Thursday, September 19, 2024
spot_img
spot_img
spot_img
spot_img
spot_img
spot_img
spot_img

ಕೋಳಿ ಸಾಕಾಣಿಕೆ ಮಾಡಲು 25 ಲಕ್ಷ ರೂ. ಸಹಾಯಧನ ; ಇಂದೇ ಅರ್ಜಿ ಸಲ್ಲಿಸಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಸರ್ಕಾರಿ ಸೌಲಭ್ಯಗಳು : ನಿರುದ್ಯೋಗಿಗಳನ್ನು ಉದ್ಯೋಗಿಗಳನ್ನಾಗಿ ಹಾಗು ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತೆ, ಅವುಗಳಲ್ಲಿ ಒಂದು ಕೋಳಿ ಸಾಕಾಣಿಕೆ.

ನೀವು ಒಂದು ವೇಳೆ ಕೋಳಿ ಸಾಕಾಣಿಕೆ ಮಾಡಲು ಬಯಸಿದರೆ ಅಂತಹವರಿಗೆ ಕೋಳಿ ಸಾಕಾಣಿಕೆ ವೆಚ್ಚ ತಗ್ಗಿಸಲು ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಶೇ.50ರಷ್ಟು ಅನುದಾನ ಅಥವಾ ಗರಿಷ್ಠ 25 ಲಕ್ಷ ರೂ.ಗಳನ್ನು ನೀಡುವ ಅವಕಾಶವಿದೆ. ಈ ಯೋಜನೆಯ ಲಾಭ ಪಡೆದು ಕೋಳಿ ಘಟಕ ಆರಂಭಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹೌದು, ಹೇಗೆ ದೊರೆಯುತ್ತೆ? ಇಷ್ಟೊಂದು ಹಣ ಯಾಕೆ ಕೊಡ್ತಾರೆ.? ಮತ್ತು ಹೇಗೆ ಕೊಡ್ತಾರೆ? ಅದನ್ನ ಪಡೆದುಕೊಳ್ಳೋದು ಹೇಗೆ.? ಎಲ್ಲಿ ಅರ್ಜಿಯನ್ನು ಸಲ್ಲಿಸಲಾಗುತ್ತೆ.? ಇದಕ್ಕೆ ಅಗತ್ಯವಾದ ದಾಖಲೆಗಳು ಏನು.? ಈ ಹಣದಲ್ಲಿ ಏನಾದ್ರು ನಾವು ಮರಳಿ ವಾಪಸು ಕಟ್ಟಬೇಕಾ.? ಈ ಯೋಜನೆಯಂತೆ ಯಾರಿಗೆಲ್ಲ ದೊರೆಯುತ್ತೆ.? ಇಂತಹದ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರುವ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗಿದ್ದು ಕೊನೆಯವರೆಗೂ ನೋಡಿ.

ಇತ್ತೀಚೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಜಾನುವಾರುಗಳ ಸಾಕಾಣಿಕೆ ಮತ್ತು ಮಾಂಸ ಉತ್ಪಾದನೆ ಬಗ್ಗೆ ಮಹತ್ವದ ಕ್ರಮ ತೆಗೆದುಕೊಂಡಿದ್ದು, ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಂಪೂರ್ಣ ವಾಗಿ ಉಚಿತವಾಗಿ ಇಪ್ಪತೈದು ಲಕ್ಷ ರೂಪಾಯಿಗಳು ದೊರೆಯುತ್ತಿವೆ. ರಾಷ್ಟ್ರೀಯ ಜಾನುವಾರು ಅಭಿಯಾನದ ಅಡಿ ಸರ್ಕಾರದಿಂದ 50% ರಷ್ಟು ಅನುದಾನವನ್ನ ನೀಡಲಾಗ್ತಿದೆ. ಇದಲ್ಲದೆ ಕೋಳಿ ಸಾಕಾಣಿಕೆಗೆ ಕಡಿಮೆ ದರದಲ್ಲಿ ನಬಾರ್ಡ್‌ನಿಂದ ಸಾಲ ದೊರೆಯುತ್ತಿದೆ.

ಕೋಳಿ ಸಾಕಾಣಿಕೆ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಬೇಕಾದರೆ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಸರ್ಕಾರವು 50% ಪ್ರತಿಶತದಷ್ಟುವರೆಗೆ ಸಹಾಯಧನವನ್ನು ನೀಡುತ್ತಾ ಇದೆ. ಇದಲ್ಲದೇ ಕೋಳಿ ಸಾಕಾಣಿಕೆಗೆ ಕಡಿಮೆ ದರದಲ್ಲಿ ನಬಾರ್ಡ್‌ನಿಂದಲೂ ಕೂಡ ಸಾಲ ನೀಡಲಾಗುತ್ತದೆ. ದೇಶದಾದ್ಯಂತ ಪ್ರೋಟೀನ್ ಸೇವನೆ ಹೆಚ್ಚಾಗಿದೆ. ಅದಕ್ಕಾಗಿ ಈಗ ಹೆಚ್ಚಿನ ಜನಸಂಖ್ಯೆಯು ಮೊಟ್ಟೆಗಳ ಮೇಲೆ ಅವಲಂಬಿತವಾಗಿದೆ. ಅದಕ್ಕಾಗಿಯೇ ಪ್ರತಿ ಹಳ್ಳಿಗಳಲ್ಲಿ ಡೈರಿ ಫಾರ್ಮ್ಗಳಂತೆ ಕೋಳಿ ಫಾರ್ಮ್ ಗಳನ್ನ ತೆರೆಯಲಾಗ್ತಿದೆ.

ಪೌಲ್ಟ್ರಿ ಫಾರ್ಮ್ 2023 ರಿಂದ ಉತ್ತಮ ಆದಾಯಕ್ಕಾಗಿ ಭಾರತ ಮತ್ತು ವಿದೇಶಗಳಲ್ಲಿ ಮಾಂಸ ಮತ್ತು ಮೊಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇರುವ ತಳಿಗಳನ್ನ ಆಯ್ಕೆ ಮಾಡಿ, ಈತನ್ಮಧ್ಯೆ ರೋಗಗಳ ಅಪಾಯಗಳನ್ನ ಕಡಿಮೆ ಮಾಡುವುದಕ್ಕೆ ರೋಗ ನಿರೋಧಕತೆ ಇರುವ ತಳಿಗಳನ್ನ ಆಯ್ಕೆ ಮಾಡಲು ಮರೆಯದಿರಿ. ಇದರೊಂದಿಗೆ ಮರಿಗಳ ಹಾರೈಕೆಯ ಕೆಲಸವೂ ಸಲೀಸಾಗುತ್ತದೆ.

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿ, ಹೊಸ ಕೋಳಿ ಫಾರ್ಮ್ ನಲ್ಲಿ ಸಬ್ಸಿಡಿ ಪಡೆಯುವುದಕ್ಕೆ ನೀವು ಅಧೀಕೃತ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನ ಸಲ್ಲಿಸಬಹುದು. ರೈತರು ನಿಮ್ಮ ಸಮೀಪದ ಜಿಲ್ಲೆಯ ಪಶು ಸಂಗೋಪನಾ ಇಲಾಖಾ ಕಚೇರಿಗೆ ತೆರಳಿ ಕೋಳಿ ಸಾಕಾಣಿಕೆ ಬಗ್ಗೆ ವಿಚಾರಿಸಬಹುದು.

ಕೋಳಿ ಸಾಕಾಣಿಕೆ ಪ್ರಾರಂಭಿಸಲು ಅನುಸರಿಸಬೇಕಾದ ನಿಯಮಗಳು :

  1. ಕೋಳಿ ಸಾಕಣೆ ಕಲಿಯಿರಿ.
  2. ನಿಮ್ಮ ಕೋಳಿ ವಲಯವನ್ನು ಆರಿಸಿ.
  3. ಹಕ್ಕಿಯ ಸರಿಯಾದ ಪ್ರಕಾರವನ್ನು ಆರಿಸಿ.
  4. ನಿಮ್ಮ ಫಾರ್ಮ್ ಲೋಗೋ ರಚಿಸಿ.
  5. ಫಾರ್ಮ್ ಸ್ಥಳವನ್ನು ಹೊಂದಿಸಿ.
  6. ವ್ಯಾಪಾರ ಯೋಜನೆಯನ್ನು ಹೊಂದಿರಿ.
  7. ಸಾಲ ಪಡೆಯಿರಿ.
  8. ಪರಿಪೂರ್ಣ ಕೋಳಿ ವಸತಿ ವ್ಯವಸ್ಥೆಯನ್ನು ಸ್ಥಾಪಿಸಿ.

ಮೊಬೈಲ್ ಮೂಲಕ ಇಂದೇ ಅರ್ಜಿ ಸಲ್ಲಿಸಿ :

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಹೊಸ ಕೋಳಿ ಫಾರ್ಮ್‌ನಲ್ಲಿ ಸಬ್ಸಿಡಿ ಪಡೆಯಲು ನೀವು ಈ ಕೆಳಗಿನ ಅಧಿಕೃತ ಪೋರ್ಟಲ್’ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

https://nlm.udyamimitra.in/ 

ರೈತರು ಕೋಳಿ ಸಾಕಾಣಿಕೆ, ಮುಂದುವರಿದ ತಳಿಯ ಕೋಳಿಗಳು, ಕೋಳಿ ಸಾಕಾಣಿಕೆಯ ಒಟ್ಟು ವೆಚ್ಚ ಮತ್ತು ಕೋಳಿ ಫಾರಂ ಸ್ಥಾಪನೆ ಕುರಿತು ಮಾಹಿತಿ ಪಡೆಯಲು ಸಮೀಪದ ಜಿಲ್ಲೆಯ ಪಶು ಸಂಗೋಪನಾ ಇಲಾಖೆ ಕಚೇರಿಗೆ ಭೇಟಿ ನೀಡಬಹುದು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img