Saturday, February 15, 2025
HomeCrime Newsಹಾಡಹಗಲೇ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ರೂ.93 ಲಕ್ಷ ದರೋಡೆ.!
spot_img
spot_img
spot_img
spot_img

ಹಾಡಹಗಲೇ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ರೂ.93 ಲಕ್ಷ ದರೋಡೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೀದರ್ : ದರೋಡೆಕೋರರು SBI ಬ್ಯಾಂಕ್ ನ ಎಟಿಎಂನಲ್ಲಿ ಹಣ ಜಮೆ ಮಾಡಲು ಬಂದಿದ್ದ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿ,‌ ಸಿನಿಮೀಯ ರೀತಿಯಲ್ಲಿ ಹಣ ದೋಚಿ ಎಸ್ಕೇಪ್ ಆದ ಘಟನೆ ಗುರುವಾರ (ಜ.16) ಬೀದರ್ ನಗರದಲ್ಲಿ ನಡೆದಿದೆ.

ಈ ವೇಳೆ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Bollywood Hero ಸೈಫ್ ಅಲಿ ಖಾನ್‌ಗೆ ಚಾಕು ಇರಿತ ; ಸ್ಥಿತಿ ಗಂಭೀರ.!

ಬೀದರ್ ನಗರದ ಡಿಸಿ ಕಚೇರಿ ಸಮೀಪ ಇರುವ ಎಸ್ ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣ ಜಮೆ ಮಾಡಲು ಸಿಬ್ಬಂದಿ ಬಂದಿದ್ದರು.

ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿದ್ದು, ಬಳಿಕ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : Sneck bite : ಹಾವಿನ ವಿಷವನ್ನು ದೇಹದಿಂದ ತೆಗೆದು ಹಾಕುತ್ತೆ ಈ ದಿವ್ಯೌಷಧಿ.!

ಈ ವೇಳೆ ಒಬ್ಬ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ದರೋಡೆಕೋರರು 93 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬ್ಯಾಂಕ್ ನ ಹೊರಗೆ ಸಾರ್ವಜನಿಕರು ಜಮಾಯಿಸಿದ್ದು, ಸ್ಥಳದಲ್ಲಿ ಬಿಗುವಿನ‌ ವಾತಾವರಣ ನಿರ್ಮಾಣವಾಗಿದೆ.

ವಿಡಿಯೋ ನೋಡಲು ಈ ಕೆಳಗಿನ link click ಮಾಡಿ

https://www.facebook.com/share/v/1BTZZBJriF/

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!