ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿಯ ಉಣಕಲ್‌ನಲ್ಲಿ (Unakal of Hubli) ಪ್ರೇಯಸಿಯ ಕಾಟದಿಂದ ಬೇಸತ್ತು ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ (suicide) ಘಟನೆ ನಡೆದಿದೆ.
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ್ ಉಣಕಲ್ (27) ಆತ್ಮಹತ್ಯೆಗೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಸಹಾಯಕ ಅಕೌಂಟೆಂಟ್ ಮತ್ತು ಲೈಬ್ರರಿಯನ್ ಸೇರಿ 2,882 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ ಶನಿವಾರ ಮನೆಯಿಂದ ನಾಪತ್ತೆಯಾಗಿದ್ದು (missing), ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸಂದೇಶ್ ಮೋಟಾರ್ ಬೈಕ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಶನಿವಾರ ದಿಢೀರ್ (suddenly) ಅಂತ ಮನೆಯಿಂದ ನಾಪತ್ತೆಯಾಗಿದ್ದ.
ಇದನ್ನು ಓದಿ : Divorce : ಪರಿಹಾರದ ಹಣ ಸಿಗ್ತಿದ್ದಂತೆ ಮಾಜಿ ಪತ್ನಿ ಪುಲ್ ಖುಷಿ ; ಮಾಜಿ ಗಂಡ ಪುಲ್ ಡಲ್.!
ಈ ಕುರಿತು ಕುಟುಂಬದವರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಸಂದೇಶ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೂ ಮುನ್ನ ಸಂದೇಶ್, ನನ್ನ ಸಾವಿಗೆ ಸಂಜನಾ ಕಾರಣ ಎಂದು ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಅಲ್ಲದೇ ತನ್ನ ಪ್ರೇಯಸಿಯ ಜೊತೆಗಿನ ಖಾಸಗಿ ವಿಡಿಯೋ, ವಾಟ್ಸಪ್ ಚಾಟ್, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ (He posted private video, whatsapp chat, conversation and photos with his girlfriend to his friends and on social media) ಎನ್ನಲಾಗಿದೆ.
ಇದನ್ನು ಓದಿ : ಸಿಎಂ ಸಿದ್ದು ಹೆಸರಿನಲ್ಲಿ Free Recharge ಅಂತಾ ಲಿಂಕ್ ಬಂತಾ ; ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ.!
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (Register a case), ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿಂದಿನ ಸುದ್ದಿ : ಬೆಳಗಾವಿ : ಸಂಕ್ರಮಣ ಹಬ್ಬದಂದೇ ಚಾಕುವಿನಿಂದ ಇರಿದು ಅಳಿಯನಿಂದ ಅತ್ತೆಯ ಕೊಲೆ.!
ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರೈತ ಗಲ್ಲಿಯಲ್ಲಿ ಎಳ್ಳು ಬೆಲ್ಲ ಕೊಡಲು ಬಂದಿದ್ದ ಅತ್ತೆಯನ್ನೇ ಚಾಕುವಿನಿಂದ ಇರಿದು ಅಳಿಯನೊಬ್ಬ (Son in law) ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಇದನ್ನು ಓದಿ : ಬೆಕ್ಕಿನ ಮರಿ ಓಡಿಸಿದಂತೆ ಚಿಕ್ಕ ಕೋಲು ಹಿಡಿದು ಸಿಂಹವನ್ನು ಓಡಿಸಿದ ವ್ಯಕ್ತಿ ; Video ನೋಡಿ.!
ಅತ್ತೆ ರೇಣುಕಾಳನ್ನು (40) ಅಳಿಯ ಶುಭಂ ಬಿರ್ಜೆ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮೂರು ವರ್ಷಗಳ ಹಿಂದಷ್ಟೇ ಛಾಯಾ ಜತೆಗೆ ಶುಭಂ ಮದುವೆ ಮಾಡಿಕೊಂಡಿದ್ದನು. ಹೀಗಾಗಿ ಅತ್ತೆ ರೇಣುಕಾ ಅವರು ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ (Background of Sankranti festival) ಬೆಳಗ್ಗೆ ಅಡುಗೆ ಮಾಡಿಕೊಂಡು ಮಗಳಿಗೆ ಹಬ್ಬದ ಊಟ ಕೊಡಬೇಕು ಎಂದು ದೊಡ್ಡ ಊಟದ ಬುತ್ತಿಯನ್ನು ಸಿದ್ಧಪಡಿಸಿಕೊಂಡು 11 ಗಂಟೆಯ ಸುಮಾರಿಗೆ ಮಗಳ ಮನೆಗೆ ತೆರಳಿದ್ದಾರೆ.
ಇದನ್ನು ಓದಿ : ಮಧ್ಯರಾತ್ರಿ ಕರೆದಳೆಂದು ಗೆಳತಿಯ ಮನೆಗೆ ಹೋದ Lover ; ಬೆಳಗಾಗುವುದರಲ್ಲಿ ಆದದ್ದೇ ಬೇರೆ.!
ಆದರೆ ಅಳಿಯ ಶುಭಂ ನೀವೇಕೆ ನಮ್ಮ ಮನೆಗೆ ಬರುತ್ತೀರಿ ಎಂದು ಗಲಾಟೆ ಶುರು ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ (Turn to disaster) ಅತ್ತೆಯ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.
ತೀವ್ರ ರಕ್ತಸ್ರಾವವಾಗಿ (Severe bleeding) ಬಳಲುತ್ತಿದ್ದ ರೇಣುಕಾ ಅವರನ್ನು ಕೂಡಲೇ ಸ್ಥಳೀಯರು ಸೇರಿಕೊಂಡು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರೇಣುಕಾ ಅವರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!
ಇನ್ನು ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ (DCP Rohan Jagadish), ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೇಣುಕಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ (Postmortem examination) ಬೆಳಗಾವಿ ಬೀಮ್ಸ್ ಶವಗಾರಕ್ಕೆ ರವಾನಿಸಲಾಗಿದೆ.
ಬೆಳಗಾವಿ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕೊಲೆಗೆ ಸಂಬಂಧಿಸಿದಂತೆ ಶುಭಂ ಹಾಗೂ ಅವರ ತಂದೆ- ತಾಯಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.