Sunday, September 8, 2024
spot_img
spot_img
spot_img
spot_img
spot_img
spot_img
spot_img

3 ತಿಂಗಳ ಫ್ರೀ ರಿಚಾರ್ಜ್ ಲಭ್ಯ.! ಈ ಮೆಸೇಜ್ ನಿಮ್ಗೂ ಬಂತಾ.? Click ಮಾಡೋದಕ್ಕಿಂತ ಮುಂಚೆ ಈ ಸುದ್ದಿ ಓದಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಡಿಜಿಟಲ್ ಬ್ಯಾಂಕಿಂಗ್ (digital banking) ಹೆಚ್ಚಾಗುತ್ತಿದ್ದಂತೆ ಮೋಸಗಾರರು ಅಮಾಯಕರನ್ನು ಗುರಿಯಾಗಿಸಿಕೊಂಡು ಅವರ ಕಷ್ಟಪಟ್ಟು ದುಡಿದ ಹಣವನ್ನು ದೋಚಲು ಪ್ರಯತ್ನಿಸುತ್ತಿದ್ದಾರೆ.

ಇದನ್ನು ಓದಿ : WhatsApp ಬಳಕೆದಾರರಿಗೆ ಗುಡ್‌ ನ್ಯೂಸ್ ; ಇನ್ಮುಂದೆ ಇಂಟರ್ನೆಟ್ ಇಲ್ಲದೆಯೇ ಕಳುಹಿಸಬಹುದು ಫೋಟೋ, ಫೈಲ್.!

ಸದ್ಯ ಹೊಸದಾಗಿ ರೀಚಾರ್ಜ್ ಬೆಲೆ ಹೆಚ್ಚಳದ ಹಿನ್ನಲೆಯಲ್ಲಿ 3 ತಿಂಗಳ ಉಚಿತ ರಿಚಾರ್ಜ್ ಲಭ್ಯ! ಎಂಬ ಮೆಸೇಜ್ ಬರುತ್ತಿದೆ.

ಆದ್ರೆ ಇಂತಹ ಮೆಸೇಜ್ ನ್ನು ತಕ್ಷಣ ಡಿಲೀಟ್ ಮಾಡಿ ಎನ್ನುವ ಸಲಹೆಯನ್ನು ನೀಡುತ್ತಿದೆ. ಕಳೆದೆರಡು ತಿಂಗಳಿಂದ ಇಂತಹ ವಂಚನೆಗಳು (fraud) ನಡೆಯುತ್ತಿದ್ದರೂ ಕಳೆದ ಕೆಲವು ವಾರಗಳಲ್ಲಿ ಹೆಚ್ಚು ಚಾಲ್ತಿಯಲ್ಲಿವೆ.

ಬ್ಯಾಂಕ್‌ಗಳಿಂದಲೇ, ಸ್ಕ್ಯಾಮರ್‌ಗಳು (scammers) ತಮ್ಮ ಖಾತೆಯ ವಿವರಗಳು ಅಥವಾ ಪ್ಯಾನ್ ಕಾರ್ಡ್ ಮಾಹಿತಿಯನ್ನು ನವೀಕರಿಸಲು ಕೇಳುವ ಮೋಸದ ಸಂದೇಶಗಳನ್ನು ಕಳುಹಿಸುತ್ತಾರೆ. ಈ ವಾಟ್ಸಾಪ್ ನಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಇದನ್ನು ಓದಿ : ಜಮೀನಿಗೆ ಹೋಗಿದ್ದ ಮಹಿಳೆಯರ ಜೀವಂತ ಸಮಾಧಿಗೆ ಯತ್ನ : ಎಲ್ಲೆಡೆ ಭಾರೀ ವಿರೋಧ ; ಹೃದಯ ವಿದ್ರಾವಕ ಘಟನೆಯ video ವೈರಲ್.!

ನಕಲಿ ಸಂದೇಶವು, ರೀಚಾರ್ಜ್ 3 ತಿಂಗಳ ಉಚಿತ ರಿಚಾರ್ಜ್ (Free Recharge) ಮಾನ್ಯವಾಗಿರುತ್ತದೆ ಮತ್ತು ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದಿರುತ್ತದೆ. ಈ ರೀತಿ ಬಳಕೆದಾರರನ್ನು ಪ್ರೇರೇಪಿಸುತ್ತದೆ.

ಆದಾಗ್ಯೂ, ಪಿಐಬಿ ಫ್ಯಾಕ್ಟ್ ಚೆಕ್ ಟ್ವಿಟರ್‌ಗೆ ತೆಗೆದುಕೊಂಡು ಈ ಸಂದೇಶವು (message) ಸಂಪೂರ್ಣವಾಗಿ ನಕಲಿ ಮತ್ತು ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ ಎಂದು ಘೋಷಿಸಿದೆ.

ದೇಶದಲ್ಲಿ ಏರ್ಟೆಲ್​​, ವೊಡಾಫೋನ್, ಜಿಯೋ, ಬಿಎಸ್​ಎನ್​ಎಲ್​​, ಐಡಿಯಾ ಟೆಲಿಕಾಂ ಸೇವೆಗಳನ್ನು ಒದಗಿಸುತ್ತಿವೆ.

ಇದನ್ನು ಓದಿ : LIC ಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್’ನಲ್ಲಿ ಜೂನಿಯರ್ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇತ್ತೀಚೆಗೆ ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಜಿಯೋ ರೀಚಾರ್ಜ್ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದಲ್ಲದೆ, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ರೀಚಾರ್ಜ್ ಶುಲ್ಕವನ್ನ (fee) ಸುಮಾರು 26 ಪ್ರತಿಶತದಷ್ಟು ಹೆಚ್ಚಿಸಿವೆ. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಸ್ಕ್ಯಾಮರ್ ಗಳು ಮೋಸ ಮಾಡಲು ತಯಾರಾಗಿದ್ದಾರೆ.

ಈ ಹಿಂದೆ ಹಲವಾರು ಬಾರಿ ಜನರ ಹಣವನ್ನು ಕದಿಯಲು ಪ್ರಯತ್ನಿಸುವ ವಂಚನೆಯ ಮೆಸೇಜ್ ಗಳು ಜನರಿಗೆ ಬಂದಿದ್ದವು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img