Wednesday, September 17, 2025

Janaspandhan News

HomeGeneral NewsBSNL ಹೊಸ ಪ್ರಿಪೇಯ್ಡ್ ಪ್ಲ್ಯಾನ್‌ : 897 ರೂ.ಗೆ 180 ದಿನಗಳ ಮಾನ್ಯತೆ.!
spot_img
spot_img
spot_img

BSNL ಹೊಸ ಪ್ರಿಪೇಯ್ಡ್ ಪ್ಲ್ಯಾನ್‌ : 897 ರೂ.ಗೆ 180 ದಿನಗಳ ಮಾನ್ಯತೆ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ (BSNL) ಇದೀಗ ಖಾಸಗಿ ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳಲು ತಮ್ಮ ಲೋ-ಕಾಸ್ಟ್‌ ಯೋಜನೆಗಳನ್ನು ಮುಂದಿಟ್ಟು, ಆ ಮೂಲಕ ಸಾಮಾನ್ಯ ಚಂದಾದಾರರನ್ನು ತಮ್ಮೊಂದಿಗೆ ಉಳಿಸಿಕೊಳ್ಳಲು ಮುಂದಾಗಿದೆ.

ಇತ್ತೀಚೆಗೆ BSNL ಸಂಸ್ಥೆ ತನ್ನ 897 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದ್ದು, ಇದು ಆರ್ಥಿಕವಾಗಿ ಲಾಭದಾಯಕ ಹಾಗೂ ದೀರ್ಘಾವಧಿಯ ಮಾನ್ಯತೆ ಹೊಂದಿದೆ. BSNL ತನ್ನ ಹೊಸ ಯೋಜನೆಯನ್ನು ವಿವರಿಸಿದ್ದು, ಮಾಸಿಕ ರೀಚಾರ್ಜ್ ಯೋಜನೆಗಳನ್ನು ತಪ್ಪಿಸಿ ಬದಲಿಗೆ 897 ರೂ. ಯೋಜನೆಯಂತಹ ಯೋಜನೆಗಳನ್ನು ಬಳಸುವಂತೆ ಗ್ರಾಹಕರಿಗೆ ಮನವಿ ಮಾಡಿದೆ.

ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!
BSNL ಯೋಜನೆಯ ಪ್ರಮುಖ ಅಂಶಗಳು :
  • 📞 ಅನಿಯಮಿತ ವಾಯ್ಸ್‌ ಕಾಲ್‌ಗಳು
  • 🌐 ಒಟ್ಟು 90GB ಡೇಟಾ (ಬಲ್ಕ್‌ ಡೇಟಾ ರೂಪದಲ್ಲಿ)
  • 📩 ದಿನಕ್ಕೆ 100 SMS
  • 📆 180 ದಿನಗಳ ಮಾನ್ಯತೆ

ಈ ಯೋಜನೆಯನ್ನು ಬಳಸಿ ಗ್ರಾಹಕರು ಅರ್ಧ ವರ್ಷವರೆಗೆ ನಿರಂತರ ಸೇವೆಯನ್ನು ಹೊಂದಬಹುದು, ಮತ್ತು ಪ್ರತಿ ತಿಂಗಳು ಪುನಃ ರೀಚಾರ್ಜ್ ಮಾಡಬೇಕಾದ ತೊಂದರೆಯಿಂದ ಮುಕ್ತರಾಗಬಹುದು. ದೈನಂದಿನ ವೆಚ್ಚ ಕೇವಲ ರೂ.4.98 ಆಗಿದ್ದು, ಇದು ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ಪಡೆಯಲು ಇಚ್ಛಿಸುವವರಿಗೆ ಆದರ್ಶ ಆಯ್ಕೆಯಾಗಿದೆ ಎಂದು BSNL ಅಧಿಕೃತ ಟ್ವಿಟರ್ ಖಾತೆ ಹಾಗೂ Selfcare App ಮೂಲಕ ತಿಳಿಸಿದೆ.

ಇದನ್ನು ಓದಿ : RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ಪ್ಲ್ಯಾನ್‌ನ್ನು ಏಕೆ ಆಯ್ಕೆಮಾಡಬೇಕು?

BSNL ಇನ್ನೂ 5G ಸೇವೆಗಳನ್ನು ಪ್ರಾರಂಭಿಸದಿದ್ದರೂ ಸಹ, ಈ ತರಹದ ಯೋಜನೆಗಳ ಮೂಲಕ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದೆ. ಜಿಯೋ, ಏರ್‌ಟೆಲ್‌ ಮುಂತಾದ ಖಾಸಗಿ ಸಂಸ್ಥೆಗಳ ಜಾಹೀರಾತು ಬಲದ ನಡುವೆ, ಬಿಎಸ್‌ಎನ್‌ಎಲ್‌ ತನ್ನ ಯೋಜನೆಗಳ ಹಾಸುಹೊಕ್ಕಾಗಿ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದೆ.‌

ಸೂಚನೆ : ಈ ಯೋಜನೆ BSNL ಅಧಿಕೃತ ವೆಬ್‌ಸೈಟ್ ಅಥವಾ Selfcare App ಮೂಲಕ ಲಭ್ಯವಿದೆ. ಗ್ರಾಹಕರು ತಾವು ಬಯಸುವ ದೀರ್ಘಾವಧಿಯ ಯೋಜನೆ ಆಯ್ಕೆಮಾಡಿಕೊಳ್ಳಿ ಮತ್ತು ನಿರಂತರ ಸೇವೆಯಿಂದ ಪ್ರಯೋಜನ ಪಡೆಯಿರಿ.


Wife : ಬೇರೊಬ್ಬನ್ನೊಂದಿಗೆ ಇರುವಾಗ ಪತಿಯ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ.!

Wife

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪತ್ನಿ (Wife) ಯೋರ್ವಳು ಬೇರೋಬ್ಬ ಪುರುಷನೊಂದಿಗೆ ಇರುವಾಗಲೇ ಪತಿಯ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಮತ್ತು ವಿವಾಹೇತರ ಸಂಬಂಧದ ಕಹಿಸತ್ಯ ಘಟನೆ ಅನಾವರಣಗೊಂಡಿದೆ.

ಉತ್ತರ ಪ್ರದೇಶದಲ್ಲಿಈ ಘಟನೆ ನಡೆದಿದ್ದು, ಐದು ವರ್ಷಗಳ ದಾಂಪತ್ಯ ಜೀವನದ ನಂತರ ತನ್ನ ಪತ್ನಿ (Wife) ಬೇರೊಬ್ಬ ವ್ಯಕ್ತಿಯೊಂದಿಗೆ ಇರುವಾಗ ರೆಡ್‌ಹ್ಯಾಂಡ್ ಆಗಿ ಪತಿಯ ಕಥಗೆ ಸಿಕ್ಕಿಬಿದ್ದಿದ್ದು, ಪತ್ನಿ ಮಾಡಿದ ಅನ್ಯಾಯವನ್ನು ಪ್ರಶ್ನಿಸಿದ್ದಾರೆ.

ಸದ್ಯ ಇದರ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಘಟನೆ ಭಾರತದಲ್ಲಿ ವೈವಾಹಿಕ ಸಂಬಂಧಗಳು ಹೇಗೆ ದುರ್ಬಲಗೊಳ್ಳುತ್ತಿವೆ ಎಂಬುದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ತೋರುತ್ತಿದೆ.

ಇದನ್ನು ಓದಿ : RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಪತಿಯ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಸಹ ಪತ್ನಿ (Wife) ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ವರ್ತಿಸಿದ್ದಾಳೆ. ಆದರೆ ಪತಿ ಮಾತ್ರ ತೀವ್ರ ಆಘಾತಕ್ಕೆ ಒಳಗಾಗಿ ಕಣ್ಣೀರು ಹಾಕುತ್ತಿರುವುದು ವಿಡಿಯೋದಲ್ಲಿ ಕಾಣಬುದಾಗಿದೆ. ಈ ವೇಳೆ “ನನ್ನ ಐದು ವರ್ಷಗಳ ಜೀವನವನ್ನು ನೀನು ಹಾಳು ಮಾಡಿದೆ” ಎಂದು ಪತಿ ಆಕ್ರೋಶದಿಂದ ಕೂಗಾಡಿದ್ದಾರೆ.

ಈ ವೈರಲ್‌ ವಿಡಿಯೋವನ್ನು ‘Ghar Ke Kalesh’ ಎಂಬ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ 202.6K ಕ್ಕೂ ಹೆಚ್ಚು Views ಈ ವೈರಲ್ ವಿಡಿಯೋ ಪಡೆದುಕೊಂಡಿದೆ. ಈ ವಿಡಿಯೋ ಇತ್ತಿಚೇಗೆ ವಿವಾಹೇತರ ಸಂಬಂಧದ ಕುರಿತಾದ ಮತ್ತೊಂದು ಪ್ರಕರಣವನ್ನು ಬೆಳಕಿಗೆ ತಂದಂತಾಗಿದೆ.

ಸಾಮಾನ್ಯವಾಗಿ ಪತಿ ತನ್ನ ಪತ್ನಿ (Wife) ಗೆ ಹೀಗೆ ವಂಚನೆ ಮಾಡುವುದನ್ನು ನಾವೂ ನೋಡಿದ್ದೇವೆ ಇಲ್ಲಾ ಕೇಳಿದ್ದೇವೆ. ಆದರೆ ಇಲ್ಲಿ ಪತ್ನಿಯೇ ಪತಿಗೆ ವಂಚನೆ ಮಾಡಿದ್ದಾಳೆ. ವಿಡಿಯೋದ ಶೀರ್ಷಿಕೆಯಲ್ಲಿ “Extra-Marital affair Kalesh (Husband allegedly catches his wife with other man. Keeps on screaming why you wasted my 5 years)” ಎಂದು ಬರೆದುಕೊಳ್ಳಲಾಗಿದೆ.

ಇದನ್ನು ಓದಿ : Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”

ವಿಡಿಯೋದಲ್ಲಿ ಗಮನಿಸಬಹುದಾದ ಅಂಶವೆನೆಂದರೆ, ಪತಿ “ನೀನು ನನ್ನ ಜೀವನವನ್ನು ನಾಶಪಡಿಸಿದೆ, ನನ್ನ ಐದು ವರ್ಷಗಳನ್ನು ಹಾಳು ಮಾಡಿದೆ” ಎಂದು ಕೋಪ ಮತ್ತು ದುಃಖದಿಂದ ಹೇಳುವುದನ್ನು ಕಾಣಬಹುದು. ಇದೇ ವೇಳೆ ಶರ್ಟ್‌ ಹರಿದುಕೊಂಡಿರುವ ಓರ್ವ ವ್ಯಕ್ತಿಯನ್ನು ಸಹ ನಾವೂ ವಿಡಿಯೋದಲ್ಲೊ ಕಾಣಬಹುದಾಗಿದೆ.

ಪತಿ ತನ್ನ ಕೋಪ ಮತ್ತು ದುಃಖವನ್ನು ಆಕ್ರೋಶಭರಿವಾಗಿ ತೊಡಿಕೊಳ್ಳುತ್ತಿದ್ದರೆ, ಇತ್ತ ಪತ್ನಿ (Wife) ಮಾತ್ರ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪತಿಯೊಂದಿಗೆ ಜಗಳಕ್ಕಿಳಿದ್ದಿದ್ದಾಳೆ. ಇದೇ ವೇಳೆ ಪತಿಯ ಸಂಬಂಧಿಕರು ಎನ್ನಲಾದ ಮತ್ತೊಬ್ಬ ಮಹಿಳೆಯ ಬಗ್ಗೆ ಪತ್ನಿ ಅಗೌರವದಿಂದ ವರ್ತಿಸಿ ಹಲ್ಲೆಗೂ ಮುಂದಾಗಿದ್ದಾಳೆ.

ಇದನ್ನು ಓದಿ : heart-attack ವಾದ ಕೂಡಲೇ ತಕ್ಷಣದ ಪರಿಹಾರಕ್ಕೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.!

ಇಷ್ಟಾದರೂ ಪತ್ನಿ ಕಿರುಚಾಡುತ್ತಿರುವುರಿಂದ ಮತ್ತಷ್ಟೆ ಕೆರಳಿದ ಪತಿ ಕೋಪದಲ್ಲಿ ಪತ್ನಿಗೆ ಕಪಾಳಮೋಕ್ಷ ಮಾಡಿ, ತನ್ನ ಸಂಕಟ ಮತ್ತು ದುಃಖವನ್ನು ತೋಡಿಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ :

* “ಇದು ದಿನೇ ದಿನೇ ಹೆಚ್ಚುತ್ತಿದೆ, ಯಾರು ಇದಕ್ಕೆ ಜವಾಬ್ದಾರರು? ಅತಿಯಾದ ಸೀರಿಯಲ್‌ಗಳು ಇದಕ್ಕೆ ಕಾರಣವೇ?” ಎಂದು ಪ್ರಶ್ನಿಸಿದ್ದಾರೆ.

*ವಿಶ್ವಾಸದ್ರೋಹದ ಪರಿಣಾಮಗಳ ಬಗ್ಗೆ ಹೇಳುತ್ತಾ, “5 ವರ್ಷ ವ್ಯರ್ಥವಾಯಿತೇ? ಅವಳು ಅವನ ಜೀವನವನ್ನೇ ಹಾಳು ಮಾಡಿದ್ದಾಳೆ,  ಎಂದು ಹೇಳಿದ್ದಾರೆ.

*“ಹುಡುಗಿಗೆ ಯಾವುದೇ ಪಶ್ಚಾತ್ತಾಪವಿಲ್ಲ…” ಮತ್ತು “ಒಂದು ಕಡೆ ಕಳ್ಳತನ, ಇನ್ನೊಂದು ಕಡೆ ಎದೆಗಾರಿಕೆ” ಎಂದು ಪತ್ನಿಯ ನಾಚಿಕೆಯಿಲ್ಲದ ವಾದದ ವರ್ತನೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ : Wife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!

ವಿಡಿಯೋ :

ಸಂಪಾದಕೀಯ :

ಈ ಇಂತಹ ಘಟನೆಗಳು ವೈವಾಹಿಕ ಸಂಬಂಧದ ನಿಖರ ಮೌಲ್ಯ ಮತ್ತು ಭದ್ರತೆಯ ಅಗತ್ಯತೆಯನ್ನು ಮರಳಿ ಒತ್ತಿ ಹೇಳುತ್ತವೆ. ಸಂವಹನ, ನಂಬಿಕೆ ಮತ್ತು ಬದ್ಧತೆ ದಾಂಪತ್ಯದ ತಳಹದಿ ಎಂದು ತಜ್ಞರು ಸೂಚಿಸುತ್ತಾರೆ. ಇಂತಹ ಘಟನೆಗಳ ವಿರುದ್ಧ ಸಮಾಜ ಜಾಗೃತವಾಗಬೇಕಿದೆ.

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments