ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ (Chikkodi, Belagavi District) ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನದ (Answer Sheet Evaluation) ಸಂದರ್ಭ ವಿದ್ಯಾರ್ಥಿಯೋರ್ವ ಬರೆದ ವಿಚಿತ್ರ ಬೇಡಿಕೆಯ (strange demand) ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನನ್ನ ಹುಡುಗಿ ನನ್ನ ಲವ್ ಮಾಡಬೇಕಾದರೆ ನೀವು ಪ್ಲೀಸ್ ನನ್ನ ಪಾಸ್ ಮಾಡಬೇಕು ಸರ್. ದಯವಿಟ್ಟು ಪಾಸ್ ಮಾಡಿ ಎಂದು 500 ರೂ. ನೋಟು ಇಟ್ಟಿರುವ ಘಟನೆ ನಡೆದಿದೆ.
ಇದನ್ನು ಓದಿ : ಯಾವ ಯಾವ ಕಾಯಿಲೆಗಳಿಗೆ `ಪ್ಯಾರೆಸಿಟಮಾಲ್’ ಮಾತ್ರೆ ಸೇವಿಸಬಹುದು.? ಇಲ್ಲಿದೆ ಮಾಹಿತಿ.!
‘ಸರ್ ರೀ, ಮೇಡಂ ರೀ ನಿಮ್ಮ ಕಾಲು ಬೀಳತೇನಿ, ನನ್ನ ಲವ್ ನಿಮ್ಮ ಕೈಯಾಗ ಐತಿ ರೀ, ನಾ SSLC ಪೇಪರ್‌ದಾಗ ಪಾಸ್ ಆದರಷ್ಟೇ ನನ್ನ ಲವ್ ಮಾಡ್ತೀನಿ ಅಂದಾಳ (My girl said she loves me) ರೀ ನನ್ನ ಹುಡುಗಿ. ಈ 500 ರೂ. ತೊಗೊಂಡು ನೀವ ಚಾ ಕುಡಿರಿ ಸರ್ ರೀ, ನನ್ನ ಪಾಸ್ ಮಾಡರಿ ಎಂದು ವಿದ್ಯಾರ್ಥಿ ಬೇಡಿಕೆ ಇಟ್ಟಿದ್ದಾನೆ.
ಇನ್ನು ಆ ವಿದ್ಯಾರ್ಥಿ ಇದೇ ಉತ್ತರ ಪತ್ರಿಕೆಯಲ್ಲಿ 500 ರೂ. ನೋಟನ್ನು ಸಹ ಇಟ್ಟಿದ್ದಾನೆ.
ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!
ನನ್ನ ಪಾಸ್ ಮಾಡ್ರಿ ಎಂದು ವಿದ್ಯಾರ್ಥಿ ಮನವಿ ಮಾಡಿದ ಉತ್ತರ ಪತ್ರಿಕೆ ಭಾರೀ ವೈರಲ್ ಆಗಿದೆ.