Tuesday, September 17, 2024
spot_img
spot_img
spot_img
spot_img
spot_img
spot_img
spot_img

ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್‌ ಯೋಜನೆಯಡಿ 300 ಯುನಿಟ್‌ ವಿದ್ಯುತ್‌ ಫ್ರೀ ; ಡೈರೆಕ್ಟ್ Link ಇಲ್ಲಿದೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಶಕ್ತಿಗಳಲ್ಲಿ ಹಲವು ವಿಧಗಳಿವೆ. ಅದರಲ್ಲಿ ಸೌರಶಕ್ತಿ ಕೂಡ ಒಂದು. ಸೂರ್ಯನಿಂದ ಉತ್ಪತ್ತಿಯಾಗುವ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಬಹಳ ಮಾದರಿ ಕ್ರಮ.

ಇನ್ನೂ ಜನಸಾಮಾನ್ಯರು ತಮ್ಮ ಮನೆಗಳ ಮೇಲೆ ಸೌರಫಲಕಗಳನ್ನು ಅಳವಡಿಸುವುದು ದುಬಾರಿ. ಆದರೆ ಸರ್ಕಾರದಿಂದ ನಡೆಸಲಾಗುವ ಪಿಎಂ ಸೂರ್ಯ ಘರ್ ಯೋಜನೆಯಲ್ಲಿ ಸಬ್ಸಿಡಿ ಸಿಗುತ್ತದೆ.

ಇದನ್ನು ಓದಿ : ಮಗುವಿನ ಮೇಲೆ ಬೀದಿ ನಾಯಿಯಿಂದ ದಾಳಿ : ಹಿರೋನಂತೆ ಎಂಟ್ರಿ ಕೊಟ್ಟು ರಕ್ಷಿಸಿದ ಸಾಕು ನಾಯಿ, ವಿಡಿಯೋ Viral.!

ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ (ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್) ಯೋಜನೆಯಡಿಯಲ್ಲಿ ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಅಗತ್ಯವಾದ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.

ಯೋಜನೆಯು ಸೌರ ಫಲಕಗಳನ್ನು ಅಳವಡಿಸಲು ಖರ್ಚಾಗುವ ವೆಚ್ಚದ 40% ವರೆಗೆ ಸಬ್ಸಿಡಿಯನ್ನು ಒಳಗೊಂಡಿರುತ್ತದೆ. ಭಾರತದಲ್ಲಿನ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಈ ಸರ್ಕಾರಿ ಯೋಜನೆ ಹೊಂದಿದೆ.

ಫಲಾನುಭವಿಗೆ ಬೇಕಾದ ಮಾನದಂಡಗಳು :
* ಭಾರತೀಯ ಪ್ರಜೆಯಾಗಿರಬೇಕು.
* ಬೇರಾವುದೇ ಸೌರ ಯೋಜನೆಯಲ್ಲಿ ಈಗಾಗಲೇ ಇತರ ಸಬ್ಸಿಡಿ ಪಡೆದಿರಬಾರದು.
* ಮನೆಯು ಮಾನ್ಯವಾದ ವಿದ್ಯುತ್ ಸಂಪರ್ಕ ಹೊಂದಿರಬೇಕು.
* ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿ ಇರುವ ಮನೆಯನ್ನು ಹೊಂದಿರಬೇಕು.

ಪಿಎಂ ಸೂರ್ಯ ಘರ್ ಯೋಜನೆಯ ಪ್ರಯೋಜನಗಳು :
* ಮನೆಗಳಿಗೆ ಉಚಿತ ವಿದ್ಯುತ್.
* ಸರ್ಕಾರಕ್ಕೆ ಒಟ್ಟು ವಿದ್ಯುತ್ ವೆಚ್ಚದಲ್ಲಿ ಉಳಿತಾಯ.
* ಕಡಿಮೆಯಾಗುವ ಇಂಗಾಲದ ಹೊರಸೂಸುವಿಕೆ.
* ನವೀಕರಿಸಬಹುದಾದ ಶಕ್ತಿಯ ಸದ್ಬಳಕೆ.

ಇದನ್ನು ಓದಿ : 3 ತಿಂಗಳ ಫ್ರೀ ರಿಚಾರ್ಜ್ ಲಭ್ಯ.! ಈ ಮೆಸೇಜ್ ನಿಮ್ಗೂ ಬಂತಾ.? Click ಮಾಡೋದಕ್ಕಿಂತ ಮುಂಚೆ ಈ ಸುದ್ದಿ ಓದಿ.

ಪಿಎಂ ಸೂರ್ಯ ಘರ್ ಯೋಜನೆ, ಅರ್ಜಿಗೆ ಅಗತ್ಯವಿರುವ ದಾಖಲೆಗಳು :
* ಗುರುತಿನ ಪುರಾವೆ.
* ವಿಳಾಸದ ಪುರಾವೆ.
* ವಿದ್ಯುತ್ ಬಿಲ್.
* ಛಾವಣಿಯ ಮಾಲೀಕತ್ವದ ಪ್ರಮಾಣಪತ್ರ.

  1. ಅರ್ಜಿ ಸಲ್ಲಿಸುವಿಕೆ :
  2. www.pmsuryaghar.gov.in/ ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  3. ಅಲ್ಲಿ ಮೊದಲಿಗೆ ನೊಂದಣಿ ಮಾಡಿಕೊಳ್ಳಿ. ಅದಕ್ಕೆ ರಿಜಿಸ್ಟ್ರೇಶನ್ ಟ್ಯಾಬ್ ಕ್ಲಿಕ್ ಮಾಡಬೇಕು.
  4. ನಿಮ್ಮ ರಾಜ್ಯ, ಜಿಲ್ಲೆ, ನಿಮ್ಮ ಡಿಸ್ಕಾಂ ಕಂಪನಿ ಹಾಗೂ ನಿಮ್ಮ ಮನೆಯ ವಿದ್ಯುತ್ ಬಿಲ್​ನಲ್ಲಿರುವ ಅಕೌಂಟ್ ನಂಬರ್ ನಮೂದಿಸಬೇಕು.
  5. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ನಮೂದಿಸಿ, ಬಳಿಕ ಪೋರ್ಟಲ್​ನ ನಿರ್ದೇಶನವನ್ನು ಅನುಸರಿಸಬೇಕು.
  6. ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು.
  7. ರೂಫ್‌ಟಾಪ್ ಸೋಲಾರ್‌ಗಾಗಿ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  8. ನಿಮ್ಮ ಡಿಸ್ಕಾಂ ಕಂಪನಿಯು ಅರ್ಜಿಯನ್ನು ಪರಿಶೀಲಿಸಿ ಕಾರ್ಯಸಾಧ್ಯತೆಯ (Feasibility report) ಅನುಮೋದನೆಗಾಗಿ ನಿರೀಕ್ಷಿಸಬೇಕಾಗಬಹುದು. ಇದನ್ನು ಓದಿ : ವರ್ಷಕ್ಕೊಬ್ಬ ಗಂಡನಿಗೆ ಡಿವೋರ್ಸ್ ಕೊಡ್ತಾಳೆ ಈ lady ; ಇಲ್ಲಿಯವರೆಗೆ ಎಷ್ಟು ಡಿವೋರ್ಸ್ ಪಡೆದಿದ್ದಾಳೆ ಗೊತ್ತಾ.?
  9. ಒಮ್ಮೆ ನಿಮಗೆ ಈ ಅನುಮೋದನೆ ಸಿಕ್ಕ ನಂತರ ನಿಮ್ಮ ಡಿಸ್ಕಮ್‌ನಲ್ಲಿ ನೋಂದಾಯಿತ ಮಾರಾಟಗಾರರು ಬಂದು ಸೌರಫಲಕಗಳನ್ನು ಸ್ಥಾಪಿಸುತ್ತಾರೆ.
  10. ಅನುಸ್ಥಾಪನೆಯು (Installation) ಮುಗಿದ ನಂತರ ಸೌರ ಸ್ಥಾವರದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಬೇಕು.
  11. ನೆಟ್ ಮೀಟರ್ ಅನ್ನು ಸ್ಥಾಪಿಸಿದ ನಂತರ ಮತ್ತು ಡಿಸ್ಕಾಂನಿಂದ ಪರಿಶೀಲನೆ ನಡೆಯುತ್ತದೆ.
  12. ಬಳಿಕ ಪೋರ್ಟಲ್‌ನಿಂದ ಕಮಿಷನಿಂಗ್ ಸರ್ಟಿಫಿಕೇಟ್ ನಿರ್ಮಾಣ ಆಗುತ್ತದೆ.
WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img