ಜನಸ್ಪಂದನ ನ್ಯೂಸ್, ಡೆಸ್ಕ್ : ವೇಗವಾಗಿ ಬಂದ ಕಾರು (The fastest car) ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಪ್ರಯಾಣಿಕರು ಸಾವಿಗೀಡಾದ ಘಟನೆ ಮಹಾರಾಷ್ಟ್ರದ ನಾರಾಯಣಗಾಂವ್ (Narayanagaon in Maharashtra) ಬಳಿಯ ನಾಸಿಕ್- ಪುಣೆ ಹೆದ್ದಾರಿಯಲ್ಲಿ Nashik- Pune Highway ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಟ್ರಕ್ ವೊಂದು ಹಿಂದಿನಿಂದ ಬಂದ ಮಿನಿವ್ಯಾನ್ ಗೆ ಡಿಕ್ಕಿ ಹೊಡೆದಿದ್ದು, ನಿಂತಿದ್ದ ಬಸ್‌ಗೆ ಮಿನಿವ್ಯಾನ್ ಗೆ ಡಿಕ್ಕಿ ಹೊಡೆದಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಎಸ್‌ಪಿ ಪಂಕಜ್ ದೇಶಮುಖ್ (Pune Rural Police SP Pankaj Deshmukh) ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : ಇನ್ಮುಂದೆ BPL ಕಾರ್ಡ್ ಹೊಂದಿದ ಕುಟುಂಬಗಳಿಗೆ CT Scan ಮತ್ತು MRI ಸ್ಕ್ಯಾನಿಂಗ್ ಸೇವೆ Free Free.!
ಟ್ರಕ್ ನಾರಾಯಣಗಾಂವ್ ಕಡೆಗೆ ಹೊರಟಿದ್ದ ಮಿನಿವ್ಯಾನ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಮಿನಿ ವ್ಯಾನ್ ಹೈವೇ ಬದಿ ನಿಲ್ಲಿಸಿದ್ದ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ.
ವಾಹನದಲ್ಲಿದ್ದ ನಾಲ್ವರು ಗಂಡಸರು, ನಾಲ್ವರು ಮಹಿಳೆಯರು ಜೊತೆಗೆ ಐದು ವರ್ಷದ ಮಗು ಸೇರಿ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ.
ಇದನ್ನು ಓದಿ : SCI : ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಅಪಘಾತದಲ್ಲಿ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.