ಜನಸ್ಪಂದನ ನ್ಯೂಸ್, ಬೆಂಗಳೂರು : ಈ ಹಿಂದೆ ಪಿಜಿ ಲೈಫ್ ಬಗ್ಗೆ ಮಾಡಿದ್ದ ವಿಕಾಸ್ ವಿಕ್ಕಿಪೀಡಿಯಾ ಅವರ ಹಾಡೊಂದು (song) ಸಖತ್ ಸದ್ದು ಮಾಡಿತ್ತು. ಊಟ ಸರಿಯಿಲ್ಲ ಅಂದ್ರುನೂ ಪಿಜಿಯಲ್ಲಿ ತಿನ್ನುತ್ತೀವಿ ಅನ್ನುತ್ತೀವಿ ಅನ್ನೋ ವೀಡಿಯೋ ಸಖತ್ ವೈರಲ್ ಆಗಿತ್ತು.
ಈಗ ವಿಕಾಸ್ ವಿಕ್ಕಿಪೀಡಿಯಾ ಅವರ ಹೊಸ ಹಾಡೊಂದು ಈಗ ಟ್ರೆಂಡಿಂಗ್ (trending) ಹಾಗೂ ವೈರಲ್ ಆಗಿದೆ. ತೊಳೆಯೋಕೆ, ಕುಡಿಯೋಕೆ ನೀರಿಲ್ಲ. ಓ ನಲ್ಲ ನೀರಿಲ್ಲ ಎನ್ನುವಂತ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Abuse : 7ನೇ ತರಗತಿಯ ವಿದ್ಯಾರ್ಥಿನಿ, ಈಗ 6 ತಿಂಗಳ ಗರ್ಭಿಣಿ.!
ರಾಜ್ಯದಲ್ಲಿ ಜನರು ನೀರಿಲ್ಲದೇ ತತ್ತರಿಸಿ ಹೋಗಿದ್ದಾರೆ. ಸಾಕಷ್ಟು ಹಣ ಕೊಟ್ಟರೂ, ನೀರು ಸಿಗದಂತಾದ ಪರಿಸ್ಥಿತಿ ಎದುರಾಗಿದೆ.
ಈ ಸ್ಥಿತಿಯನ್ನು ನೋಡಿರುವ ವಿಕಾಸ್ ವಿಕ್ಕಿಪೀಡಿಯಾ (Vikipedia) ಹೊಸದೊಂದು ಹಾಡು ಬರೆದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.
ನಿಪ್ಪಾಣಿಯ 101 ವರ್ಷಗಳ ಹಳೆಯ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ.!
ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ಹಾಡಿನಲ್ಲಿ ಓ ನಲ್ಲ ನೀರಿಲ್ಲ ಕುಡಿಯೋಕು (drinks water) ತೊಳಿಯೋಕು ನೀರಿಲ್ಲ. ಸ್ನಾನಕ್ಕೆ ಬಟ್ಟೆಗೆ ನೀರಿಲ್ಲ ಎಂಬ ಶಬ್ಧಗಳಿವೆ.
ವಿಕ್ಕಿ ಮತ್ತು ಅವನ ಗೆಳೆಯ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪು, ನಲ್ಲಿ ಹೀಗೆ ನೀರು ಬರುವ ಅಥವಾ ಸಂಗ್ರಹಿಸುವ ಸ್ಥಳಗಳಲ್ಲಿ ನೀರು ಇಲ್ಲ ಎನ್ನುವುದನ್ನು ಹಾಡಿನಲ್ಲಿ ತೋರಿಸಿದ್ದಾರೆ.
Neerilla Neerilla
Lyrics by Chandrashekhar Madabhavi pic.twitter.com/QZ8yTjihNC
— Vicky Pedia (@Vickypedia_007) March 7, 2024