Tuesday, September 16, 2025

Janaspandhan News

HomeViral VideoVideo : ಸಾವಿನ ದವಡೆಯಿಂದ ಪಾರಾಗೊದು ಅಂದ್ರೆ ಇದೇ ಇರಬಹುದು?
spot_img
spot_img
spot_img

Video : ಸಾವಿನ ದವಡೆಯಿಂದ ಪಾರಾಗೊದು ಅಂದ್ರೆ ಇದೇ ಇರಬಹುದು?

- Advertisement -

ಜನಸ್ಪಂದನ ನ್ಯೂಸ್, ಡೆಸ್ಕ್ : ಇಳಿಜಾರು ರಸ್ತೆಯಲ್ಲಿ (Sloping road) ಚಲಿಸುತ್ತಿದ್ದ ಟಿಪ್ಪರ್ ಇದ್ದಕ್ಕಿದ್ದಂತೆ ರಿವರ್ಸ್‌ ತಗೊಂಡಿದ್ದು, ಅದರ ಹಿಂದೆ ಸ್ಕೂಟಿಯಲ್ಲಿದ್ದ ಯುವತಿಯೊಬ್ಬರು ಪವಾಡಸದೃಶರಾಗಿ ಪಾರಾದ ಘಟನೆ ಕೇರಳದ ಕೋಜಿಕೋಡ್‌ನಲ್ಲಿ (Kozhikode, Kerala) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇನ್ನೂ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನು ಓದಿ : Suspend : ಕುರಾನ್ ಪುಸ್ತಕ ಸುಟ್ಟ ಪ್ರಕರಣ : ಕರ್ತವ್ಯ ಲೋಪ ಆರೋಪದಲ್ಲಿ ಇನ್ಸ್‌ಪೆಕ್ಟರ್ ಸಸ್ಪೆಂಡ್.!

ಇಳಿಜಾರಿನಲ್ಲಿ ಚಲಿಸುತ್ತಿದ್ದ ಟಿಪ್ಪರ್ ಸರಕಿನಿಂದ ಲೋಡ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ (Driver lost control) ಹಿಂದೆ ಹಿಂದೆ ಬಂದಿದೆ. ಈ ವೇಳೆ ಲಾರಿ ಹಿಂದೆ ಸ್ಕೂಟಿಯಲ್ಲಿ ಯುವತಿ ಬಂದಿದ್ದಾಳೆ.

ಆಕೆ ಪಕ್ಕಕ್ಕೆ ಸರಿಯುವ ಪ್ರಯತ್ನ ಮಾಡಿದ್ದು, ಅಷ್ಟರಲ್ಲಿ ಸ್ಕೂಟಿಯ ಮೇಲೆಯೇ ಲಾರಿ ಹರಿದು ಹಿಂದೆ ಬಂದು ನಿಂತಿದೆ. ಅದೃಷ್ಟವಶಾತ್ ಸ್ಕೂಟಿಯಲ್ಲಿದ್ದ ಯುವತಿಗೆ ಯಾವ ಅಪಾಯ ಆಗದೇ ಪಾರಾಗಿದ್ದಾಳೆ.

ಇದನ್ನು ಓದಿ : Health : ಸುಲಭವಾಗಿ ಸಿಗುವ ಈ ಬಳ್ಳಿಯಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ.?

27 ಸೆಕೆಂಡ್‌ಗಳ ಈ ವಿಡಿಯೋ ನೆಟ್ಟಿಗರ ಎದೆ ನಡುಗಿಸಿದೆ. ಹೀಗೆ ಪವಾಡ ಸದೃಶ ರೀತಿಯಲ್ಲಿ ಪಾರಾದ ಯುವತಿ ಓಝಯಾಡಿ ಮೂಲದ ಅಶ್ವಥಿ ಎಂದು ವರದಿಯಾಗಿದೆ. ಪೆರಿಂಗಾಲಂ ಪಟ್ಟಣದಿಂದ ಕೋಝಿಕೋಡ್‌ ವೈದ್ಯಕೀಯ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ವೈದ್ಯಕೀಯ ಕಾಲೇಜಿನತ್ತ ಸಾಗುತ್ತಿದ್ದ ಇಟ್ಟಿಗೆ ತುಂಬಿದ್ದ ಟಿಪ್ಪರ್ ಯಾವುದೇ ಮುನ್ಸೂಚನೆ ಇಲ್ಲದೇ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಹಿಂದಕ್ಕೆ ಬಂದಿದೆ (Suddenly back on the road).

ಇದನ್ನು ಓದಿ : Health : ಬೆಳಿಗ್ಗೆ ಲವಂಗ ನೆನೆಸಿದ ನೀರು ಕುಡಿಯುವುದರಿಂದ ಆಗುವ Health ಪ್ರಯೋಜನಗಳು.!

ಅದು ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಅವರು ಸ್ಕೂಟಿ ಸಹಿತ ರಸ್ತೆಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಹಿಮ್ಮುಖವಾಗಿ ಬರುತ್ತಿದ್ದ ಲಾರಿ ಅವರ ಸ್ಕೂಟಿ ಮೇಲೆ ಹಾದು ಹೋಗಿದೆ. ಕೂದಲೆಳೆ ಅಂತರದಲ್ಲಿ ಯುವತಿ ಅಶ್ವಥಿ ಬದುಕುಳಿದಿದ್ದಾರೆ.

ವಿಡಿಯೋ ನೋಡಿ : 

ಹಿಂದಿನ ಸುದ್ದಿ : ಉಪ್ಪು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಅಂತ ಕಡಿಮೆ ತಿನ್ನುತ್ತೀರಾ.?

ಜನಸ್ಪಂದನ ನ್ಯೂಸ್, ಡೆಸ್ಕ್ :ಉಪ್ಪನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಅಂತ ಕಡಿಮೆ ತಿನ್ನುತ್ತಿದ್ದೀರಾ.? ಈ ಅಭ್ಯಾಸ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದೇ.?

ಸಾಮಾನ್ಯವಾಗಿ ವೈದ್ಯರು ಅಧಿಕ ರಕ್ತದೊತ್ತಡ, ಹೃದ್ರೋಗ ಅಥವಾ ಇನ್ನಾವುದೇ ಗಂಭೀರ ಕಾಯಿಲೆಯಿಂದ‌ (serious illness) ಬಳಲುತ್ತಿರುವವರಿಗೆ ಮಾತ್ರ ಕಡಿಮೆ ಉಪ್ಪನ್ನು ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ.

ಆದರೆ ಅತಿಯಾದ ಉಪ್ಪು ಯಾರಿಗಾದರೂ ಗಂಭೀರವಾದ ಹಾನಿಯನ್ನುಂಟು ಮಾಡಬಹುದು. ಹೀಗಾಗಿ ಬಹುತೇಕ ಜನರು ಕಡಿಮೆ ಉಪ್ಪನ್ನು ತಿನ್ನುವುದರಿಂದ ಗಂಭೀರ ಕಾಯಿಲೆಗಳು ಬರುವುದಿಲ್ಲ ಅಂತ ಅಂದುಕೊಂಡು ಉಪ್ಪನ್ನು ಕಡಿಮೆ ತಿನ್ನುತ್ತಾರೆ.

ಇದನ್ನು ಓದಿ : ವಿಡಿಯೋ : ಸೇವೆಗೆ ತೆರಳುತ್ತಿದ್ದ ಸೈನಿಕನ ಬಳಿ ಲಂಚ ಕೇಳಿದ TTE ; ಆಮೇಲೆನಾಯ್ತು.?

* ಕಡಿಮೆ ಉಪ್ಪನ್ನು ತಿನ್ನುವ ಜನರು ಸಾಮಾನ್ಯ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೆನಿನ್, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಹೊಂದಿರುತ್ತಾರೆ.

ಆರೋಗ್ಯವಂತ ವ್ಯಕ್ತಿಗಳಲ್ಲಿ ಕಡಿಮೆ ಸೋಡಿಯಂ ಆಹಾರವು ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಶೇ. 4.6 ಮತ್ತು ಟ್ರೈಗ್ಲಿಸರೈಡ್‌ಗಳನ್ನು ಶೇ. 5.9 ರಷ್ಟು ಹೆಚ್ಚಿಸಿದೆ ಎಂದು National Library of Medicine ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿದೆ.

ಇದನ್ನು ಓದಿ : ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಕರ್ನಲ್‌ ಸೋಫಿಯಾ ಖುರೇಷಿ : ಹುಕ್ಕೇರಿ ಶಿವಾಚಾರ್ಯ ಶ್ರೀ.

* ಹೃದಯ ಮತ್ತು ರಕ್ತಕ್ಕೆ ಆಮ್ಲಜನಕದ ಅಗತ್ಯಗಳನ್ನು ಪೂರೈಸಲು ಬೇಕಾದಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯ ವೈಫಲ್ಯ (Heart failure) ಉಂಟಾಗುತ್ತದೆ. ಇದರ ಅರ್ಥ ಹೃದಯವು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದಲ್ಲ. ಆದರೆ ಇದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ.

ರಾಡ್ ಎಸ್. ಟೇಲರ್ ಮತ್ತು ಸಹೋದ್ಯೋಗಿಗಳ ಸಂಶೋಧನೆಯು (research), ಹೃದಯ ವೈಫಲ್ಯ ಹೊಂದಿರುವ ಜನರು ಕಡಿಮೆ ಸೋಡಿಯಂ ಸೇವನೆಯಿಂದ ಸಾಯುವ ಅಪಾಯವನ್ನು ಸೂಚಿಸುತ್ತದೆ.

ಇದನ್ನು ಓದಿ : ಬೆಳಿಗ್ಗೆ ತುಟಿ colour ಬದಲಾಗಿ ಮುಖ ಊದಿಕೊಳ್ಳುತ್ತಿದೆಯೇ.? ಇದು ಈ ಗಂಭೀರ ರೋಗದ ಲಕ್ಷಣ.!

* ಕಡಿಮೆ ಉಪ್ಪನ್ನು ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ನಿಜ. ಅದಾಗ್ಯೂ, ಅಧಿಕ ರಕ್ತದೊತ್ತಡಕ್ಕೆ ಉಪ್ಪು ಮಾತ್ರ ಕಾರಣವಲ್ಲ (Salt is not the only cause of high blood pressure). ಅಧ್ಯಯನದ ಪ್ರಕಾರ, ದಿನಕ್ಕೆ 2,000 ಮಿ ಗ್ರಾಂ ಗಿಂತ ಕಡಿಮೆ Sodium ತೆಗೆದುಕೊಳ್ಳುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದ್ರೋಗದಿಂದ ಮರಣ ಹೊಂದುವ ಅಪಾಯ ಹೆಚ್ಚು.

* ಕಡಿಮೆ ಉಪ್ಪನ್ನು ತಿನ್ನುವುದರಿಂದ ಹೈಪೋನಾಟ್ರೀಮಿಯಾದ (Hyponatremia) ಅಪಾಯ ಹೆಚ್ಚಾಗುತ್ತದೆ. ಈ ಹೈಪೋನಾಟ್ರೀಮಿಯಾ ಎನ್ನುವುದು ರಕ್ತದಲ್ಲಿ ಕಡಿಮೆ ಮಟ್ಟದ ಸೋಡಿಯಂನಿಂದ ಉಂಟಾಗುವ ಸ್ಥಿತಿಯಾಗಿದೆ. ಇದರ ಲಕ್ಷಣಗಳು ನಿರ್ಜಲೀಕರಣದಿಂದ ಉಂಟಾಗುವ ಲಕ್ಷಣಗಳನ್ನು ಹೋಲುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ ಮೆದುಳಿನ ಊತ ಇರಬಹುದು.

ಇದನ್ನು ಓದಿ : ಎಚ್ಚರಿಕೆ : ನಿಮ್ಮ ಮನೆಗೆ ತಂದ LPG ಸಿಲಿಂಡರ್ ಮೇಲೆ ಬರೆದಿರುವ ಈ ಕೋಡ್‌ ಖಂಡಿತವಾಗಿ ನೋಡಿ.

* ಉಪ್ಪನ್ನು ಸೇವಿಸದಿದ್ದರೆ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ (Electrolyte imbalance) ಕಾರಣವಾಗುತ್ತದೆ. ಇದರ ಪರಿಣಾಮ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಯಾವುದೇ ರೀತಿಯ ನರ ಸಂವಹನವನ್ನು ಕಡಿತಗೊಳಿಸಲಾಗುತ್ತದೆ. ಇದರಿಂದ ದೇಹದಲ್ಲಿ ವಾಕರಿಕೆ, ತಲೆಸುತ್ತು, ನಿರ್ಜಲೀಕರಣದಂತಹ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ಉಪ್ಪನ್ನು ಬಿಡುವ ಬಗ್ಗೆ ಎಂದಿಗೂ ಯೋಚಿಸಬಾರದು

* ದಿನವಿಡೀ ಉಪ್ಪನ್ನು ತಿನ್ನದಿರುವುದು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ಜೀವಕೋಶಗಳು ಹಾರ್ಮೋನ್ ಇನ್ಸುಲಿನ್ ಸಿಗ್ನಲ್​ಗೆ ಪ್ರತಿಕ್ರಿಯಿಸದಿದ್ದಾಗ, ಇನ್ಸುಲಿನ್ ಪ್ರತಿರೋಧ ಉಂಟಾಗುತ್ತದೆ.

ಇದನ್ನು ಓದಿ : Reels : ನಿಮಗೂ ರೀಲ್ಸ್​ ಹುಚ್ಚಾ.? ಹಾಗಾದ್ರೆ ಮೈ ಜುಂ ಎನ್ನೋ ವಿಡಿಯೋ ನೋಡಿ.

* ಟೈಪ್ 1 ಹಾಗೂ ಟೈಪ್ 2 ಡಯಾಬಿಟಿಸ್ ಇರುವವರು ಕಡಿಮೆ ಸೋಡಿಯಂ ಡಯಟ್​ನಿಂದ ಸಾಯುವ ಅಪಾಯವಿದೆ (There is a risk of death from a sodium diet) ಎಂದು ಸಂಶೋಧನೆಗಳು ತಿಳಿಸಿವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಮತ್ತು ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments