ಜನಸ್ಪಂದನ ನ್ಯೂಸ್, ಡೆಸ್ಕ್ : ಸರ್ಕಾರಿ ಶಾಲೆಯ ಓರ್ವ ಶಿಕ್ಷಕ (Teacher) ನಿಗೆ “eleven” ಸ್ಪೆಲ್ಲಿಂಗ್ ಬರೆಯಲಾಗದೆ ಪರದಾಡಿದ ಘಟನೆಯೊಂದು ನಡೆದಿದ್ದು, ಸದ್ಯ ವೈರಲ್ ವಿಡಿಯೋ ನೋಡಿದ ಜನತೆ ಶಾಕ್ ಆಗಿದ್ದಾರೆ. ವಿದ್ಯಾಭ್ಯಾಸದ ಗುಣಮಟ್ಟದ ಬಗ್ಗೆ ಸದಾ ಪ್ರಶ್ನೆ ಏಳುತ್ತಿರುವುದರ ಮಧ್ಯ ಈ ಘಟನೆ ಮತ್ತಷ್ಟು ತೀವ್ರ ಚಿಂತನೆಗೆ ಕಾರಣವಾಗಿದೆ.
ಹೌದು, ಈ ಘಟನೆ ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಘಟನೆ ವಿಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರು ನಾನಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 30 ರ ದ್ವಾದಶ ರಾಶಿಗಳ ಫಲಾಫಲ.!
ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಪರಿಶೀಲನೆಗಾಗಿ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ ವೇಳೆ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರಿಗೆ ಬೋರ್ಡ್‌ನಲ್ಲಿ “eleven” ಎಂಬ ಪದದ ಸ್ಪೆಲ್ಲಿಂಗ್ ಬರೆಯಲು ಹೇಳಲಾಯಿತು. ಆದರೆ ಶಿಕ್ಷಕ (Teacher) ರು “eleven” ಬದಲಿಗೆ “AiVENE” ಎಂದು ಬರೆದರು. ಈ ದೃಶ್ಯವನ್ನು ಕಂಡ ಅಧಿಕಾರಿಗಳು ಮತ್ತು ಇತರರು ಆಘಾತಕ್ಕೊಳಗಾದರು.
ಮಾತ್ರವಲ್ಲದೆ, ಅವರ ತಪ್ಪನ್ನು ಗುರುತಿಸಲು ಕೇಳಿದಾಗ, ಅವರು ಮಾಡಿದ ತಪ್ಪನ್ನು ಕೂಡ ಅರಿಯದೇ ತಪ್ಪು ಕಾಗುಣಿತವೇ ಸರಿಯೆಂದು Teacher ತಿಳಿಸಿದರು. ಈ ವಿದ್ಯಮಾನ ಶಿಕ್ಷಣ ಕ್ಷೇತ್ರದಲ್ಲಿ ಸದಾ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಮತ್ತೊಮ್ಮೆ ಪ್ರಾಮುಖ್ಯತೆ ಜ್ವಲಂತ ಉದಾಹರಣೆಯಾಗಿದೆ.
ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
ಸಂಬಳವಾಗಿ ಪ್ರತೀ ತಿಂಗಳು ಸುಮಾರು ರೂ.70,000 ಪಡೆಯುತ್ತಿರುವ ಈ ಶಿಕ್ಷಕರೊಬ್ಬರಿಗೆ ಮೂಲಭೂತ ಇಂಗ್ಲಿಷ್ ಪದಗಳ ಸ್ಪೆಲ್ಲಿಂಗ್ ಬರೆಯಲಾಗುತ್ತಿಲ್ಲ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಶಿಕ್ಷಣದ ಗುಣಮಟ್ಟದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆಗಳು ಉತ್ತಮ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಮತ್ತು ಶಿಕ್ಷಕ (Teacher) ರ ಅರ್ಹತೆಯ ಮೇಲಿನ ಪರಿಶೀಲನೆಯ ಪ್ರಾಮುಖ್ಯತೆಯನ್ನು ಮತ್ತೆ ಒತ್ತಿಹೇಳುತ್ತಿವೆ.
ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
“eleven” ಸ್ಪೆಲ್ಲಿಂಗ್ ಬರೆಯಲಾಗದ ಶಿಕ್ಷಕ (Teacher) ನ ವಿಡಿಯೋ :
https://twitter.com/i/status/1949304030691570067
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
ವಿವಾಹಿತ ಮಹಿಳೆಯ ಮನೆಯಲ್ಲಿ PSI : ಸ್ಥಳಕ್ಕಾಗಮಿಸಿದ ಪತ್ನಿ, ಕುಟುಂಬಸ್ಥರು ; ಮುಂದೆನಾಯ್ತು.!

ಜನಸ್ಪಂದನ ನ್ಯೂಸ್, ಡೆಸ್ಕ್ : ವಿವಾಹಿತ ಮಹಿಳೆಯ ಮನೆಯಲ್ಲಿ ಪಿಎಸ್‌ಐ (PSI) ಇದ್ದ ಸಂದರ್ಭದಲ್ಲಿ ಪಿಎಸ್‌ಐ ಪತ್ನಿ ಹಾಗೂ ಕುಟುಂಬಸ್ಥರು ಅಚಾನಕ್ ಆಗಮಿಸಿದ್ದು, ಆ ನಂತರ ನಡೆದದ್ದು ಮಾತ್ರ ಶಾಕ್‌ಕಿಂಗ್ ವಿಚಾರ.!
ಹೌದು, ಮಧ್ಯ ಪ್ರದೇಶದ ಇಂದೋರ್ ನಗರದ ಖಜ್ರಾನಾ ಪ್ರದೇಶದಲ್ಲಿ ಎಸ್ಐ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕವಾಗಿ ಅಪಮಾನವಾಗಿರುವ ಘಟನೆಯೊಂದು ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ವಿವಾಹಿತ ಮಹಿಳೆಯ ಮನೆಯಲ್ಲಿ ಮದ್ಯ ಸೇವಿಸಿರುವ ಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿ (PSI) ಸುರೇಶ ಕಂಡುಬಂದಿದ್ದಾರೆ. ಈ ವೇಳೆ ಆತನ ಪತ್ನಿ ಹಾಗು ಪತ್ನಿಯ ಸಂಬಂಧಿಕರು ಆಗಮಿಸಿದ್ದಾರೆ.
ಇದನ್ನು ಓದಿ : LDL : ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯೇ.? ಇಲ್ಲಿವೆ 4 ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ ಮಾರ್ಗಗಳು.!
ಪತಿ ಮದ್ಯ ಸೇವಿಸಿರುವ ಸ್ಥಿತಿಯಲ್ಲಿ, ಅದು ವಿವಾಹಿತ ಮಹಿಳೆಯ ಮನೆಯಲ್ಲಿ ಇರುವುದನ್ನು ಗಮನಿಸಿದ ಪತ್ನಿ, ಅಧಿಕಾರಿಯ ಕಪಾಳಮೋಕ್ಷ ಮಾಡಿದ್ದಾರೆ. ಕೆಲ ಸಮಯದಿಂದ ಪತಿ-ಪತ್ನಿ ನಡುವೆ ವೈಮನಸ್ಯ ಇದ್ದಿದ್ದು, ಕಳೆದ ಎರಡು ತಿಂಗಳಿನಿಂದ PSI ಸುರೇಶ್ ಆಕೆಯ ಮನೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.
ಸ್ಥಳೀಯರು ಆತನನ್ನು ಮದ್ಯ ಸೇವಿಸುತ್ತಿರುವ ಸ್ಥಿತಿಯಲ್ಲಿ ನೋಡಿದ್ದಾರೆ. ಆಗ PSI ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.
ಇದನ್ನು ಓದಿ : Shravan : ಶ್ರಾವಣ ಮಾಸದಲ್ಲಿ ಮಾಂಸಾಹಾರ ತಿನ್ನಬಾರದು ಏಕೆ.? ಶಾಸ್ತ್ರ ಮತ್ತು ವಿಜ್ಞಾನ ಏನು ಹೇಳುತ್ತವೆ?
ಸ್ಥಳೀಯರ ಹೇಳಿಕೆಯಂತೆ, PSI ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಎಸ್ಐ ಸುರೇಶ್ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾರೆ. ಇದೇ ಸಮಯದಲ್ಲಿ ಮೈಮೇಲಿದ್ದ ಬಟ್ಟೆ ಹರಿದು ಹಾಕಲು ಯತ್ನಿಸಿ, ಕೋಲುಗಳಿಂದ ಮನಬಂದಂತೆ ಥಳಿಸಿದ್ದಾರೆ.
ಪರಿಸ್ಥಿತಿ ಉದ್ವಿಗ್ನಗೊಂಡ ಕಾರಣ, ಪೊಲೀಸ್ ಸಿಬ್ಬಂದಿಯನ್ನು ಕರೆದು ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.
ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಘಟನೆ ಸಂಬಂಧವಾಗಿ ಕೆಲವು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ಮುಂದುವರಿಸಿದೆ ಎಂದು ವರದಿಗಳು ತಿಳಿಸಿವೆ.
ಪಿಎಸ್‌ಐ (PSI) ಥಳಿಸುತ್ತಿರುವ ವಿಡಿಯೋ :
https://twitter.com/i/status/1948297125311467823
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.





