ಜನಸ್ಪಂದನ ನ್ಯೂಸ್, ಡೆಸ್ಕ್ : ಸುಮಾರು 7 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ಎಸಗಿದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ತಂದು ಸ್ಥಳೀಯರು ಹೊಡೆದು ಕೊಂದಿರುವ ಭಯಾನಕ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಅರುಣಾಚಲ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿತ ವ್ಯಕ್ತಿ ಸುಮಾರು 7 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ಎಸೆಗಿದ್ದ ಎನ್ನಲಾಗಿದೆ. ಘಟನೆಯ ಹಿನ್ನಲೆಯಲ್ಲಿ ಗುಂಪೊಂದು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ (Sexual assault) ಎಸಗಿದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದು ತಂದು ಹೊಡೆದು ಕೊಂದಿದ್ದಾರೆ.
ಇದನ್ನು ಓದಿ : Client : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!
ಈ ಘಟನೆ ಅರುಣಾಚಲ ಪ್ರದೇಶದ ಲೋವರ್ ದಿಬಾಂಗ್ ಕಣಿವೆ ಜಿಲ್ಲೆಯ ರೋಯಿಂಗ್‌ನಲ್ಲಿ ನಡೆದಿದೆ. ಗುಂಪಿನಿಂದ ಹತನಾದ ವ್ಯಕ್ತಿಯನ್ನು ಕಟ್ಟಡ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಕಟ್ಟಡ ಕಾರ್ಮಿಕನಾದ ಈ ಆರೋಪಿತ ವ್ತಕ್ತಿ ರೋಯಿಂಗ್‌ನ ಮೌಂಟ್ ಕಾರ್ಮೆಲ್ ಶಾಲೆಯ 5 ರಿಂದ 7 ವರ್ಷ ವಯಸ್ಸಿನ ಕನಿಷ್ಠ 7 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದನು.
ಕಟ್ಟಡ ಕಾರ್ಮಿಕನಾದ ಈ ಆರೋಪಿತ ವ್ತಕ್ತಿ ಮಧ್ಯರಾತ್ರಿಯಲ್ಲಿ ಬಾಲಕಿಯರ ಶಾಲೆಯ ಹಾಸ್ಟೆಲ್‌ಗೆ ನುಗ್ಗಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು. ಬಾಲಕಿಯರು ತಮಗೆ ಹೊಟ್ಟೆನೋವು ಎಂದು ಹೇಳಿದ ಪರಿಣಾಮವಾಗಿ ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಿದಾಗ, ವೈದ್ಯರು ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನು ಓದಿ : “Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!
ಪೊಲೀಸ್ ಕಣ್ಣೆದುರೇ ಲೈಂಗಿಕ ದೌರ್ಜನ್ಯ (Sexual assault) ಎಸಗಿದ ಆರೋಪಿ ಮೇಲೆ ಹಲ್ಲೆ :
ಕಟ್ಟಡ ಕಾರ್ಮಿಕನಾದ ಈ ಆರೋಪಿತ ವ್ತಕ್ತಿಯನ್ನು ಪೊಲೀಸರು ಬಂಧಿಸಿ ಕಳೆದ ಗುರುವಾರ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ವಿಷಯ ತಿಳಿದು ಠಾಣೆಗೆ ಆಗಮಿಸಿದ ಪೋಷಕರು ಮತ್ತು ಸ್ಥಳೀಯರು ಪೊಲೀಸ್ ಠಾಣೆಗೆ ನುಗ್ಗಿ ಆರೋಪಿಯನ್ನು ಹೊರಗೆ ಎಳೆದು ತೀವ್ರವಾಗಿ ಥಳಿಸಿದ್ದಾರೆ.
ಪೋಷಕರು ಮತ್ತು ಸ್ಥಳೀಯರು ಆರೋಪಿ (Sexual assault) ಮೇಲೆ ಹಲ್ಲೆ ನಡೆಸಿದಾಗ ಪೊಲೀಸರು ಆರೋಪಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಬೆಂಬಿಡದೆ ಹಿಂಬಾಲಿಸಿದ ಗುಂಪು ಆತನಿಗೆ ಮತ್ತೇ ಥಳಿಸಿತ್ತು. ಗುಂಪಿನ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಲೈಂಗಿಕ ದೌರ್ಜನ್ಯ (Sexual assault) ಎಸಗಿದ್ದ ಅಪ್ರಾಪ್ತ ಮೃತಪಟ್ಟಿದ್ದಾನೆ.
ಇದನ್ನು ಓದಿ : Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!
ಶಾಲೆ ಮುಚ್ಚಿದ ಜಿಲ್ಲಾ ಆಡಳಿತ :
ಬಾಲಕಿಯರ ಹಾಸ್ಟೆಲ್‌ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅಹಿತಕರ ಘಟನೆಯಿಂದಾಗಿ ಜಿಲ್ಲಾ ಅಧಿಕಾರಿಗಳು, ಜುಲೈ 12ರಿಂದ ಅನಿರ್ದಿಷ್ಟಾವಧಿಯವರೆಗೆ ಶಾಲೆಯನ್ನು ಮುಚ್ಚಲಾಗುವುದು ಎಂದು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಆದೇಶದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಬಾಲಕಿಯರ ಹಾಸ್ಟೆಲ್‌ನಲ್ಲಿರುವ ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಹತ್ತಿರದ ಯಾವುದೇ ಸರ್ಕಾರಿ ಶಾಲೆಗಳು/ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ ಸೇರಿಸಲು ನಿರ್ದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮ ದೇಹ ಹೃದಯಾಘಾತ (Heart Attack) ಕ್ಕೆ ಒಂದು ಗಂಟೆ ಮೊದಲೇ ಕೊಡುತ್ತೆ ಈ ಎಚ್ಚರಿಕೆ ಸಂಕೇತಗಳನ್ನು. ಈ ಲಕ್ಷಣ (ಸಂಕೇತ) ಗಳನ್ನು ಎಂದೂ ಕಡೆಗಣಿಸಬೇಡಿ, ಒಂದು ವೇಳೆ ಕಡೆಗಣಿಸಿದರೆ ಸಾವೇ ಗತಿ.!
ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದು ವೈದ್ಯಕೀಯವಾಗಿ ಕರೆಯಲಾಗುವ ಹೃದಯಾಘಾತ (Heart Attack) ಕಳೆದ ಕೆಲವು ವರ್ಷಗಳಲ್ಲಿ ಅಪಾಯಕಾರಿ ಹಂತಕ್ಕೆ ತಲುಪಿದ್ದು, ರಾಜ್ಯದಲ್ಲಿ ಸಾವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿ ಪರಿಣಮಿಸಿದೆ.
ತಜ್ಞರ ಅಭಿಪ್ರಾಯದಲ್ಲಿ, ಹೃದಯಾಘಾತ (Heart Attack) ದ ಮುನ್ನ ದೇಹ ನೀಡುವ ಸಂಕೇತ/ಲಕ್ಷಣಗಳನ್ನು ಗುರುತಿಸುವಲ್ಲಿ ವಿಳಂಬ ಅಥವಾ ಅವುಗಳನ್ನು ನಿರ್ಲಕ್ಷಿಸುವುದೇ ಹಲವಾರು ಮಂದಿ ತಮ್ಮ ಜೀವವನ್ನು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ.
ಇದನ್ನು ಓದಿ : Client : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!
ಹೃದಯರೋಗ ತಜ್ಞರು (Cardiologists) ಎಚ್ಚರಿಕೆಯಲ್ಲಿ ಹೇಳುವಂತೆ, ಹೃದಯಾಘಾತ (Heart Attack) ಕ್ಕೂ ಮುನ್ನ ಕೆಲವೊಂದು ಪ್ರಮುಖ ಸಂಕೇತ/ಲಕ್ಷಣಗಳು ಇರುತ್ತವೆ. ಅವುಗಳನ್ನು ಮೊದಲನೆಯದಾಗಿ ಗುರುತಿಸಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದರಿಂದ ಅನಾಹುತ ತಪ್ಪಿಸಬಹುದು.
ಹೃದಯಾಘಾತ (Heart Attack) ದ ಮೊದಲ ಸೂಚನೆಗಳು :
1. ಎದೆ ನೋವು ಮತ್ತು ಭಾರಪಡುವಿಕೆ :
ಹೃದಯಾಘಾತ (Heart Attack) ದ ಸಂದರ್ಭಗಳಲ್ಲಿ ಸಾಮಾನ್ಯ ಲಕ್ಷಣಗಳಲ್ಲಿ ಎದೆ ನೋವು ಪ್ರಮುಖವಾಗಿದೆ. ಕೆಲವೊಮ್ಮೆ ಎದೆ ನೋವು ಒತ್ತಡ, ಉರಿ, ಬಿಗಿತ ಅಥವಾ ಚುಚ್ಚುವಂತಹ ಭಾವನೆಯಾಗಿ ಕಾಣಿಸಬಹುದು. ಈ ನೋವು ಕೆಲ ನಿಮಿಷಗಳ ಕಾಲ ಮುಂದುವರಿಯಬಹುದು ಮತ್ತು ಕೆಲವೊಮ್ಮೆ ಇದು ಭುಜ, ತೋಳು, ದವಡೆ ಅಥವಾ ಬೆನ್ನಿನ ಕಡೆ ಹರಡಬಹುದು.
2. ಉಸಿರಾಟದ ತೊಂದರೆ :
ದೈಹಿಕ ಪ್ರಯತ್ನವಿಲ್ಲದಿದ್ದರೂ ಅಂದರೆ ಯಾವುದೇ ಕೆಲಸ ಮಾಡದಿದ್ದರೂ ಸಹ ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ಅದು ಹೃದಯದ ಕಾರ್ಯಕ್ಷಮತೆಯಲ್ಲಿ ತೊಂದರೆಯ ಸಂಕೇತವಾಗಿರಬಹುದು. ಹೃದಯ ಸರಿಯಾಗಿ ರಕ್ತ ಪಂಪ್ ಮಾಡದಿದ್ದಾಗ ದೇಹದ ಇತರ ಅಂಗಗಳಲ್ಲಿ ದುರ್ಬಲತೆ ಕಂಡುಬರುತ್ತದೆ.
ಇದನ್ನು ಓದಿ : Bath scene : ಮಹಿಳೆಯರ ಸ್ನಾನದ ದೃಶ್ಯ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಬಂಧನ.!
3. ಅಜೀರ್ಣವೆಂದು ಭಾಸವಾಗುವ ಹೊಟ್ಟೆ ನೋವು :
ನಿರಂತರವಾದ ಹೊಟ್ಟೆ ನೋವು, ವಾಕರಿಕೆ ಅಥವಾ ವಾಂತಿ ಭಾವನೆ ಸಹ ಹೃದಯಾಘಾತ (Heart Attack) ದ ಮುನ್ನಚೆನ್ನೆಯ ಲಕ್ಷಣವಾಗಬಹುದು. ವಿಶೇಷವಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಮಹಿಳೆಯರಲ್ಲಿ ಇದು ಹೆಚ್ಚು ಸಾಮಾನ್ಯ. ಕೆಲವೊಮ್ಮೆ ಜನರು ಇದನ್ನು ಸಾಮಾನ್ಯ ಅಜೀರ್ಣ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ.
⚠️ ಇತರೆ ಎಚ್ಚರಿಕೆ ಸೂಚನೆಗಳು :
- ಎದೆಯಲ್ಲಿ ಉರಿ ಅಥವಾ ನೋವು ಬೆನ್ನು, ಕುತ್ತಿಗೆ, ದವಡೆ, ತೋಳುಗಳಿಗೆ ಹರಡುವುದು.
- ಅತಿಯಾದ ಚಡಪಡಿಕೆ ಅಥವಾ ಗಾಬರಿ.
- ತಲೆಸುತ್ತು ಅಥವಾ ಮೂರ್ಛೆ.
- ತೀವ್ರ ಹೃದಯ ಬಡಿತ.
- ನಿದ್ರಾಹೀನತೆ ಅಥವಾ ರಾತ್ರಿ ನಿದ್ರೆಯಿಂದ ಎಚ್ಚರವಾಗುವುದು.
ಹೃದಯಾಘಾತ (Heart Attack) ದ ಸಮಯದಲ್ಲಿ ತಕ್ಷಣ ಏನು ಮಾಡಬೇಕು.?
ಈ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಸಮಯಪಾಲನೆ ಇಲ್ಲದಿದ್ದರೆ ಹೃದಯ ಸ್ನಾಯುಗಳು ಶಾಶ್ವತವಾಗಿ ಹಾನಿಯಾಗಬಹುದು.
Note : ಸುರಕ್ಷಿತ ಜೀವನಶೈಲಿ + ಎಚ್ಚರಿಕೆ = ಆರೋಗ್ಯವಂತ ಭವಿಷ್ಯ.
ವ್ಯಾಯಾಮ, ಸಮತೋಲನ ಆಹಾರ, ಮನಸ್ಥಿತಿಯ ಸಮತೋಲನೆ ಮತ್ತು ಸಮಯಕ್ಕೆ ತಪಾಸಣೆ ಇವು ಆರೋಗ್ಯಕರ ಹೃದಯಕ್ಕೆ ಬಲಿಷ್ಠ ಆಧಾರಗಳು.
Disclaimer : The above given information is available On online, candidates should check it properly before applying. This is for information only.