ ಮೂಲಕ ನೋಂದಣಿ ಮಾಡಿ, ಅರ್ಜಿ ಭರ್ತಿ ಮಾಡಿ,
  • ದಾಖಲೆಗಳನ್ನು ಅಪ್‌ಲೋಡ್ ಮಾಡಿ ಹಾಗೂ
  • ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬೇಕು.
  • ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿಯನ್ನು ಮುದ್ರಿಸಿಟ್ಟುಕೊಳ್ಳುವುದು ಅಗತ್ಯ.
Astrology : ಹೇಗಿದೆ ಗೊತ್ತಾ.? ಅಗಷ್ಟ 14 ರ ದ್ವಾದಶ ರಾಶಿಗಳ ಫಲಾಫಲ.!
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆ ಪ್ರಾರಂಭ : 01 ಆಗಸ್ಟ್ 2025.
  • ಅರ್ಜಿ ಸಲ್ಲಿಕೆ ಕೊನೆ : 21 ಆಗಸ್ಟ್ 2025.
  • ಪ್ರಾಥಮಿಕ ಪರೀಕ್ಷೆ : ಅಕ್ಟೋಬರ್ 2025.
  • ಮುಖ್ಯ ಪರೀಕ್ಷೆ : ಅಕ್ಟೋಬರ್/ನವೆಂಬರ್ 2025.
ಪ್ರಮುಖ ಲಿಂಕ್‌ :
  • ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ www.ibps.in ಗೆ ಭೇಟಿ ನೀಡಿ.

Disclaimer : The above given information is available On online, candidates should check it properly before applying. This is for information only.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments