ಜನಸ್ಪಂದನ ನ್ಯೂಸ್, ಡೆಸ್ಕ್ : ಕಡಿಮೆ ತಾಪಮಾನ ಮತ್ತು ಶುಷ್ಕ ಗಾಳಿಯಿಂದಾಗಿ (Low temperature and dry air) ಚಳಿಗಾಲದಲ್ಲಿ ನಮ್ಮ ಚರ್ಮವು ತುಂಬಾ ಒಣಗುತ್ತದೆ. ಚರ್ಮದ ಸಮಸ್ಯೆ (skin problem) ಹೆಚ್ಚಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಜನರು ಮನೆಮದ್ದುಗಳನ್ನು ಟ್ರೈ ಮಾಡ್ತಾರೆ. ಆದರೆ ನಿಮಗ್ ಗೊತ್ತಾ.? ಚಳಿಗಾಲದಲ್ಲಿ ತ್ವಚೆಗೆ ಯಾವ ವಸ್ತುಗಳನ್ನು ಬಳಸಬಾರದು ಅಂತ. ಇಲ್ಲಿದೆ ಮಾಹಿತಿ.
ಆಲೂಗಡ್ಡೆ ರಸ :
ಆಲೂಗಡ್ಡೆ ರಸವು (potato juice) ಕಪ್ಪು ವರ್ತುಲಗಳನ್ನು ಹೋಗಲಾಡಿಸಲು ಸಹಾಯಕ. ಆದರೆ ಚಳಿಗಾಲದಲ್ಲಿ ಇದನ್ನು ಮುಖಕ್ಕೆ ಬಳಸುವುದು ಒಳ್ಳೆಯದಲ್ಲ. ಏಕೆಂದರೆ ಇದು ತ್ವಚೆಯಿಂದ ತೇವಾಂಶವನ್ನು ಹೀರಿಕೊಂಡು (Absorbs moisture from the skin), ಮುಖ ಇನ್ನಷ್ಟು ಒರಟಾಗುವಂತೆ ಮಾಡುತ್ತದೆ.
ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!
ಶ್ರೀಗಂಧದ ಪುಡಿ ಮತ್ತು ಮುಲ್ತಾನಿ ಮಿಟ್ಟಿ ಪುಡಿ (sandalwood powder and multani mitti) :
ಶ್ರೀಗಂಧದ ಪುಡಿ ಮತ್ತು ಮುಲ್ತಾನಿ ಮಿಟ್ಟಿ ಪುಡಿಯು ತ್ವಚೆಗೆ ತುಂಬಾ ಪ್ರಯೋಜನಕಾರಿ. ಆದರೆ ಚಳಿಗಾಲದಲ್ಲಿ ಇವುಗಳನ್ನು ಬಳಕೆ ಮಾಡುವುದರಿಂದ ಮುಖದ ಶುಷ್ಕತೆ (Dry face) ಹೆಚ್ಚುತ್ತದೆ.
ತೈಲ ಆಧಾರಿತ ಕ್ರೀಮ್‌ಗಳು :
ಈ ಚಳಿಗಾಲದಲ್ಲಿ ಹೆಚ್ಚಿನವರು ಒಣ ತ್ವಚೆ ಸಮಸ್ಯೆ ಹೋಗಲಾಡಿಸಲು ತೈಲ ಆಧಾರಿತ ಕ್ರೀಮ್‌ಗಳನ್ನು (Oil based creams) ಬಳಸುತ್ತಾರೆ. ಆದರೆ ಎಣ್ಣೆಯುಕ್ತ ಮತ್ತು ಸಾಮಾನ್ಯ ಚರ್ಮದ ಟೋನ್ ಹೊಂದಿರುವ ಜನರು ಶೀತ ವಾತಾವರಣದಲ್ಲಿ ಇವುಗಳನ್ನು ಬಳಸಬಾರದು. ಅತಿಯಾದ ಎಣ್ಣೆಯುಕ್ತ ಉತ್ಪನ್ನಗಳು ಮೊಡವೆಗಳಿಗೆ (acne) ಕಾರಣವಾಗುತ್ತವೆ.
ಆಲ್ಕೋಹಾಲ್ ಆಧಾರಿತ ಟೋನರ್ :
ಆಲ್ಕೋಹಾಲ್ ಆಧಾರಿತ ಟೋನರ್ ಸಹ ಚರ್ಮದಿಂದ ನೈಸರ್ಗಿಕ ಎಣ್ಣೆಯನ್ನು (natural oil) ಹೀರಿಕೊಳ್ಳುತ್ತದೆ. ಹೀಗಾಗಿ ಸೂಕ್ಷ್ಮ ಮತ್ತು ಶುಷ್ಕ ಚರ್ಮವನ್ನು ಹೊಂದಿರುವವರು ಅದನ್ನು ತಪ್ಪಾಗಿ ಬಳಸಬಾರದು.
ಇದನ್ನು ಓದಿ : ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್; ಮುಂದೆನಾಯ್ತು? Video ನೋಡಿ.!
ಪೆಟ್ರೋಲಿಯಂ ಜೆಲ್ :
ಮುಖದ ಮೇಲೆ ಪೆಟ್ರೋಲಿಯಂ ಜೆಲ್ ಅನ್ನು ಬಳಸಬಾರದು. ಇವುಗಳ ಬಳಕೆಯು ಚರ್ಮವನ್ನು ಇನ್ನಷ್ಟು ಒಣಗುವಂತೆ ಮಾಡುತ್ತವೆ. ರಂಧ್ರಗಳು ಮುಚ್ಚಿಹೋಗುತ್ತವೆ (Pores become clogged).
ಹಿಂದಿನ ಸುದ್ದಿ : ಪ್ರೇಯಸಿಯ ಮನೆ ಮುಂದೆ gelatin ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ.!
ಜನಸ್ಪಂದನ ನ್ಯೂಸ್, ಮಂಡ್ಯ : ಮಂಡ್ಯ ಜಿಲ್ಲೆ ನಾಗಮಂಗಲ (Nagamangala) ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಜಿಲೆಟಿನ್ (Gelatin) ಸ್ಫೋಟಿಸಿಕೊಂಡು ಯುವಕನೋರ್ವ ಸಾವಿಗೀಡಾದ ಘಟನೆ ನಡೆದಿದೆ.
ನಾಗಮಂಗಲದ ಬಸವೇಶ್ವರ ನಗರದ ರಾಮಚಂದ್ರ ಎಂಬಾತ ಜಿಲೆಟಿನ್ (Gelatin) ಸ್ಫೋಟಿಸಿಕೊಂಡು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಸಚಿವ ಖರ್ಗೆ ಆಪ್ತನಿಂದ ಜೀವ ಬೆದರಿಕೆ ಆರೋಪ ; ಗುತ್ತಿಗೆದಾರ ರೈಲಿಗೆ ತಲೆ ಕೊಟ್ಟು Suicide.!
ಈತ ಕಾಳೇನಹಳ್ಳಿಯ ಅಪ್ರಾಪ್ತೆಯನ್ನು ಪ್ರೀತಿ ಮಾಡುತ್ತಿದ್ದ (Loved the minor). ಕಳೆದ ವರ್ಷ ಈ ಯುವಕ ಮತ್ತು ಅಪ್ರಾಪ್ತೆ ಮನೆ ಬಿಟ್ಟು ಓಡಿ ಹೋಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಆತನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು (File a case under the POCSO Act).
ರಾತ್ರಿ ಯುವತಿ ಮನೆ ಬಳಿ ಹೋದ ಯುವಕ, ಬಂಡೆಗಳನ್ನ ಸಿಡಿಸುವ ಜಿಲೆಟಿನ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಜಿಲೆಟಿನ್ ಸಿಡಿದ ಪರಿಣಾಮ ಯುವಕನ ದೇಹ ಛಿಧ್ರಗೊಂಡಿದೆ (Body piercing).
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ (Nagamangala Rural Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.