ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾದಲ್ಲಿ ಬ್ಯೂಟಿ ಇನ್‌ಫ್ಲುಯೆನ್ಸರ್ ಆಗಿ ಜನಪ್ರಿಯತೆ ಪಡೆದಿದ್ದ ಹಾಗೂ ಬ್ಯೂಟಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಸಂದೀಪಾ ವಿರ್ಕ್ (Sandeepa-Virk) ಅವರನ್ನು ಎನ್ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ED) ಬಂಧಿಸಿದೆ.
ತಮ್ಮ ಆಕರ್ಷಕ ಫೋಟೋಗಳು ಹಾಗೂ ಬ್ಯೂಟಿ ಸಲಹೆಗಳಿಂದ ಅಪಾರ ಫಾಲೋವರ್ಸ್ ಗಳಿಸಿದ್ದ ಸಂದೀಪಾ (Sandeepa), ಆನ್‌ಲೈನ್ ಮೂಲಕ ಬ್ಯೂಟಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು.
Student : ಕೇವಲ 2 ಅಂಕ ಕಡಿಮೆ ನೀಡಿದಕ್ಕೆ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಹಲ್ಲೆ ; ಸಿಸಿಟಿವಿ ದೃಶ್ಯ ವೈರಲ್!”
ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ, ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA) ಅನುಮೋದಿತ ಉತ್ಪನ್ನ ಎಂದು ಹೇಳಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಜೊತೆಗೆ, ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಮೂಲಕ ಆಸ್ತಿ ಹೊಂದಿರುವುದಾಗಿ ಆರೋಪಿಸಲಾಗಿದೆ.
ಮನಿ ಲಾಂಡರಿಂಗ್ ಅನುಮಾನ ವ್ಯಕ್ತವಾದ ಬಳಿಕ, ಇಡಿ ಅಧಿಕಾರಿಗಳು ಸಂದೀಪಾ (Sandeepa) ವಿರ್ಕ್ ಅವರ ವೆಬ್‌ಸೈಟ್, ಹಣಕಾಸು ವ್ಯವಹಾರಗಳು ಹಾಗೂ ಉತ್ಪನ್ನ ಮಾರಾಟದ ದಾಖಲಾತಿಗಳ ಕುರಿತು ತನಿಖೆ ನಡೆಸಿದರು. ಸಂಗ್ರಹಿಸಿದ ಸಾಕ್ಷಿಗಳ ಆಧಾರದಲ್ಲಿ Sandeepa-Virk ಅವರನ್ನು ಬಂಧನ ಮಾಡಲಾಗಿದ್ದು, ಪ್ರಸ್ತುತ ಇಡಿ ಕಸ್ಟಡಿಯಲ್ಲಿ ವಿಚಾರಣೆ ನಡೆಯುತ್ತಿದೆ.
Wild boarಗಳ ಹಿಂಡಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ್ತಿಗೆ ಗಂಭೀರ ಗಾಯ : ದೃಶ್ಯ ಸಿಸಿಟಿವಿಯಲ್ಲಿ ಸೆರೆ.!
ಇದೇ ವೇಳೆ, ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಹೊರಬಂದಿದೆ — ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಅಂಗಾರೈ ನಟರಾಜನ್ ಸೇತುರಾಮನ್ ಜೊತೆ ಸಂಪರ್ಕವಿರುವುದು ಪತ್ತೆಯಾಗಿದೆ. ಆದರೆ, ಸೇತುರಾಮನ್ ಅವರು ತಮ್ಮ ಮೇಲೆ ಇರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಅಕ್ರಮ ಹಣ ವರ್ಗಾವಣೆ ಹಾಗೂ ಉತ್ಪನ್ನ ಮಾರಾಟದಲ್ಲಿ ವಂಚನೆ ಪ್ರಕರಣದಲ್ಲಿ, ನಾಳೆ ಸಂದೀಪಾ ವಿರ್ಕ್ (Sandeepa-Virk) ಅವರನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.
Courtesy : Suvarna New
IBPS : ದೇಶದಾದ್ಯಂತ 10,377 ಹುದ್ದೆಗಳ ಭರ್ತಿ ; ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನ.!
ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ದೇಶದಾದ್ಯಂತ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 10,377 ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಕರ್ನಾಟಕಕ್ಕೆ ಮಾತ್ರ 1,170 ಹುದ್ದೆಗಳು ಲಭ್ಯವಿವೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ IBPS ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Astrology : ಹೇಗಿದೆ ಗೊತ್ತಾ.? ಅಗಷ್ಟ 13 ರ ದ್ವಾದಶ ರಾಶಿಗಳ ಫಲಾಫಲ.!
ವೇತನ ಶ್ರೇಣಿ :
- ಮೂಲ ವೇತನ ರೂ. 24,050/- ರಿಂದ ರೂ. 64,480/- ವರೆಗೆ ಇರುತ್ತದೆ.
- ಇದರ ಜೊತೆಗೆ ಮನೆ ಬಾಡಿಗೆ ಭತ್ಯೆ, ತುಟ್ಟಿಭತ್ಯೆ ಹಾಗೂ ಇತರೆ ಸೌಲಭ್ಯಗಳೂ ಲಭ್ಯ.
ವಯೋಮಿತಿ :
- 01 ಆಗಸ್ಟ್ 2025ಕ್ಕೆ ಕನಿಷ್ಠ 20 ವರ್ಷ ಹಾಗೂ
- ಗರಿಷ್ಠ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ವಯೋಮಿತಿ ಸಡಿಲಿಕೆ :
- ಪಜಾ ಮತ್ತು ಪಪಂ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ
- ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಸಡಿಲಿಕೆ ಇದೆ.
IBPS ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
Wild boarಗಳ ಹಿಂಡಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ್ತಿಗೆ ಗಂಭೀರ ಗಾಯ : ದೃಶ್ಯ ಸಿಸಿಟಿವಿಯಲ್ಲಿ ಸೆರೆ.!
ಅರ್ಜಿ ಶುಲ್ಕ :
- GM, OBC ಮತ್ತು EWS ಅಭ್ಯರ್ಥಿಗಳಿಗೆ : ರೂ.850/-
- SC, ST, PwD ಮತ್ತು ಮಾಜಿ ಸೈನಿಕರಿಗೆ : ರೂ.150/-
ಆಯ್ಕೆ ಪ್ರಕ್ರಿಯೆ :
IBPS ನೇಮಕಾತಿ ಮೂರು ಹಂತಗಳಲ್ಲಿ ನಡೆಯಲಿದೆ.
- ಪ್ರಾಥಮಿಕ ಆನ್‌ಲೈನ್ ಪರೀಕ್ಷೆ.
- ವಸ್ತುನಿಷ್ಠ ಪರೀಕ್ಷೆ ಮತ್ತು
- ವಿವರಣಾತ್ಮಕ ಪರೀಕ್ಷೆ.
ಅರ್ಜಿ ಸಲ್ಲಿಸುವ ವಿಧಾನ :
- ಅಭ್ಯರ್ಥಿಗಳು ಮೊದಲು ತಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ಸಕ್ರಿಯವಾಗಿಟ್ಟುಕೊಳ್ಳಬೇಕು.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ದಪಡಿಸಿ.
- ನಂತರ www.ibps.in ಗೆ ಭೇಟಿ ನೀಡಿ, ‘Apply Online’ ಲಿಂಕ್ ಮೂಲಕ ನೋಂದಣಿ ಮಾಡಿ, ಅರ್ಜಿ ಭರ್ತಿ ಮಾಡಿ,
- ದಾಖಲೆಗಳನ್ನು ಅಪ್‌ಲೋಡ್ ಮಾಡಿ ಹಾಗೂ
- ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬೇಕು.
- ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿಯನ್ನು ಮುದ್ರಿಸಿಟ್ಟುಕೊಳ್ಳುವುದು ಅಗತ್ಯ.
Astrology : ಹೇಗಿದೆ ಗೊತ್ತಾ.? ಅಗಷ್ಟ 14 ರ ದ್ವಾದಶ ರಾಶಿಗಳ ಫಲಾಫಲ.!
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆ ಪ್ರಾರಂಭ : 01 ಆಗಸ್ಟ್ 2025.
- ಅರ್ಜಿ ಸಲ್ಲಿಕೆ ಕೊನೆ : 21 ಆಗಸ್ಟ್ 2025.
- ಪ್ರಾಥಮಿಕ ಪರೀಕ್ಷೆ : ಅಕ್ಟೋಬರ್ 2025.
- ಮುಖ್ಯ ಪರೀಕ್ಷೆ : ಅಕ್ಟೋಬರ್/ನವೆಂಬರ್ 2025.
ಪ್ರಮುಖ ಲಿಂಕ್ :
- ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ www.ibps.in ಗೆ ಭೇಟಿ ನೀಡಿ.
Disclaimer : The above given information is available On online, candidates should check it properly before applying. This is for information only.






