ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಯರಗಟ್ಟಿ ಮಸೀದಿಯಲ್ಲಿ ನಡೆದಿದ್ದ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮೌಲ್ವಿ (maulvi) ಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸುಮಾರು ಎರಡು ವರ್ಷಗಳ ಹಿಂದೆ ನಡೆದಿದ್ದರೂ, ಇದೀಗ ಸಿಸಿಟಿವಿ ದೃಶ್ಯ ಮತ್ತು ಆಡಿಯೋ ಸಾಕ್ಷಿಗಳ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ (maulvi) ನನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ತುಫೇಲ್ ಅಹ್ಮದ್ ದಾದಾಫೀರ್ ನಗರ್ಚಿ (22) ಎಂದು ಗುರುತಿಸಲಾಗಿದೆ. 2023ರ ಅಕ್ಟೋಬರ್ 5ರಂದು, ಮಸೀದಿ ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಮಸೀದಿಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುಷ್ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನು ಓದಿ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”
ಪ್ರಕರಣ ನಡೆದ ಬಳಿಕ ಆರೋಪಿ, ಬಾಲಕಿಯ ಕುಟುಂಬಕ್ಕೆ ಬೆದರಿಕೆ ಹಾಕಿ ದೂರು ನೀಡದಂತೆ ಮೌಲ್ವಿ (maulvi) ತಡೆಗಟ್ಟಿದ್ದ. ಮಸೀದಿಯ ಕೆಲವು ಸದಸ್ಯರು ಸಹ ರಾಜಿ ಪಂಚಾಯಿತಿ ಮೂಲಕ ಪ್ರಕರಣ ಮುಚ್ಚಲು ಯತ್ನಿಸಿದ್ದರಿಂದ, ಘಟನೆ ತಡವಾಗಿ ಬಹಿರಂಗವಾಯಿತು.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಆಡಿಯೋ ತುಣುಕು ಹರಿದಾಡಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಇದನ್ನು ಹಂಚಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ವಿಷಯ ತಿಳಿದ ಕೂಡಲೇ ಮುರಗೋಡ ಠಾಣೆ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಇದನ್ನು ಓದಿ : Vande-Bharat : ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಆ.10 ರಂದು ಪ್ರಧಾನಿಯಿಂದ ಚಾಲನೆ.!
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಶಂಕರ್ ಗುಳೇದ ಅವರು, “ಆಡಿಯೋ ಮತ್ತು ಸಿಸಿಟಿವಿ ದೃಶ್ಯಗಳನ್ನು ಸಾಕ್ಷಿಯಾಗಿ ಬಳಸಿಕೊಂಡು ತನಿಖೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿಯವರ ನೇರ ಕೈವಾಡ ಪತ್ತೆಯಾಗಿಲ್ಲ, ಆದರೆ ಸಂಧಾನ ಯತ್ನಿಸಿದವರ ವಿಚಾರಣೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ಬಾಲಕಿಯ ಪೋಷಕರು ಪ್ರಾರಂಭದಲ್ಲಿ ದೂರು ನೀಡಲು ನಿರಾಕರಿಸಿದರೂ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಅಂಗನವಾಡಿ ಕಾರ್ಯಕರ್ತೆಯ ಸಹಕಾರದಿಂದ ಪ್ರಕರಣವನ್ನು ದಾಖಲಿಸಲಾಗಿದೆ. ಐಪಿಸಿ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಯುತ್ತಿದೆ.
Dog : ಇದು ನಿಜವೇ.? ಮಧ್ಯರಾತ್ರಿ ಮನುಷ್ಯನಾಗಿ ಬದಲಾದ ನಾಯಿ ; ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಮಧ್ಯರಾತ್ರಿ ಸಮಯದಲ್ಲಿ ನಾಯಿ (Dog) ಯೊಂದು ಮನುಷ್ಯನಾಗಿ ಬದಲಾಗುವ ಭಯಾನಕ ವಿಡಿಯೋ ಒಂದು ಸದ್ಯ ಸಾಲಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆತ್ಮ, ಪ್ರೇತ (Ghost), ಭೂತಗಳು ನಿಜವಾಗಿಯೂ ಇವೆಯೆ? ಈ ಪ್ರಶ್ನೆಗೆ ಉತ್ತರ ಒಂದೇ ರೀತಿಯಲ್ಲಿಲ್ಲ. ಕೆಲವರು ತಮ್ಮ ಅನುಭವ ಆಧರಿಸಿ ಆತ್ಮಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾರೆ, ಇನ್ನು ಕೆಲವರು ಅದು ಕೇವಲ ಭ್ರಮೆ ಎಂಬುದಾಗಿ ಹೇಳುತ್ತಾರೆ.
ದೇವರು, ಭೂತ ಇತ್ಯಾದಿ ವಿಷಯಗಳು ನಂಬಿಕೆ ಮತ್ತು ವಿಶ್ವಾಸದ ಮೇಲೆ ಆಧಾರಿತವಾಗಿವೆ. ಆದರೆ ಕೆಲ ಅಲೌಕಿಕ ಘಟನೆಗಳು ವೈಜ್ಞಾನಿಕವಾಗಿ ವಿವರಿಸಲಾಗದಂತಿರುತ್ತವೆ ಎಂಬುದು ಹಲವರ ಅನುಭವ.
ಇದನ್ನು ಓದಿ : Love-Case : ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ murder.!
ಸೋಶಿಯಲ್ ಮೀಡಿಯಾದಲ್ಲಿ ಪ್ರೇತಾತ್ಮಗಳು, ಅಜ್ಞಾತ ಶಕ್ತಿಗಳು ಮತ್ತು ಭಯಾನಕ ಘಟನೆಗಳ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಲೇ ಇವೆ. ಇತ್ತೀಚೆಗೆ, ಇಂತಹದ್ದೇ ಒಂದು ವಿಚಿತ್ರ ಹಾಗೂ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಲಾಗುತ್ತಿದೆ.
ಈ ವಿಡಿಯೋದಲ್ಲಿ ಮಧ್ಯರಾತ್ರಿಯಲ್ಲಿ ವ್ಯಕ್ತಿಯೊಬ್ಬನು ನೆಲಕ್ಕೆ ಕುಳಿತುಕೊಂಡಿದ್ದಾನೆ. ಅದೇ ವೇಳೆ ಅವನ ಹಿಂದೆ ಬರುವ ನಾಯಿ (Dod) ಯೊಂದು ಹಠಾತ್ ಮನುಷ್ಯನಾಗಿ ಪರಿವರ್ತಿತವಾಗುತ್ತಿದೆ. ಇನ್ನೊಂದು ನಾಯಿ (Dog) ಅಲ್ಲಿಯೇ ಹಾದು ಹೋಗುತ್ತದೆ. ಈ ದೃಶ್ಯವನ್ನು ಕೇವಲ ಒಬ್ಬರೇ ನೋಡಿದರೆ, ಅದು ಭಯ ಹುಟ್ಟಿಸುವಂತಾಗುತ್ತದೆ.
ಇದನ್ನು ಓದಿ : ಬೆಳಗಾವಿಯಲ್ಲಿ ಹೈಟೆಕ್ Black-magic : ಜಮೀನಿನಲ್ಲಿ ಸ್ಮಾರ್ಟ್‌ಫೋನ್ ಸಹಿತ ವಾಮಾಚಾರದ ವಸ್ತುಗಳು ಪತ್ತೆ!
ಈ ನಾಯಿ (Dog) ಮನುಷ್ಯನಾಗುವ ವಿಡಿಯೋ ನಿಜವೇ ಎಂಬುದರ ಬಗ್ಗೆ ಹಲವರು ಪ್ರಶ್ನೆ ಎತ್ತಿದರೂ, ಕೆಲವರು ಇದನ್ನು ನಿಜವಾದದ್ದು ಎಂದು ಪಸರಿಸುತ್ತಿದ್ದಾರೆ. ಆದರೆ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದಿಂದಾಗಿ ಹೀಗೆ ನಾಯಿ (Dog) ಮನುಷ್ಯನಾಗುವ ನಕಲಿ ವಿಡಿಯೋಗಳನ್ನು ಬಹಳ ನೈಜವಾಗಿ ತಯಾರಿಸಲಾಗುತ್ತಿರುವುದು ನಿಜ.
ಈ ಕಾರಣದಿಂದ, ಇದೂ ಕೂಡ deepfake ಅಥವಾ ಎಡಿಟೆಡ್ ವಿಡಿಯೋ ಆಗಿರುವ ಸಾಧ್ಯತೆ ಉಂಟು.
ಈ ವಿಡಿಯೋ ಸಂಬಂಧಿಸಿದಂತೆ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ತಾವು ಭೂತ ಪ್ರೇತಗಳನ್ನು ನೋಡಿದ್ದಾಗಿ ಹೇಳಿದ್ದಾರೆ. ಇತ್ತೀಚೆಗೆ ಅಮೆರಿಕದ ಓಕ್‌ಬ್ರಿಡ್ಜ್ ಮಕ್ಕಳ ಆಸ್ಪತ್ರೆಗೆ ಸಂಬಂಧಿಸಿದ ಒಂದು ಘಟನೆ ಸುದ್ದಿಯಾದ್ದು. 9 ವರ್ಷದ ಬಾಲಕಿ ಎಮಿಲಿ ಹಾಲೋವೇ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಹೃದಯಾಘಾತದಿಂದ ಮೃತಳಾಗಿದ್ದಳು.
ಇದನ್ನು ಓದಿ : Leg cramp : ರಾತ್ರಿ ವೇಳೆಯಲ್ಲಿ ಕಾಲು ಸೆಳೆತವೇ.? ಇಲ್ಲಿದೆ ನುರಿತ ನರವೈದ್ಯ ಮಾಹಿತಿ.!
ಆದರೆ ಹೃದಯ ನಿಲ್ಲಿಸಿದ ನಂತರವೂ, ಆಕೆಗೆ ಅಳವಡಿಸಿದ ಯಂತ್ರದಿಂದ ಬೀಪ್ ಶಬ್ದ ಮುಂದುವರಿದಿತ್ತು. ವಿಶೇಷವೆಂದರೆ, ಪ್ರತಿವರ್ಷ ಆಕೆಯ ಹುಟ್ಟುಹಬ್ಬದಂದು ಅದೇ ಶಬ್ದ ಕೇಳಿಸುತ್ತಿದೆ ಎಂದು ವೈದ್ಯರೇ ಸ್ಪಷ್ಟಪಡಿಸಿದ್ದಾರೆ.
ಈ ಎಲ್ಲ ಘಟನೆಗಳು, ವಿಡಿಯೋಗಳು ಮತ್ತು ವರದಿಗಳು ಭೂತ ಪ್ರೇತಗಳ ಕುರಿತಂತೆ ನಾನಾ ಚರ್ಚೆಗಳಿಗೆ ಕಾರಣವಾಗಿವೆ. ವೈಜ್ಞಾನಿಕವಾಗಿ ಎಷ್ಟು ವಿಷಯಗಳು ನಕಾರಾತ್ಮಕವಾಗಿ ನಿರೂಪಿಸಲಾದರೂ, ಹಲವರು ತಮ್ಮ ನಂಬಿಕೆಯಿಂದಾಗಿ ಇವುಗಳ ಅಸ್ತಿತ್ವವನ್ನೇ ನಂಬುತ್ತಾರೆ.
ಮಧ್ಯರಾತ್ರಿ ಮನುಷ್ಯನಾಗಿ ಬದಲಾದ ನಾಯಿ (Dog) ಯ ವಿಡಿಯೋ :
View this post on Instagram