ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯೋರ್ವಳಿಗೆ ಚಲಿಸುವ ಬಸ್ಸಿ (Bus) ನಲ್ಲಿ ಮಧ್ಯ ವಯಸ್ಕ ವ್ಯಕ್ತಿಯೋರ್ವ ತನ್ನ ಪಕ್ಕದ ಆಸನದಲ್ಲಿ ಕುಳಿತಿದ್ದ ಯುವತಿಯ ಎದೆ ಭಾಗದ ಬಳಿ ಕೈ ತರಲು ಪ್ರಯತ್ನಿಸಿದ್ದಾನೆ. ಆಗ ಆದೇ ಬಸ್ (Bus) ನಲ್ಲಿದ್ದ ಮತ್ತೋರ್ವ ಯುವತಿ ಎಲ್ಲರೆದುರೇ ಮುಟ್ಟಿ ನೋಡುಕೊಳ್ಳುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾಳೆ.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ/ದೌರ್ಜನ್ಯ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವ ಬಗ್ಗೆ ಕೇಳಿದ್ದೇವೆ ಇಲ್ಲಾ ನೋಡಿದ್ದೇವೆ. ಹಾಗೆಯೇ ಕೇರಳದಲ್ಲಿ ನಡೆದ ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಇಲ್ಲಿ ಬಸ್ (Bus) ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಹಿರಿಯ ವ್ಯಕ್ತಿಯಿಂದ ಕಿರುಕುಳ ಅನುಭವಿಸಿದ್ದಾಳೆ.
ಇದನ್ನು ಓದಿ : Conductor : ಮಹಿಳೆಯನ್ನು ಬಸ್ಸಿನಿಂದ ಕೆಳಗಿಳಿಸಿದ ಕಂಡಕ್ಟರ್‌ಗೆ ಹಿಗ್ಗಾ-ಮುಗ್ಗಾ ಥಳಿಥ.!
ಘಟನೆಯ ವಿವರದಂತೆ, ಬಸ್ (Bus) ನಲ್ಲಿ ತನ್ನ ಪಕ್ಕದ ಆಸನದಲ್ಲಿ ಕುಳಿತಿದ್ದ ವ್ಯಕ್ತಿ ನಿಧಾನವಾಗಿ ತನ್ನ ಕೈಯನ್ನು ಯುವತಿಯ ಎದೆ ಭಾಗದ ಬಳಿ ತರುವ ಪ್ರಯತ್ನ ಮಾಡಿದ್ದಾನೆ. ಆಗ ಯುವತಿ ಅದೊಂದು ಆಕಸ್ಮಿಕ ಘಟನೆ ಎಂದು ಭಾವಿಸಿ ನಿರ್ಲಕ್ಷಿಸಿದ್ದಾರೆ. ಬಳಿಕ ಆ ವ್ಯಕ್ತಿಯ ಕೃತ್ಯ ಪುನರಾವರ್ತಿತವಾದಾಗ, ಆತನ ಉದ್ದೇಶಿತ ನಡೆ ಅನುಮಾನಿಸಿ ತಕ್ಷಣ ತನ್ನ ಸ್ನೇಹಿತೆಗೆ ಆತನ ವರ್ತನೆ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುವಂತೆ ತಿಳಿಸಿದ್ದಾರೆ.
ವಿಡಿಯೋ ದಾಖಲಾಗುತ್ತಿದ್ದಂತೆ ಯುವತಿ ಈ ವ್ಯಕ್ತಿಯನ್ನು ಎಲ್ಲರ ಮುಂದೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಅಷ್ಟೆ ಅಲ್ಲಾ “ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿಲ್ಲವೆಯಾ?” ಎಂದು ತೀವ್ರವಾಗಿ ಪ್ರಶ್ನಿಸಿದ ಯುವತಿ, ಆ ವ್ಯಕ್ತಿಗೆ ಕಪಾಳಕ್ಕೊಂದು ಬಾರಿಸಿ ತಮ್ಮ ಆಕ್ರೋಶವನ್ನು ತೋರಿಸಿದ್ದಾಳೆ. ಈ ಘಟನೆ ಕೇವಲ ಅದರ ಗಂಭೀರತೆಯ ಕಾರಣಕ್ಕೇ ಅಲ್ಲ, ಯುವತಿಯ ಧೈರ್ಯವಂತಿಕೆಯಿಂದ ಕೂಡ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಯುವತಿಯ ಧೈರ್ಯವನ್ನು ಅಭಿನಂದಿಸುತ್ತಿರುವ ಕಮೆಂಟುಗಳು ಮತ್ತು ಪ್ರತಿಕ್ರಿಯೆಗಳು ಮುಂದಿನ ಪೀಳಿಗೆಗೆ ಶಕ್ತಿದಾಯಕ ಸಂದೇಶವನ್ನೂ ನೀಡುತ್ತಿವೆ.
ಬಸ್ (Bus) ನಲ್ಲಿಯ ವ್ಯಕ್ತಿಯ ವರ್ತನೆಯ ವಿಡಿಯೋ :
Courtesy : Kannada Prabha
ಸಂಪಾದಕೀಯ : “ಮೌನವೇ ಒಪ್ಪಿಗೆಯಲ್ಲ”, ಮಹಿಳೆಯರಿಗೆ ಯಾವುದೇ ರೀತಿಯ ಕಿರುಕುಳ ನೀಡುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಘಟನೆ ಕೇವಲ ಒಂದು ವೈರಲ್ ವಿಡಿಯೋವಲ್ಲ, ಅದು ಮಹಿಳೆಯರ ಆತ್ಮಸ್ಥೈರ್ಯ. ಮಹಿಳೆ/ಯುವತಿಯರು ಸಮಾಜ ಮತ್ತು ಲೈಂಗಿಕ ಕಿರುಕುಳ ವಿರೋಧದ ಧ್ವನಿಯಾಗಿ ಪರಿವರ್ತನೆಯಾಗಬೇಕು.
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
“eleven” ಸ್ಪೆಲ್ಲಿಂಗ್ ಬರೆಯಲಾಗದ Teacher ; ರೂ.70,000 ಪ್ರತಿ ತಿಂಗಳು ವೇತನ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸರ್ಕಾರಿ ಶಾಲೆಯ ಓರ್ವ ಶಿಕ್ಷಕ (Teacher) ನಿಗೆ “eleven” ಸ್ಪೆಲ್ಲಿಂಗ್ ಬರೆಯಲಾಗದೆ ಪರದಾಡಿದ ಘಟನೆಯೊಂದು ನಡೆದಿದ್ದು, ಸದ್ಯ ವೈರಲ್ ವಿಡಿಯೋ ನೋಡಿದ ಜನತೆ ಶಾಕ್ ಆಗಿದ್ದಾರೆ. ವಿದ್ಯಾಭ್ಯಾಸದ ಗುಣಮಟ್ಟದ ಬಗ್ಗೆ ಸದಾ ಪ್ರಶ್ನೆ ಏಳುತ್ತಿರುವುದರ ಮಧ್ಯ ಈ ಘಟನೆ ಮತ್ತಷ್ಟು ತೀವ್ರ ಚಿಂತನೆಗೆ ಕಾರಣವಾಗಿದೆ.
ಹೌದು, ಈ ಘಟನೆ ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಘಟನೆ ವಿಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರು ನಾನಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 30 ರ ದ್ವಾದಶ ರಾಶಿಗಳ ಫಲಾಫಲ.!
ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಪರಿಶೀಲನೆಗಾಗಿ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ ವೇಳೆ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರಿಗೆ ಬೋರ್ಡ್‌ನಲ್ಲಿ “eleven” ಎಂಬ ಪದದ ಸ್ಪೆಲ್ಲಿಂಗ್ ಬರೆಯಲು ಹೇಳಲಾಯಿತು. ಆದರೆ ಶಿಕ್ಷಕ (Teacher) ರು “eleven” ಬದಲಿಗೆ “AiVENE” ಎಂದು ಬರೆದರು. ಈ ದೃಶ್ಯವನ್ನು ಕಂಡ ಅಧಿಕಾರಿಗಳು ಮತ್ತು ಇತರರು ಆಘಾತಕ್ಕೊಳಗಾದರು.
ಮಾತ್ರವಲ್ಲದೆ, ಅವರ ತಪ್ಪನ್ನು ಗುರುತಿಸಲು ಕೇಳಿದಾಗ, ಅವರು ಮಾಡಿದ ತಪ್ಪನ್ನು ಕೂಡ ಅರಿಯದೇ ತಪ್ಪು ಕಾಗುಣಿತವೇ ಸರಿಯೆಂದು Teacher ತಿಳಿಸಿದರು. ಈ ವಿದ್ಯಮಾನ ಶಿಕ್ಷಣ ಕ್ಷೇತ್ರದಲ್ಲಿ ಸದಾ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಮತ್ತೊಮ್ಮೆ ಪ್ರಾಮುಖ್ಯತೆ ಜ್ವಲಂತ ಉದಾಹರಣೆಯಾಗಿದೆ.
ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
ಸಂಬಳವಾಗಿ ಪ್ರತೀ ತಿಂಗಳು ಸುಮಾರು ರೂ.70,000 ಪಡೆಯುತ್ತಿರುವ ಈ ಶಿಕ್ಷಕರೊಬ್ಬರಿಗೆ ಮೂಲಭೂತ ಇಂಗ್ಲಿಷ್ ಪದಗಳ ಸ್ಪೆಲ್ಲಿಂಗ್ ಬರೆಯಲಾಗುತ್ತಿಲ್ಲ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಶಿಕ್ಷಣದ ಗುಣಮಟ್ಟದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆಗಳು ಉತ್ತಮ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಮತ್ತು ಶಿಕ್ಷಕ (Teacher) ರ ಅರ್ಹತೆಯ ಮೇಲಿನ ಪರಿಶೀಲನೆಯ ಪ್ರಾಮುಖ್ಯತೆಯನ್ನು ಮತ್ತೆ ಒತ್ತಿಹೇಳುತ್ತಿವೆ.
ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
“eleven” ಸ್ಪೆಲ್ಲಿಂಗ್ ಬರೆಯಲಾಗದ ಶಿಕ್ಷಕ (Teacher) ನ ವಿಡಿಯೋ :
गुरुजी eleven की spelling बच्चों को सिखा रहे हैं pic.twitter.com/Ve8SUpdiiK
— Shantanu Tripathi (@Shantanu_media) July 27, 2025
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.