ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರು ನ್ಯಾಯಾಲಯವು (Mangalore Court) ಆರೋಪಿಯೋರ್ವನಿಗೆ ಮರಣ ದಂಡನೆ (death penalty) ವಿಧಿಸಿ ಆದೇಶ ಹೊರಡಿಸಿದೆ.
ಆರೋಪಿ ಹಿತೇಶ್ ಶೆಟ್ಟಿಗಾರ್ ಮೂವರು ಮಕ್ಕಳನ್ನು ಬಾವಿಗೆ ನೂಕಿ ಕೊಂದು, ಬಳಿಕ ಪತ್ನಿಯನ್ನು ಬಾವಿಗೆ ದೂಡಿ ಕೊಲ್ಲಲು ಯತ್ನಿಸಿದ್ದ (attempt to murder).
2022ರ ಜೂನ್ 23ರಂದು ಸಂಜೆ ವೇಳೆ ತಾಳಿಪಾಡಿ ಗ್ರಾಮದ ಪದ್ಮನೂರಿನಲ್ಲಿ ಹಿತೇಶ್ ಶೆಟ್ಟಿಗಾರ್ ತನ್ನ ಮಕ್ಕಳಾದ ರಶ್ಮೀತಾ (13), ಉದಯ ಕುಮಾರ (11), ದಕ್ಷೀತ್ (5) ಎಂಬ ಮಕ್ಕಳನ್ನು ಬಾವಿಗೆ ನೂಕಿ ಕೊಲೆ ಮಾಡಿದ್ದಲ್ಲದೆ ತನ್ನ ಪತ್ನಿ ಲಕ್ಷ್ಮಿ ಅವರನ್ನು ಬಾವಿಗೆ ನೂಕಿ ಕೊಲೆಗೆ ಯತ್ನಿಸಿದ್ದ.
ಇದನ್ನು ಓದಿ : ಚಿಕಿತ್ಸೆ ಫಲಿಸದೆ ಶಿಶು – ತಾಯಿ ಸಾ*ವು ; ಮನನೊಂದು ಪತಿ ಆತ್ಮಹತ್ಯೆಗೆ ಯತ್ನ.!
ಮಕ್ಕಳನ್ನು ಬಾವಿಗೆ ತಳ್ಳಿದ ವೇಳೆ ರಶ್ಮೀತಾ ಎಂಬ ಬಾಲಕಿ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪನ್ನು ಹಿಡಿದುಕೊಂಡಿದ್ದಳು (The girl was holding the pump pipe attached to the well). ಇದನ್ನು ಕಂಡ ಪಾಪಿ ಹಿತೇಶ್ ಶೆಟ್ಟಿಗಾರ್ ಕತ್ತಿಯಿಂದ ಪೈಪನ್ನು ತುಂಡರಿಸಿದ್ದ.
ಯಾವುದೇ ಕೆಲಸ ಮಾಡದೆ ಆರೋಪಿ ಹಿತೇಶ್ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದ. ಇದೇ ಕೋಪದಲ್ಲಿ ಆತ ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಕೊಲೆ ಮಾಡಿದ್ದ. ಸಂಜೆ ಹೊಟೇಲಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ತನ್ನ ಹೆಂಡತಿಯನ್ನು ಮನೆಯ ಪಕ್ಕದ ಬಾವಿಗೆ ದೂಡಿದ್ದ. ಲಕ್ಷ್ಮಿಯ ಚೀರಾಟ ಕೇಳಿ ಸ್ಥಳಿಯ ವ್ಯಕ್ತಿಯೋರ್ವರು ಆಕೆಯನ್ನು ರಕ್ಷಿಸಿದ್ದರು.
ಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ (Mulki Police Station) ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ (Inspector of Police) ಕುಸುಮಾಧರ ತನಿಖೆ ನಡೆಸಿ ಅರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು (charge sheet) ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!
ಆರೋಪಿಯು ಕೊಲೆ ಹಾಗೂ ಕೊಲೆ ಯತ್ನ ನಡೆಸಿರುವುದು ಸಾಬೀತಾದ (proven) ಹಿನ್ನೆಲೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ (3rd Additional District and Sessions Court Judge) ಸಂಧ್ಯಾ ಆರೋಪಿಗೆ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಹಿಂದಿನ ಸುದ್ದಿ : ಎಣ್ಣೆಗಾಗಿ ಬಾರ್ ಕಳ್ಳತನಕ್ಕೆ ಹೋದ ; ಮುಂದಾದದ್ದು ಮಾತ್ರ ವಿಚಿತ್ರ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕಳ್ಳತನ ಮಾಡುವವರು ಕತ್ತಲೆಯಲ್ಲಿ ಕಳ್ಳ ಬೆಕ್ಕಿನಂತೆ ಹೆಜ್ಜೆ ಇಡುತ್ತ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಕದ್ದುಕೊಂಡು ಬರುತ್ತಾರೆ. ಆದರೆ ತೆಲಂಗಾಣದ ಮೇದಕ್ ಜಿಲ್ಲೆಯಿಂದ (Medak district of Telangana) ಕಳ್ಳತನದ ವಿಚಿತ್ರ ಘಟನೆಯೊಂದು ನಡೆದಿದೆ.
ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!
ಕಳ್ಳನೋರ್ವ ಮದ್ಯದಂಗಡಿಗೆ ಕದಿಯಲು ಹೋಗಿ ಮದ್ಯ ಸೇವಿಸಿ ಅಲ್ಲಿಯೇ ನಿದ್ರೆಗೆ ಜಾರಿದ ಘಟನೆ ಮೇದಕ್ ಜಿಲ್ಲೆಯ ನರಸಿಂಗ್ ಮಂಡಲದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ನರಸಿಂಗಿ ಮಂಡಲ ಕೇಂದ್ರದ ವೈನ್ ಶಾಪ್ ನ ಮ್ಯಾನೇಜರ್ ರಾತ್ರಿ ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದರು. ಮದ್ಯದಂಗಡಿಗೆ (Liquor store) ನುಗ್ಗಿದ ವ್ಯಕ್ತಿ, ಹಣ ಹಾಗೂ ಮದ್ಯದ ಬಾಟಲಿಗಳನ್ನೆಲ್ಲ ಪ್ಯಾಕ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಅಂಗಡಿಯಿಂದ ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಮದ್ಯದ ಬಾಟಲಿಗಳನ್ನು ನೋಡಿ ಅದೇನಾಯ್ತೋ ಗೊತ್ತಿಲ್ಲ. ಹೇಗಾದ್ರೂ ಯಾರು ಇಲ್ಲ, ಆರಾಮವಾಗಿ ಕುಳಿತು ಕುಡಿದು ಹೋಗೋಣ ಅಂತ ಅಲ್ಲಿಯೇ ಮದ್ಯ ಸೇವಿಸಲು ಆರಂಭಿಸಿದ್ದಾನೆ.
ಇದನ್ನು ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ Green signal.!
ಯಾರೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಪುಕ್ಸಟ್ಟೆ ಸಿಕ್ಕಿದೆಯಂತಾ ಅತಿಯಾಗಿ ಮದ್ಯ ಸೇವಿಸಿ ನಶೆಯಲ್ಲಿ ಪ್ರಜ್ಞೆ ತಪ್ಪಿ (lose consciousness) ಅಲ್ಲೇ ಮಲಗಿದ್ದಾನೆ.
ಇದಾದ ಬಳಿಕ ಬೆಳಗ್ಗೆ ಅಂಗಡಿ ಸಿಬ್ಬಂದಿಗಳು ಬಂದು ಆತನನ್ನು ಹಿಡಿದಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಅಂಗಡಿಗೆ ಕಳ್ಳ ನುಗ್ಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.