ಜನಸ್ಪಂದನ ನ್ಯೂಸ್, ಡೆಸ್ಕ್ : ತಾನು ಕೆಲಸ ಮಾಡುತ್ತಿದ್ದ ಕಟ್ಟಡದ 13ನೇ ಅಂತಸ್ತಿನಿಂದ ಹಾರಿ ಕಾರ್ಮಿಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು (Attempted suicide), ಆತನ ಆಯುಷ್ಯ ಗಟ್ಟಿಯಾಗಿದ್ದ ಹಿನ್ನಲೆ 8ನೇ ಮಹಡಿಯಲ್ಲಿ ಸಿಲುಕಿಕೊಂಡ ಘಟನೆ ಮುಂಬೈನ (Mumbai) ವಿಕ್ರೋಲಿಯ ಕನ್ನಂವಾರ್ ನಲ್ಲಿ ನಡೆದಿದೆ.
ಕಾರ್ಮಿಕ ಜೀವನದಲ್ಲಿ ಜಿಗುಪ್ಸೆಗೊಂಡು ನಿರ್ಮಾಣ ಹಂತದಲ್ಲಿದ್ದ 13 ಅಂತಸ್ತಿನ ಕಟ್ಟಡದಿಂದ (A 13-storey building under construction) ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಹಾಡಹಗಲೇ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ರೂ.93 ಲಕ್ಷ ದರೋಡೆ.!
ಸಾಯಲೆಬೇಕೆಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದ ಕಾರ್ಮಿಕ, ಎರಡು ಬಾರಿ ಕೆಳಗೆ ಜಿಗಿದಿದ್ದಾನೆ, ಆದರೆ ಸುರಕ್ಷತಾ ಜಾಲಕ್ಕೆ (Safety net) ಸಿಕ್ಕಿಹಾಕಿಕೊಂಡ ಪರಿಣಾಮ ಆತ ಸುರಕ್ಷಿತವಾಗಿದ್ದಾನೆ.
ಈ ಸಂಪೂರ್ಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Belagavi : ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅ*ಚಾ* ; ವಿಡಿಯೋ ವೈರಲ್ ಮಾಡುವ ಬೆದರಿಕೆ.!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಕಟ್ಟಡದ 13 ನೇ ಮಹಡಿಯಿಂದ ಕಾರ್ಮಿಕನು (worker) ನಿರ್ಮಾಣ ಹಂತದಲ್ಲಿರುವ ಜಿಗಿದಿದ್ದಾನೆ. ಆದರೆ 8 ನೇ ಮಹಡಿಯಲ್ಲಿ ಅಳವಡಿಸಿದ್ದ ಸುರಕ್ಷತಾ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.
ಇನ್ನು ಈ ವೇಳೆ ಕಟ್ಟಡದಲ್ಲಿದ್ದ ಇತರ ಕಾರ್ಮಿಕರನ್ನು ನೆಟ್ ಸಹಾಯದಿಂದ ಆತನ ಮನವೊಲಿಸಿ ಮೇಲಕ್ಕೆ ಬರುವಂತೆ ಕರೆದಿದ್ದಾರೆ. ಆದರೆ ಆತ ಸ್ವಲ್ಪ ಸಮಯದ ತನಕ ಬಲೆ ಹಿಡಿದುಕೊಂಡು ನೇತಾಡಿದ್ದಾನೆ (hanging). ಸ್ವಲ್ಪ ಸಮಯದ ನಂತರ ಅವನು ಮತ್ತೆ ಕೆಳಗೆ ಜಿಗಿಯುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : ಪ್ರೇಯಸಿಯ ಖಾಸಗಿ Video, ಪೋಟೋ ವೈರಲ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ.!
ಆದರೆ ಇಲ್ಲೂ ಈ ಕಾರ್ಮಿಕ ಮೂರನೇ ಮಹಡಿಯಲ್ಲಿ ಅಳವಡಿಸಿರುವ ಸುರಕ್ಷತಾ ಜಾಲದಲ್ಲಿ ಸಿಲುಕಿಕೊಂಡಿದ್ದಾನೆ. ಅಷ್ಟೇ ಅಲ್ಲ, ಆತ ಮತ್ತೆ ಮೂರನೇ ಮಹಡಿಯಿಂದ ಜಿಗಿದಿದ್ದಾನೆ, ಆದರೆ ಇದಾದ ನಂತರ ಕೆಳ ಮಹಡಿಯಲ್ಲಿದ್ದ ಅಳವಡಿಸಿದ್ದ ಸುರಕ್ಷತಾ ನೆಟ್‌ನಲ್ಲಿ ಸಿಲುಕಿಕೊಂಡಿದ್ದು, ಆತನ ಜೀವ ಉಳಿದಿದೆ.
ವಿಡಿಯೋ ಇಲ್ಲಿದೆ :
In a miraculous incident at Kannamwar Nagar, a construction worker survived after jumping from the 13th floor of an under-construction building. The worker,landed on safety nets installed on the 8th and 3rd floors before finally being caught in a ground-level net.@mumbaimatterz pic.twitter.com/MyYHS7UlFc
— Visshal Singh (@VishooSingh) January 15, 2025
ಹಿಂದಿನ ಸುದ್ದಿ : ಪ್ರೇಯಸಿಯ ಖಾಸಗಿ Video, ಪೋಟೋ ವೈರಲ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ.!
ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿಯ ಉಣಕಲ್‌ನಲ್ಲಿ (Unakal of Hubli) ಪ್ರೇಯಸಿಯ ಕಾಟದಿಂದ ಬೇಸತ್ತು ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ (suicide) ಘಟನೆ ನಡೆದಿದೆ.
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ್ ಉಣಕಲ್ (27) ಆತ್ಮಹತ್ಯೆಗೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಸಹಾಯಕ ಅಕೌಂಟೆಂಟ್ ಮತ್ತು ಲೈಬ್ರರಿಯನ್ ಸೇರಿ 2,882 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ ಶನಿವಾರ ಮನೆಯಿಂದ ನಾಪತ್ತೆಯಾಗಿದ್ದು (missing), ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸಂದೇಶ್ ಮೋಟಾರ್ ಬೈಕ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಶನಿವಾರ ದಿಢೀರ್ (suddenly) ಅಂತ ಮನೆಯಿಂದ ನಾಪತ್ತೆಯಾಗಿದ್ದ.
ಇದನ್ನು ಓದಿ : ಸಿಎಂ ಸಿದ್ದು ಹೆಸರಿನಲ್ಲಿ Free Recharge ಅಂತಾ ಲಿಂಕ್ ಬಂತಾ ; ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ.!
ಈ ಕುರಿತು ಕುಟುಂಬದವರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಸಂದೇಶ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೂ ಮುನ್ನ ಸಂದೇಶ್, ನನ್ನ ಸಾವಿಗೆ ಸಂಜನಾ ಕಾರಣ ಎಂದು ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಅಲ್ಲದೇ ತನ್ನ ಪ್ರೇಯಸಿಯ ಜೊತೆಗಿನ ಖಾಸಗಿ ವಿಡಿಯೋ, ವಾಟ್ಸಪ್ ಚಾಟ್, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ (He posted private video, whatsapp chat, conversation and photos with his girlfriend to his friends and on social media) ಎನ್ನಲಾಗಿದೆ.
ಇದನ್ನು ಓದಿ : ಮಧ್ಯರಾತ್ರಿ ಕರೆದಳೆಂದು ಗೆಳತಿಯ ಮನೆಗೆ ಹೋದ Lover ; ಬೆಳಗಾಗುವುದರಲ್ಲಿ ಆದದ್ದೇ ಬೇರೆ.!
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (Register a case), ಪೊಲೀಸರು ತನಿಖೆ ನಡೆಸುತ್ತಿದ್ದಾರೆ.