ಜನಸ್ಪಂದನ ನ್ಯೂಸ್, ಡೆಸ್ಕ್ : ವಿವಾಹ ಅನ್ನುವುದು ಸಂಭ್ರಮದ ಕಾರ್ಯಕ್ರಮ. ಆದರೆ ವಧುವಿನ ಬೀಳ್ಕೊಡುಗೆ (Farewell to the bride) ಸಂದರ್ಭ ಆಕೆಯ ಕುಟುಂಬಸ್ಥರು ತುಂಬಾನೇ ದುಃಖ ಪಡುತ್ತಾರೆ.
ಹುಟ್ಟಿ ಬೆಳೆದ ಮನೆ ಮತ್ತು ಕುಟುಂಬಸ್ಥರನ್ನು ಬಿಟ್ಟು ಗಂಡನ ಮನೆಗೆ ಹೋಗಬೇಕು ಎಂಬ ದುಃಖದಿಂದ ವಧು ಕಣ್ಣೀರು (Tear’s) ಹಾಕುತ್ತಾಳೆ. ಆಕೆಯೊಂದಿಗೆ ಕುಟುಂಬದವರು ಕೂಡ ಕಣ್ಣೀರು ಸುರಿಸುತ್ತಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಕುರಿತಾದ ವಿಡಿಯೋ ವೈರಲ್ ಆಗಿದೆ. ಇಲ್ಲಿ ಮದುವೆ ಹೆಣ್ಣು ಗಂಡನ ಮನೆಗೆ ಹೋಗುವಾಗ ಕಣ್ಣೀರು ಹಾಕುತ್ತಿದ್ದಾಳೆ. ಆದ್ರೆ ಆಕೆ ಹೇಳುತ್ತಿರುವ ಕಾರಣ ನೋಡಿ ವರ ಸೇರಿದಂತೆ ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!
ವಿಡಿಯೋದಲ್ಲಿ ವಧುವಿನ ಮಾತು ಕೇಳಿ ಆಕೆಯ ತಾಯಿ ನಗುತ್ತಿರೋದನ್ನು ನೋಡಬಹುದು. ಈ ವಿಡಿಯೋಗೆ Gen-Z ವಧುವಿನ ಕಣ್ಣೀರಿನ ಕಥೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. ಈ ವಿಡಿಯೋವನ್ನು Nikita Singhla ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಕಾರ್‌ನಲ್ಲಿ ಕುಳಿತ ವಧು ಕಣ್ಣೀರು ಸುರಿಸುತ್ತ, ಅಲ್ಲಿ ನನ್ನಿಂದ ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಸಲಾಗುತ್ತದೆ. ಗಂಡನ ಮನೆಯಲ್ಲಿ ಹೇಗೆ ನಾನು ಪುಟ್ಟ ಪುಟ್ಟ ಬಟ್ಟೆಗಳನ್ನು ಹಾಕಿಕೊಳ್ಳಲಿ? ಎಂದು ಹೇಳುತ್ತಾ ಕಣ್ಣೀರು ಹಾಕುತ್ತಾಳೆ. ಇದಕ್ಕೆ ವಧುವಿನ ತಾಯಿ ಇದು ಸಂಪ್ರದಾಯ, ಪಾಲಿಸಲೇಬೇಕು ಎಂದು ಮಗಳಿಗೆ ತಿಳಿ ಹೇಳುತ್ತಾರೆ.
ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!
ವಿಡಿಯೋ ಕೊನೆಯಲ್ಲಿ, ವಧು ಬಡೋ- ಬಡಿ ಮತ್ತು ಕಚ್ಚಾ ಬದಮ್ (Vadhu bado – badi and Kachha Badam) ಹಾಡುತ್ತಾ ನಗುತ್ತಾಳೆ. ಜೆನ್- ಜಿ ವಧುವಿನ ಈ ತಮಾಷೆಯ ವಿಡಿಯೋವನ್ನು ನೆಟ್ಟಿಗರು ತುಂಬಾ ಲೈಕ್ ಮಾಡಿದ್ದಾರೆ.
View this post on Instagram
ಹಿಂದಿನ ಸುದ್ದಿ : ಎಣ್ಣೆಗಾಗಿ ಬಾರ್ ಕಳ್ಳತನಕ್ಕೆ ಹೋದ ; ಮುಂದಾದದ್ದು ಮಾತ್ರ ವಿಚಿತ್ರ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕಳ್ಳತನ ಮಾಡುವವರು ಕತ್ತಲೆಯಲ್ಲಿ ಕಳ್ಳ ಬೆಕ್ಕಿನಂತೆ ಹೆಜ್ಜೆ ಇಡುತ್ತ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಕದ್ದುಕೊಂಡು ಬರುತ್ತಾರೆ. ಆದರೆ ತೆಲಂಗಾಣದ ಮೇದಕ್ ಜಿಲ್ಲೆಯಿಂದ (Medak district of Telangana) ಕಳ್ಳತನದ ವಿಚಿತ್ರ ಘಟನೆಯೊಂದು ನಡೆದಿದೆ.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
ಕಳ್ಳನೋರ್ವ ಮದ್ಯದಂಗಡಿಗೆ ಕದಿಯಲು ಹೋಗಿ ಮದ್ಯ ಸೇವಿಸಿ ಅಲ್ಲಿಯೇ ನಿದ್ರೆಗೆ ಜಾರಿದ ಘಟನೆ ಮೇದಕ್ ಜಿಲ್ಲೆಯ ನರಸಿಂಗ್ ಮಂಡಲದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ನರಸಿಂಗಿ ಮಂಡಲ ಕೇಂದ್ರದ ವೈನ್ ಶಾಪ್ ನ ಮ್ಯಾನೇಜರ್ ರಾತ್ರಿ ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದರು. ಮದ್ಯದಂಗಡಿಗೆ (Liquor store) ನುಗ್ಗಿದ ವ್ಯಕ್ತಿ, ಹಣ ಹಾಗೂ ಮದ್ಯದ ಬಾಟಲಿಗಳನ್ನೆಲ್ಲ ಪ್ಯಾಕ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಅಂಗಡಿಯಿಂದ ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಮದ್ಯದ ಬಾಟಲಿಗಳನ್ನು ನೋಡಿ ಅದೇನಾಯ್ತೋ ಗೊತ್ತಿಲ್ಲ. ಹೇಗಾದ್ರೂ ಯಾರು ಇಲ್ಲ, ಆರಾಮವಾಗಿ ಕುಳಿತು ಕುಡಿದು ಹೋಗೋಣ ಅಂತ ಅಲ್ಲಿಯೇ ಮದ್ಯ ಸೇವಿಸಲು ಆರಂಭಿಸಿದ್ದಾನೆ.
ಇದನ್ನು ಓದಿ : C.T ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ; ಸಚಿವೆ ಹೆಬ್ಬಾಳ್ಕರ್ ಆಪ್ತ ಸೇರಿ 10 ಜನರ ವಿರುದ್ಧ FIR.!
ಯಾರೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಪುಕ್ಸಟ್ಟೆ ಸಿಕ್ಕಿದೆಯಂತಾ ಅತಿಯಾಗಿ ಮದ್ಯ ಸೇವಿಸಿ ನಶೆಯಲ್ಲಿ ಪ್ರಜ್ಞೆ ತಪ್ಪಿ (lose consciousness) ಅಲ್ಲೇ ಮಲಗಿದ್ದಾನೆ.
ಇದಾದ ಬಳಿಕ ಬೆಳಗ್ಗೆ ಅಂಗಡಿ ಸಿಬ್ಬಂದಿಗಳು ಬಂದು ಆತನನ್ನು ಹಿಡಿದಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಅಂಗಡಿಗೆ ಕಳ್ಳ ನುಗ್ಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.