ಜನಸ್ಪಂದನ ನ್ಯೂಸ್, ಡೆಸ್ಕ್ : ಲಾಸ್ ಏಂಜಲೀಸ್ನಲ್ಲಿ (Los Angeles) ಬೆಂಕಿ ಬಿದ್ದ ಪರಿಣಾಮ ಹಲವು ಮನೆಗಳು ಸುಟ್ಟು ಕರಕಲಾಗಿದ್ದು, 24ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಲಾಸ್ ಏಂಜಲೀಸ್ ಬಗ್ಗೆ ಹಲವು ವಿಡಿಯೋಗಳು ಹರಿದಾಡುತ್ತಿವೆ.
ಇದನ್ನು ಓದಿ : SCI : ಭಾರತದ ಸುಪ್ರೀಂ ಕೋರ್ಟ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಹಾಲಿವುಡ್ ಎಂಬ ಸ್ಥಳದಲ್ಲಿ ಜೋರಾಗಿ ಬೆಂಕಿ ಹೊತ್ತಿ ಉರಿದ ರೀತಿಯೇ ಲಾಸ್ ಏಂಜಲೀಸ್ನ ಮನೆಗಳೆಲ್ಲ ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿರುವ (All the houses were gutted in the fire) ರೀತಿ ವಿಡಿಯೋ ಎಡಿಟ್ ಮಾಡಿ ಹರಿಬಿಡಲಾಗಿದೆ.
ಆದರೆ ಇವು ಫೇಕ್ ವಿಡಿಯೋಗಳಾಗಿದ್ದು, ಇಲ್ಲಿ ಅಂಥ ದೊಡ್ಡ ಅವಘಡವೇ ಆಗಿಲ್ಲವೆಂದು ಅಲ್ಲಿದ್ದವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ : 13ನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮೂರು ಬಾರಿ ಜಿಗಿದರೂ ಬದುಕುಳಿದ ವ್ಯಕ್ತಿ.!
ವೈರಲ್ ಆಗಿರುವ ಫೇಕ್ ವೀಡಿಯೋಗಳಲ್ಲಿ ಪಕ್ಷಿಯೊಂದು ಬೆಂಕಿ ಉಗುಳುತ್ತಿರುವ ವಿಡಿಯೋ (A video of a bird spitting fire) ಒಂದು. ಇದೇ ಪಕ್ಷಿ ಲಾಸ್ ಏಂಜಲೀಸ್ನಲ್ಲಿ ಬೆಂಕಿ ಅವಘಡಕ್ಕೆ ಕಾರಣ ಎಂದು ಹಲವರು ಆರೋಪಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ಜೋರಾಗಿದೆ. ಆದರೆ ಫ್ಯಾಕ್ಟ್ ಚೆಕ್ ಮಾಡಿದಾಗ, ಇದು ಫೇಕ್ ವಿಡಿಯೋ, ಬೆಂಕಿ ಉಗುಳುವ ಇಂತಹ ಯಾವುದೇ ರೀತಿಯ ಪಕ್ಷಿ ಇಲ್ಲವೆಂದು ಗೊತ್ತಾಗಿದೆ.
ಇದನ್ನು ಓದಿ : Divorce : ಪರಿಹಾರದ ಹಣ ಸಿಗ್ತಿದ್ದಂತೆ ಮಾಜಿ ಪತ್ನಿ ಪುಲ್ ಖುಷಿ ; ಮಾಜಿ ಗಂಡ ಪುಲ್ ಡಲ್.!
Fabricio Rabachim ಎಂಬ ವ್ಯಕ್ತಿ ಈ ಪಕ್ಷಿ ನಡೆಯುತ್ತಿರುವ ವಿಡಿಯೋ ಮಾಡಿದ್ದು, ಆ ಪಕ್ಷಿ ಕೊಂಕು ಬಳಸುತ್ತಿದ್ದ ರೀತಿಯನ್ನು ಕಂಡು, ಅದನ್ನು ಎಡಿಟ್ ಮಾಡಿ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ, ಅದು ಕೊಂಕಿನಿಂದ ಬೆಂಕಿ ಉಗುಳುವ ಹಾಗೆ ಎಡಿಟ್ ಮಾಡಿ, 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದ. ಇದು ಈ ವಿಡಿಯೋದ ಸತ್ಯಾಸತ್ಯತೆ.
ಈ ವಿಡಿಯೋವನ್ನು ಇಟ್ಟುಕೊಂಡು ಇದೇ ಪಕ್ಷಿ ಲಾಸ್ ಏಂಜಲೀಸ್ನಲ್ಲಿ ಬೆಂಕಿಯುಗುಳಿದ್ದು ಎಂದು ಸುಳ್ಳು ಸುದ್ದಿಯನ್ನು (fake news) ವೈರಲ್ ಮಾಡಿದ್ದಾರೆ.
ಇದನ್ನು ಓದಿ : ಸಿಎಂ ಸಿದ್ದು ಹೆಸರಿನಲ್ಲಿ Free Recharge ಅಂತಾ ಲಿಂಕ್ ಬಂತಾ ; ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ.!
ಆದರೆ ಇದು ಸುಳ್ಳು ಸುದ್ದಿ. ಇದು ಯಾವುದೇ ಪಕ್ಷಿಯ ಕೆಲಸವಲ್ಲ. ಇದು ನಾನು ಮಾಡಿದ ಎಡಿಟೆಡ್ ವಿಡಿಯೋ ಎಂದು Fabricio Rabachim ಹೇಳಿದ್ದಾರೆ. ಒಟ್ಟಾರೆಯಾಗಿ ಇದು ಸುಳ್ಳು ಸುದ್ದಿ ಎಂದು ವರದಿಯಿಂದ ತಿಳಿದು ಬಂದಿದೆ.
ವೈರಲ್ ಆಗಿರುವ ಫೇಕ್ ವಿಡಿಯೋ ಇಲ್ಲಿದೆ ನೋಡಿ : https://www.instagram.com/reel/DAI6emvSw-J/?utm_source=ig_web_copy_link
ಹಿಂದಿನ ಸುದ್ದಿ : ಪ್ರೇಯಸಿಯ ಖಾಸಗಿ Video, ಪೋಟೋ ವೈರಲ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ.!
ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿಯ ಉಣಕಲ್ನಲ್ಲಿ (Unakal of Hubli) ಪ್ರೇಯಸಿಯ ಕಾಟದಿಂದ ಬೇಸತ್ತು ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ (suicide) ಘಟನೆ ನಡೆದಿದೆ.
ಇದನ್ನು ಓದಿ : ಬೆಕ್ಕಿನ ಮರಿ ಓಡಿಸಿದಂತೆ ಚಿಕ್ಕ ಕೋಲು ಹಿಡಿದು ಸಿಂಹವನ್ನು ಓಡಿಸಿದ ವ್ಯಕ್ತಿ ; Video ನೋಡಿ.!
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ್ ಉಣಕಲ್ (27) ಆತ್ಮಹತ್ಯೆಗೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ ಶನಿವಾರ ಮನೆಯಿಂದ ನಾಪತ್ತೆಯಾಗಿದ್ದು (missing), ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : ಮಧ್ಯರಾತ್ರಿ ಕರೆದಳೆಂದು ಗೆಳತಿಯ ಮನೆಗೆ ಹೋದ Lover ; ಬೆಳಗಾಗುವುದರಲ್ಲಿ ಆದದ್ದೇ ಬೇರೆ.!
ಸಂದೇಶ್ ಮೋಟಾರ್ ಬೈಕ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಶನಿವಾರ ದಿಢೀರ್ (suddenly) ಅಂತ ಮನೆಯಿಂದ ನಾಪತ್ತೆಯಾಗಿದ್ದ.
ಈ ಕುರಿತು ಕುಟುಂಬದವರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಸಂದೇಶ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?
ಆತ್ಮಹತ್ಯೆಗೂ ಮುನ್ನ ಸಂದೇಶ್, ನನ್ನ ಸಾವಿಗೆ ಸಂಜನಾ ಕಾರಣ ಎಂದು ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಅಲ್ಲದೇ ತನ್ನ ಪ್ರೇಯಸಿಯ ಜೊತೆಗಿನ ಖಾಸಗಿ ವಿಡಿಯೋ, ವಾಟ್ಸಪ್ ಚಾಟ್, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ (He posted private video, whatsapp chat, conversation and photos with his girlfriend to his friends and on social media) ಎನ್ನಲಾಗಿದೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (Register a case), ಪೊಲೀಸರು ತನಿಖೆ ನಡೆಸುತ್ತಿದ್ದಾರೆ.