ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಅಭಯಾರಣ್ಯದಲ್ಲಿ ಹುಲಿಯೊಂದು ಹೆಬ್ಬಾವನ್ನು ತಿಂದ ವಿಡಿಯೋ (Video) ವೈರಲ್ ಆಗುತ್ತಿದೆ.
ಸಫಾರಿಗೆ ಆಗಮಿಸಿದ್ದ ಪ್ರವಾಸಿಗರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಹುಲಿಯೊಂದು ಹೆಬ್ಬಾವನ್ನು ತಿಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಇದನ್ನು ಓದಿ :
ಕಾಡಿನ ರಸ್ತೆಯಲ್ಲಿ ಬೇಟೆ ಅರಸಿ ಬಂದ ಹುಲಿಯೊಂದು ಆಹಾರಕ್ಕಾಗಿ ಅತ್ತ ಇತ್ತ ನೋಡಿದ್ದು ಈ ವೇಳೆ ರಸ್ತೆ ಬದಿಯಲ್ಲಿ ಹೆಬ್ಬಾವು ಕಂಡಿದೆ.
ಹತ್ತಿರ ಹೋಗಿ ನೋಡಿದ ಹುಲಿ ಅದನ್ನು ತನ್ನ ಕಾಲಿನಿಂದ ಸ್ಪರ್ಶ ಮಾಡಿದೆ.ಅಷ್ಟು ಹೊತ್ತಿಗಾಗಲೇ ಹಾವು ಸತ್ತಿತ್ತು. ಈ ವೇಳೆ ನೋಡ ನೋಡುತ್ತಲೇ ಹುಲಿ ಹಾವನ್ನು ತಿಂದಿದೆ. ಈ ವಿಡಿಯೋದಲ್ಲಿ ಹುಲಿ ಹಾವನ್ನು ತಿನ್ನುವುದನ್ನು ಮಾತ್ರ ತೋರಿಸಲಾಗಿದೆ.
ಇದನ್ನು ಓದಿ :
ಬಳಿಕ ಹಾವನ್ನು ತಿಂದು ಸ್ವಲ್ಪ ಸಮಯದ ನಂತರ ಹುಲಿ ಹುಲ್ಲನ್ನು ತಿನ್ನತೊಡಗಿತು. ಇದರಿಂದ ಪ್ರವಾಸಿಗರು ಅಚ್ಚರಿಗೊಂಡಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ ಹುಲಿ ವಾಂತಿ ಮಾಡಿಕೊಳ್ಳಲಾರಂಭಿಸಿತು.
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಫಿಲಿಬಿಟ್ ಅರಣ್ಯಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಹುಲಿ ಆರೋಗ್ಯದ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ :
— Aysha Sheikh Siddique (@AyshaSheik84997) April 18, 2025