ಜನಸ್ಪಂದನ ನ್ಯೂಸ್, ಬೆಂಗಳೂರು : ವ್ಯಕ್ತಿಯೋರ್ವ ಅಕ್ರಮ ಸಂಬಂಧ (Affair) ಕ್ಕೆ ಒಪ್ಪದ ಮಹಿಳೆಯ ಕುತ್ತಿಗೆಯನ್ನು ತರಕಾರಿ ಕತ್ತರಿಸುವ ಚಾಕುವಿನಿಂದ ಸೀಳಿ ಕೊಂದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆಂಬ ಸಂಶಯದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಪ್ರದೇಶದಲ್ಲಿ ಈ ದಾರುಣ ಘಟನೆ ನಡೆದಿದೆ. ಅಕ್ರಮ ಸಂಬಂಧ (Affair) ನಿರಾಕರಿಸಿದ ಮಹಿಳೆಯೊಬ್ಬರು ಹತ್ಯೆಯಾಗಿದ್ದು, ಆರೋಪಿ ನಂತರ ಆತ್ಮಹತ್ಯೆಗೆ ಶರಣಾದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನು ಓದಿ : Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?
ಮೃತ ಮಹಿಳೆಯನ್ನು ಪಶ್ಚಿಮ ಬಂಗಾಳ (WB) ಮೂಲದ ಮಂದಿರಾ ಮಂಡಲ್ (27) ಎಂದು ಗುರುತಿಸಲಾಗಿದೆ. ಹತ್ಯೆಯ ಶಂಕಿತ ವ್ಯಕ್ತಿ ಗಂಡನ ಸ್ನೇಹಿತ ಸುಮನ್ ಮಂಡಲ್ (28) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಪತಿ ಮತ್ತು ಆರೋಪಿತ ವ್ಯಕ್ತಿ ಇಬ್ಬರೂ ಈ ಹಿಂದೆ ಒಟ್ಟಾಗಿ ಅಂಡಮಾನ್ (Andaman) ನಲ್ಲಿ ಕೆಲಸ ಮಾಡುತ್ತಿದ್ದರೆಂದು ಹೇಳಲಾಗುತ್ತದೆ.
ಘಟನೆಯ ವಿವರ :
ಮಂದಿರಾ ಮಂಡಲ್ ಅವರು ಗಂಡನಿಂದ ಬೇರ್ಪಟ್ಟು ಕಳೆದ ಎರಡು ವರ್ಷಗಳಿಂದ ತಿರುಪಾಳ್ಯದಲ್ಲಿ ತಮ್ಮ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಿನ್ನೆ ಸಂಜೆಯ ವೇಳೆ ಅವರು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದರು. ಈ ವೇಳೆ ಆರೋಪಿ ಸುಮನ್ ಅವರು ಆಕೆಯ ಮನೆಗೆ ಬಂದು ಬಾಗಿಲು ಲಾಕ್ ಮಾಡಿ ಒಳಗೆ ನುಗ್ಗಿ ಅಕ್ರಮ ಸಂಬಂಧ (Affair) ಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಕೆಲ ಸಮಯದ ನಂತರ ಹೊರಗಡೆ ಆಟವಾಡುತ್ತಿದ್ದ ಮಗು ಮನೆಯ ಬಾಗಿಲು ತಟ್ಟಿದೆ. ಬಾಗಿಲು ತೆಗೆಯದ ಹಿನ್ನಲೆಯಲ್ಲಿ ಅಜ್ಜಿಯೋರ್ವಳು ಕಿಟಕಿ ಮೂಲಕ ಒಳಗೆ ನೋಡಿದಾಗ, ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಪೊಲೀಸರ ಪರಿಶೀಲನೆ ವೇಳೆ, ಮಂದಿರಾ ಮಂಡಲ್ ಅವರು ಚಾಕುವಿನಿಂದ ಕತ್ತು ಸೀಳಿ ಕೊಂದು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹತ್ಯೆಗೆ ಶಂಕಿತ (Affair) ಹಿನ್ನೆಲೆ :
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿ ಸುಮನ್ ಅವರು ಅಕ್ರಮ ಸಂಬಂಧಕ್ಕೆ (Affair) ಒಪ್ಪದ ಹಿನ್ನೆಲೆಯಲ್ಲಿ ಕೋಪಗೊಂಡು ಮನೆಯಲ್ಲೇ ಇದ್ದ ಚಾಕುವಿನಿಂದ ಮಂದಿರಾ ಅವರನ್ನು ಬರ್ಬರವಾಗಿ ಹತ್ಯೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಇದನ್ನು ಓದಿ : ಬೆಳಗಾವಿಯಲ್ಲಿ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ; maulvi ಬಂಧನ.!
ಎಂಟು ವರ್ಷದ ಹಿಂದೆ ಬಿಜೋನ್ ಮಂಡಲ್ ಜೊತೆ ಮೃತ ಮಂದಿರಾ ಮದುವೆ ಆಗಿದ್ದು 6 ವರ್ಷದ ಗಂಡು ಮಗು ಇದೆ. ಆದರೆ ಎರಡು ವರ್ಷದ ಹಿಂದೆ ಗಂಡನಿಂದ ದೂರವಾಗಿ ಇಲ್ಲಿನ ತಿರುಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.
ಪೊಲೀಸರು ತನಿಖೆ ಮುಂದುವರಿಸಿದ್ದಾರೆ :
ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆ ಅಕ್ರಮ (Affair) ಕ್ಕೆ ನಡೆದಿದೆಯೋ ಅಥವಾ ಇನ್ಯಾವುದರ ಕಾರಣಕ್ಕೆ ನಡೆದಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ತನಿಖೆ ಮುಂದುವರಿದಿದೆ. ಸದ್ಯಕ್ಕೆ ಘಟನೆಯ ಇತರೆ ಅಂಶಗಳನ್ನು ಸ್ಪಷ್ಟಪಡಿಸಲು ಪೊಲೀಸರು ಸಾಕ್ಷ್ಯ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದಾರೆ.
Leg cramp : ರಾತ್ರಿ ವೇಳೆಯಲ್ಲಿ ಕಾಲು ಸೆಳೆತವೇ.? ಇಲ್ಲಿದೆ ನುರಿತ ನರವೈದ್ಯ ಮಾಹಿತಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ರಾತ್ರಿ ಮಲಗುವಾಗ ಕಾಲು ಸೆಳೆತ (Leg cramp) ಮತ್ತು ಸ್ನಾಯು ಬಿಗಿತ ಅನುಭವಿಸುವುದು ಹಲವರಿಗೆ ಸಾಮಾನ್ಯ ಅನುಭವ. ಇದು ತೊಡೆ ಮತ್ತು ಕಾಲುಗಳ ಕೆಳ ಭಾಗದ ಸ್ನಾಯುಗಳಲ್ಲಿ ಹೆಚ್ಚು ಕಂಡುಬರುವ ನೋವಾಗಿದ್ದು, 50 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಶೇ.40ರಷ್ಟು ಮಂದಿಗೆ ಈ ರೀತಿಯ ಅಸ್ವಸ್ಥತೆ ತೀವ್ರವಾಗಿ ಅನುಭವವಾಗುತ್ತದೆ.
ಈ ಕುರಿತು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಕನ್ಸಲ್ಟೆಂಟ್ ಡಾ. ರೋಹಿತ್ ಪೈ ಮಾಹಿತಿ ನೀಡಿದ್ದು, ಸ್ನಾಯು ಸೆಳೆತ ಅಥವಾ ಕ್ರ್ಯಾಂಪ್ ಅನ್ನು ಲಘುವಾಗಿ ಕಾಣಬಾರದು ಎಂದು ಎಚ್ಚರಿಸಿದ್ದಾರೆ.
ಇದನ್ನು ಓದಿ : Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!
ಸ್ನಾಯು ಸೆಳೆತ/ಕಾಲು ಸೆಳೆತ (Leg cramp) ಕ್ಕೆ ಕಾರಣಗಳು :
- ದೈನಂದಿನ ಹೆಚ್ಚು ನಡೆಯುವುದು ಅಥವಾ ಓಡುವುದು.
- ಔಷಧಿಗಳಾದ ಬಿಟಾ ಎಗೊನಿಸ್ಟ್ಸ್ ಬಳಕೆಯಾದ ಆಸ್ತಮಾ ಅಥವಾ ಡ್ಯುರೆಟಿಕ್ಸ್ ಚಿಕಿತ್ಸೆಯ ಭಾಗವಾಗಿ.
- ನಿದ್ರಾಹೀನತೆ.
- ದೇಹದಲ್ಲಿ ನೀರಿನ ಅಸಮತೋಲನ.
- ಹೈಪೊಥೈರಾಯ್ಡಿಸಮ್ ಅಥವಾ ಹೈಪೊಕೆಲ್ಸೇಮಿಯಾ.
- ಸ್ಲಿಪ್ಡ್ ಡಿಸ್ಕ್ ಸಮಸ್ಯೆ.
- ಗರ್ಭಾವಸ್ಥೆ.
ಇದನ್ನು ಓದಿ : Rape ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಬೇಲ್ ಮೇಲೆ ಹೊರ ಬಂದ ಆರೋಪಿ.!
ವಾರದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಅಥವಾ ಪ್ರತಿದಿನ ಕಾಲು ಸೆಳೆತ (Leg cramp) ದ ಈ ಸಮಸ್ಯೆ ಕಾಡುತ್ತಿದರೆ, ಸರಿಯಾದ ಚಿಕಿತ್ಸೆ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಯಾವಾಗ ವೈದ್ಯರ ಸಲಹೆ ಅಗತ್ಯ?
ಸಾಮಾನ್ಯವಾಗಿ ಈ ಕಾಲು ಸೆಳೆತ (Leg cramp) ಸಮಸ್ಯೆ ಗಂಭೀರವಾಗಿಲ್ಲ. ಆದರೆ, ರಾತ್ರಿಯ ಕಾಲಿನಲ್ಲಿ ಇರುವ ಕಾಲು ನೋವು, ಮೊಟಾರ್ ನ್ಯೂರೋನ್ ರೋಗಗಳು ಅಥವಾ ಪೆರಿಫೆರಲ್ ನ್ಯೂರೋಪಥಿಯ ಮೊದಲ ಸೂಚನೆಯಾಗಿರುವ ಸಾಧ್ಯತೆಯೂ ಇರುತ್ತದೆ. ಕೆಲವೊಮ್ಮೆ, ನಿದ್ರಾ ಸಂಬಂಧಿತ ಪಿಎಲ್‌ಎಮ್‌ಎಸ್ ಸಮಸ್ಯೆಯಲ್ಲೂ ಇದೇ ರೀತಿಯ ತೊಂದರೆ ಉಂಟಾಗಬಹುದು. ಹೀಗಾಗಿ ನಿಖರವಾದ ನಿರ್ಧಾರಕ್ಕಾಗಿ ವೈದ್ಯರ ಸಲಹೆ ಅಗತ್ಯ.
ಇದನ್ನು ಓದಿ : Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!
ಪರಿಶೋಧನೆಗಳು ಮತ್ತು ಪರೀಕ್ಷೆಗಳು :
- ನಿದ್ರೆಯ ಗುಣಮಟ್ಟ ವಿಶ್ಲೇಷಣೆ.
- ಕ್ಯಾಲ್ಷಿಯಮ್ ಮತ್ತು ಮ್ಯಾಗ್ನೇಶಿಯಮ್ ಮಟ್ಟ ಪರೀಕ್ಷೆ.
- ಥೈರಾಯ್ಡ್ ಹಾರ್ಮೋನ್ ತಪಾಸಣೆ.
ಕಾಲು ಸೆಳೆತ (Leg cramp) ದ ಚಿಕಿತ್ಸೆಯು ಹೇಗೆ ಇರಬಹುದು?
- ನಿದ್ರೆಗೂ ಮುನ್ನ ತೂಕ ಹಾಕದ ಸ್ಟ್ರೆಚಿಂಗ್ ವ್ಯಾಯಾಮಗಳು.
- ಆಲ್ಕೋಹಾಲ್ ಮತ್ತು ಕೆಫೆನ್ ಸೇವನೆ ತಗ್ಗಿಸುವುದು.
- ಕೆಲವೊಂದು ಔಷಧಗಳು : ವಿಟಮಿನ್ E, ಗಬಾಪೆಂಟಿನ್, ಕಾರ್ಬಾಮಜೆಪೈನ್, ಹಾಗೂ ಕಠಿಣ ಸಂದರ್ಭಗಳಲ್ಲಿ ಲಿಯೋಫೆನ್.
ಇದನ್ನು ಓದಿ : Love-Case : ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ murder.!
ಕಾಲು ಸೆಳೆತ (Leg cramp) ದ ಚಿಕಿತ್ಸೆಯ ಆಯ್ಕೆ ರೋಗಿಯ ನರವೈಜ್ಞಾನಿಕ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ. ಬದಲಾಗದ ಕಾಯಿಲೆ ಅಥವಾ ನಿರಂತರ ಕಾಲು ಸೆಳೆತದಿಂದ ಬಳಲುತ್ತಿರುವವರು ಕಳಪೆ ನಿದ್ರೆಯಿಂದ ಬಳಲಬಹುದು. ಆದ್ದರಿಂದ, ಈ ಸಮಸ್ಯೆ ನಿರಂತರವಾಗಿದ್ದರೆ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಬಹುಮುಖ್ಯ.
> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.