ಜನಸ್ಪಂದನ ನ್ಯೂಸ್, ರಾಯಚೂರು : ಫೋಟೋಶೂಟ್ ನೆಪದಲ್ಲಿ ಪತಿಯನ್ನೇ ಕೃಷ್ಣಾ ನದಿ (Krishna River) ಗೆ ಪತ್ನಿಯೋರ್ವಳು ತಳ್ಳಿದ್ದಾಳೆಂಬ ಆರೋಪ ಕೇಳಿ ಬಂದಿದೆ.
ರಾಯಚೂರು ತಾಲ್ಲೂಕಿನ ಗುರ್ಜಾಪುರ ಹತ್ತಿರದ ಕೃಷ್ಣಾ ನದಿ (Krishna River) ಸೇತುವೆ ಬಳಿ ಅಚ್ಚರಿಯ ಘಟನೆಯೊಂದು ನಡೆದಿದೆ. ನವದಂಪತಿಗಳು ಫೋಟೊಶೂಟ್ ಮಾಡುವ ನೆಪದಲ್ಲಿ ಕೃಷ್ಣಾ ನದಿ (Krishna River) ಯ ಸೇತುವೆಯ ಮೇಲೆ ಹೋಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪತಿಯನ್ನು ನದಿಗೆ ತಳ್ಳಿದ ಆರೋಪ ಪತ್ನಿಯ ಮೇಲೆ ಕೇಳಿಬಂದಿದೆ.
ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
ಸ್ಥಳೀಯರ ಮಾಹಿತಿಯ ಪ್ರಕಾರ, ಪತ್ನಿ ಮೊದಲಿಗೆ ಕೃಷ್ಣಾ ನದಿ (Krishna River) ಸೇತುವೆ ಮೇಲೆ ನಿಂತು ಫೋಟೋ ತೆಗೆಸಿಕೊಂಡಿದ್ದಾಳೆ. ಬಳಿಕ, ಪತಿಗೆ “ನೀನು ಸೇತುವೆ ತುದಿಗೆ ನಿಲ್ಲು, ನಿನ್ನ ಫೋಟೋ ತೆಗೆಸ್ತೀನಿ” ಎಂದು ಹೇಳಿದ್ದಾಳೆ. ಆಗ ಪತಿ ಸೇತುವೆಯ ತುದಿಯಲ್ಲಿ ನಿಂತ ಕ್ಷಣದಲ್ಲಿ, ಪತ್ನಿಯು ಆತನನ್ನು ಕೃಷ್ಣಾ ನದಿಗೆ ತಳ್ಳಿದ್ದಾಳೆ ಎನ್ನಲಾಗುತ್ತಿದೆ.
ಘಟನೆಯ ಸಮಯದಲ್ಲಿ ಕೃಷ್ಣಾ ನದಿ (Krishna River) ಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಹಿನ್ನಲೆಯಲ್ಲಿ ವ್ಯಕ್ತಿ ತುಸು ದೂರ ಕೊಚ್ಚಿಕೊಂಡು ಹೋಗಿ ಅಪಾಯದ ಸ್ಥಿತಿಗೆ ಸಿಲುಕಿದ್ದಾರೆ. ಆದರೆ ವ್ಯಕ್ತಿ (ಪತಿ) ಗೆ ಈಜು ಬರುತ್ತಿರುವ ಕಾರಣದಿಂದ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಅವರು, ಮಧ್ಯ ಭಾಗದ ಬಂಡೆಯೊಂದರ ಮೇಲೆ ಏರಿ ಕುಳಿತು ಸಹಾಯಕ್ಕಾಗಿ ಕೂಗಿದ್ದಾರೆ.
ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
ಈ ಸಂದರ್ಭದಲ್ಲಿ, ಕೃಷ್ಣಾ ನದಿ (Krishna River) ಹತ್ತಿರದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಆ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ್ದರು. ತಕ್ಷಣವೇ ಹಗ್ಗದ ಸಹಾಯದಿಂದ ನಿರಂತರ ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಸ್ಥಳೀಯರು ವ್ಯಕ್ತಿಯನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.
ಪತ್ನಿಯೇ ನದಿಗೆ ತಳ್ಳಿದಳೇ? ಅಥವಾ ಪತಿಯೇ ಕಾಲು ಜಾರಿ Krishna River ಗೆ ಬಿದ್ದರೇ? ಎಂಬುದರ ಬಗ್ಗೆ ದ್ವಂದ್ವ ಉಂಟಾಗಿದೆ. ಆದರೆ ಪತಿ, ಪತ್ನಿಯೇ ಉದ್ದೇಶ ಪೂರ್ವಕವಾಗಿ ತಳ್ಳಿದ್ದಾಳೆ ಎಂದು ಆರೋಪಿಸಿದ್ದಾರೆ. ಇತ್ತ ಪತ್ನಿ ಮಾತ್ರ “ಅವರು ಕಾಲು ಜಾರಿ ಪತಿ ಬಿದ್ದರು” ಎಂಬ ವಿವರಣೆ ನೀಡಿದ್ದಾರೆ.
ಇದನ್ನು ಓದಿ : Humaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!
ಕೆಲವರ ಹೇಳಿಕೆಗಳ ಪ್ರಕಾರ ಪತ್ನಿಯು ಈ ಕೃತ್ಯವನ್ನು ಜಾಣ್ಮೆಯಿಂದ ಮಾಡಿದ್ದಾಳೆ ಎಂದು ಶಂಕೆ ವ್ಯಕ್ತವಾಗಿದೆ. ಈ ದಂಪತಿ ಯಾರು.? ಯಾವ ಗ್ರಾಮದಿಂದ ಬಂದಿದ್ದರು.? ಏತಕ್ಕಾಗಿ ಬಂದಿದ್ದರು.? ಈ ಘಟನೆಯ ಹಿಂದಿರುವ ನಿಖರ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ಮಾಹಿತಿ ಕಲೆಹಾಕಲು ತನಿಖೆ ಮುಂದುವರೆಸಿದ್ದಾರೆ.
Note : ಇತ್ತೀಚಿನ ದಿನಗಳಲ್ಲಿ ಪತಿಯ ಮೇಲೆ ಪತ್ನಿಯಿಂದ ನಡೆಯುತ್ತಿರುವ ಹಲ್ಲೆಗಳ ಅಥವಾ ಹತ್ಯೆಯಂತಹ ಘಟನೆಗಳು ತುಂಬಾನೇ ಹೆಚ್ಚುತ್ತಿವೆ. ಈ ಘಟನೆಗಳು ಸಮಾಜಕ್ಕೆ ಏನು ಸಂದೇಶ ಕೊಡುತಿವೆ ಅಂತ ಯೋಚಿಸಬೇಕಾಗಿದೆ.
ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ನದಿಗೆ ಬಿದ್ದ Helicopter ; 5 ಜನರಿಗೆ ಗಾಯ.!
ಜನಸ್ಪಂದನ ನ್ಯೂಸ್, ಡೆಸ್ಕ್ : ರಾಯಲ್ ಮಲೇಷಿಯನ್ ಪೊಲೀಸ್ (PDRM) ಇಲಾಖೆಗೆ ಸೇರಿದ ಹೆಲಿಕಾಪ್ಟರ್ (Helicopter) ತಾಂತ್ರಿಕ ದೋಷದಿಂದ ನದಿಗೆ ಪತನಗೊಂಡಿರುವ ಘಟನೆ ಮಲೇಷಿಯಾದ ಜೋಹೋರ್ ರಾಜ್ಯದ ಸುಂಗೈ ಪುಲೈ ಪ್ರದೇಶದಲ್ಲಿ ನಡೆದಿದೆ.
ಜುಲೈ 10ರಂದು ಬೆಳಿಗ್ಗೆ ನಡೆದ ಈ ಅವಘಡದಲ್ಲಿ ಐದು ಸಿಬ್ಬಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಪತನಗೊಂಡ ಹೆಲಿಕಾಪ್ಟರ್ (Helicopter) ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 11 ರ ದ್ವಾದಶ ರಾಶಿಗಳ ಫಲಾಫಲ.!
ತುರ್ತು ಭೂಸ್ಪರ್ಶ ವಿಫಲ – ನದಿಗೆ ಬಿದ್ದು ರಕ್ಷಣಾ ಕಾರ್ಯಾಚರಣೆ :
ಫ್ರೆಂಚ್ ತಯಾರಿಕೆಯ ಏರ್‌ಬಸ್ AS355N ಮಾದರಿಯ ಈ ಹೆಲಿಕಾಪ್ಟರ್ (Helicopter) , ಮಿಲಿಟರಿ ಕಸರತ್ತು MITSATOM 2025ರ ಭಾಗವಾಗಿ ಫ್ಲೈಪಾಸ್ಟ್ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದ ವೇಳೆ ತಾಂಜಂಗ್ ಕುಪಾಂಗ್ ಠಾಣೆಯಿಂದ ಬೆಳಿಗ್ಗೆ 9:51ಕ್ಕೆ ಟೇಕಾಫ್ ಆಗಿತ್ತು. ಟೇಕಾಫ್ ಆಗಿ ಕೇವಲ 46 ನಿಮಿಷಗಳ ನಂತರ ತಾಂತ್ರಿಕ ದೋಷ ಉಂಟಾಗಿ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿ ವಿಫಲವಾದ ಪರಿಣಾಮ ಹೆಲಿಕಾಪ್ಟರ್ ನದಿಗೆ ಬಿದ್ದಿತು.
ಘಟನೆಯ ಬಳಿಕ ಮೆರೈನ್ ಪೊಲೀಸ್ ಪಡೆ ಮತ್ತು ಮಲೇಷಿಯನ್ ಮ್ಯಾರಿಟೈಮ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ (MMEA) ತಕ್ಷಣ ಕಾರ್ಯಪ್ರವೃತ್ತರಾಗಿ, ಪೈಲಟ್ ಸೇರಿ ಐದು ಮಂದಿಯನ್ನು ರಕ್ಷಿಸಿದ್ದು, ಸದ್ಯ ಅವರನ್ನು ಜೋಹೋರ್ ಬಾರುವಿನ ಸುಲ್ತಾನಾ ಅಮಿನಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನು ಓದಿ : “Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!
ಇಬ್ಬರಿಗೆ ಉಸಿರಾಟದ ಯಂತ್ರ (Breathing machine) ದ ಸಹಾಯ ಅಗತ್ಯವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಮಾತ್ರ ಸುದೈವದ ಸಂಗತಿ.
30 ವರ್ಷ ಹಳೆಯ ಹೆಲಿಕಾಪ್ಟರ್ (Helicopter) – ತಾಂತ್ರಿಕ ದೋಷವೇ ಕಾರಣ.?
ಪತನಗೊಂಡ ಹೆಲಿಕಾಪ್ಟರ್ (Helicopter) ನ್ನು 1996ರಲ್ಲಿ ಮಲೇಷಿಯಾ ಪೊಲೀಸರು ಬಳಸಲು ಪಡೆದಿದ್ದು, ಅದು ಈಗ 30 ವರ್ಷ ಹಳೆಯದಾಗಿದೆ. ಈ ಹಿನ್ನೆಲೆ, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವಾಯಿತೇ ಎಂಬ ಅನುಮಾನ ಉದಯವಾಗಿದೆ.
ಇದನ್ನು ಓದಿ : Dead body : ಮಾವಿನಹಣ್ಣಿನ ಚೀಲವೆಂದು ಮಹಿಳೆಯ ಶವ ಸಾಗಾಟ.!
ಮಲೇಷಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (CAAM) ಈ ಘಟನೆಯನ್ನು “ಗಂಭೀರ ವಿಮಾನ ದುರ್ಘಟನೆ” ಎಂದು ಘೋಷಿಸಿದ್ದು, ತನಿಖೆಯನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನಡೆಸಲಿದೆ. ಹಿನ್ನಲೆಯಲ್ಲಿ ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚುವುದು ಪ್ರಾಥಮಿಕ ಗುರಿಯಾಗಿದೆ.
ಅಪಘಾತದ ದೃಶ್ಯಗಳು ವೈರಲ್ :
ಘಟನೆ ಸಂಬಂಧದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ X (ಹಳೆಯ ಟ್ವಿಟ್ಟರ್)ನಲ್ಲಿ ವೇಗವಾಗಿ ಹರಡುತ್ತಿವೆ. ಹೆಲಿಕಾಪ್ಟರ್ ನದಿಗೆ ಬಿದ್ದು, ರಕ್ಷಣಾ ದೋಣಿಗಳು ಸ್ಥಳಕ್ಕೆ ಧಾವಿಸುವ ದೃಶ್ಯಗಳು ಜನರಲ್ಲಿ ಕಳಕಳಿಯನ್ನು ಹುಟ್ಟುಹಾಕಿವೆ.
ಇದನ್ನು ಓದಿ : ಹಾಸ್ಯ ನಟ ಸಂಜು ಬಸಯ್ಯ ಪತ್ನಿಗೆ obscene-message ಕಳುಹಿಸಿದ ವಿದ್ಯಾರ್ಥಿ : ಮುಂದೆನಾಯ್ತು.!
ಪೂರ್ವಘಟನೆಗಳ ಜೊತೆ ಸಂಪರ್ಕ :
ಈ ಪತನವು ಮಲೇಷಿಯಾದಲ್ಲಿ ಈಮಧ್ಯೆ ನಡೆದ ಇನ್ನಷ್ಟು ಹೆಲಿಕಾಪ್ಟರ್ (Helicopter) ಅಪಘಾತಗಳ ಸಾಲಿನಲ್ಲಿ ಸೇರಿದೆ. 2024ರ ಫೆಬ್ರವರಿಯಲ್ಲಿ ಪಹಾಂಗ್‌ನಲ್ಲಿ ನಡೆದ ಬೆಲ್ 206L-4 ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಈ ವರ್ಷ ಏಪ್ರಿಲ್‌ನಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ Bell 206 ಪತನದಲ್ಲಿ ಆರು ಜನರು ಮೃತರಾಗಿದ್ದರು.
ಸುರಕ್ಷತೆ ಮೇಲೆ ಪ್ರಶ್ನೆ :
ಈ ಘಟನೆಯಿಂದ ಮಲೇಷಿಯಾದ ಪೊಲೀಸ್ ವಾಯು ಘಟಕದ ಹೆಲಿಕಾಪ್ಟರ್ (Helicopter) ಗಳ ನಿರ್ವಹಣೆ ಮತ್ತು ಸ್ಥಿತಿಗತಿಯ ಮೇಲೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತಿವೆ. ಹಳೆಯ ವಿಮಾನಗಳನ್ನು ಬಳಸುವ ಪದ್ದತಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯಕ್ಕೆ ಕಾರಣವಾಗಬಹುದೆಂಬ ಆತಂಕ ಸಹ ವ್ಯಕ್ತವಾಗಿದೆ.
ಹೆಲಿಕಾಪ್ಟರ್ ಅಪಘಾತದ ಹಿಂದಿನ ನಿಖರವಾದ ಕಾರಣವನ್ನು ತಿಳಿಯಲು ಮುಂದಿನ ಕೆಲವು ದಿನಗಳು ನಿರ್ಣಾಯಕವಾಗಲಿವೆ.
ವಿಡಿಯೋ :
WATCH: Police helicopter crashes into Pulai River in Johor, Malaysia, at least 5 people hospitalized. pic.twitter.com/3456sNg5xT
— AZ Intel (@AZ_Intel_) July 10, 2025