ಜನಸ್ಪಂದನ ನ್ಯೂಸ್, ಡೆಸ್ಕ್ : ಶಾಲೆಯಿಂದ ಮನೆಗೆ ಹೊರಟ 10 ವರ್ಷದ ಅಪ್ರಾಪ್ತ ಬಾಲಕಿ (Girl) ಯೊಬ್ಬಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಘಟನೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಅಪ್ರಾಪ್ತ ಬಾಲಕಿ (Girl) ಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಘಟನೆ ಶನಿವಾರದಂದು (ಜುಲೈ 12) ಗುಮ್ಮಿಡಿಪೂಂಡಿ ಪಟ್ಟಣದ ಬಳಿ ನಡೆದಿದ್ದು, ಸಂಬಂಧಪಟ್ಟ ಸಿಸಿಟಿವಿ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಧಿಕೃತ ಮಾಹಿತಿಯ ಪ್ರಕಾರ, 4ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ (Girl) ಶಾಲೆಯಿಂದ ಮನೆಗೆ ಹಿಂತಿರುಗುವಾಗ ಆರೋಪಿ ವ್ಯಕ್ತಿಯೊಬ್ಬ ಆಕೆ (Girl) ಯನ್ನು ಹಿಂಬಾಲಿಸಿ ಬಳಿಕ ಆಕೆಯನ್ನು ಪೊದೆಗಳ ಕಡೆ ಎಳೆಯಲು ಯತ್ನಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದನ್ನು ಓದಿ : Stray dogs : ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಅಟ್ಟಹಾಸ.!
ಈ ಅಪಾಯಕಾರಿ ಪ್ರಯತ್ನದಿಂದ ಬಾಲಕಿ (Girl) ಸಮಯ ಪ್ರಜ್ಞೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮನೆಗೆ ತಲುಪಿದ ಬಾಲಕಿ ನಡೆದ ಘಟನೆಯ ಬಗ್ಗೆ ತಕ್ಷಣವೇ ತನ್ನ ಅಜ್ಜಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಸ್ತುತ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.
ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ತಮ್ಮ ಅಧಿಕೃತ X (ಹಳೆ ಟ್ವಿಟ್ಟರ್) ಖಾತೆಯಲ್ಲಿ ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆ. ಅಣ್ಣಾಮಲೈ ಅವರು ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇದನ್ನು ಓದಿ : Home remedies : “ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮನೆಮದ್ದುಗಳಿವು.!”
ಈ ಘಟನೆಯ ಬಳಿಕ ಸ್ಥಳೀಯರ ನಡುವೆ ಆತಂಕದ ವಾತಾವರಣ ಉಂಟಾಗಿದೆ. ಜನರು ತಮ್ಮ ಮಕ್ಕಳ/ಬಾಲಕಿಯರ (Girl) ಸುರಕ್ಷತೆಯ ಬಗ್ಗೆ ಚಿಂತೆ ವ್ಯಕ್ತಪಡಿಸುತ್ತಿದ್ದು, ಪೊಲೀಸರು ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬಾಲಕಿ (Girl) ಯನ್ನು ಅಪಹರಿಸಲು ಯತ್ನಿಸಿರುವ ವಿಡಿಯೋ :
திருவள்ளூர் மாவட்டம் கும்மிடிப்பூண்டி அருகே, கடந்த சனிக்கிழமை அன்று, சாலையில் நடந்து சென்ற பத்து வயது சிறுமியை, வாயை மூடிக் கடத்திச் சென்று பாலியல் வன்கொடுமை செய்த சிசிடிவி காட்சி, நெஞ்சைப் பதைபதைக்க வைக்கிறது.
குற்றம் நடந்து ஐந்து நாட்கள் கடந்தும், இன்னும் குற்றவாளி கைது… pic.twitter.com/P6G7h5kTWU
— K.Annamalai (@annamalai_k) July 16, 2025
Stray dogs : ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಅಟ್ಟಹಾಸ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳು (Stray dogs) ಅಟ್ಟಹಾಸ ಮೆರೆದಿರುವ ಘಟನೆಯೊಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಪರೀಕ್ಷೆಗಾಗಿ ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಯುವತಿ (ವಿದ್ಯಾರ್ಥಿನಿ) ಯೊಬ್ಬಳ ಮೇಲೆ ನಾಲ್ಕೈದು ಬೀದಿ ನಾಯಿಗಳ ಗುಂಪು ದಾಳಿ ನಡೆಸಿವೆ.
ಬೀದಿ ನಾಯಿಗಳ (Stray dogs) ದಾಳಿಯಿಂದ ಯುವತಿಗೆ ಗಾಯಗಳಾಗಿದ್ದು, ಸ್ಥಳೀಯ ನಿವಾಸಿಗಳ ಸಹಾಯದಿಂದ ಯುವತಿಯನ್ನು ಸಮೀಪದ ಆಸ್ಪತ್ರೆಗೆ ಕಯೆದೊಯ್ಯಲಾಗಿದೆ.
ಇದನ್ನು ಓದಿ : ಮದುವೆಯ ಮೊದಲ ದಿನದಂದೇ ತಲೆತಿರುಗುವಿಕೆ ಎಂದ ಪತ್ನಿ ; Pregnancy kit ಕೊಟ್ಟ ಪತಿ.!
ಭಯಾನಕ ಘಟನೆಯ ಸಂಪೂರ್ಣ ದೃಶ್ಯ CCTV ಯಲ್ಲಿ ಸೆರೆಯಾಗಿದ್ದು, ಸದ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.
ಘಟನೆಯ ಹಿನ್ನಲೆ :
ಕಾಲೇಜು ಯುವತಿಯೋರ್ವಳು ಪರೀಕ್ಷೆಗೆ ತೆರಳಲ್ಲೆಂದು ಬೆಳಗ್ಗೆ ರಸ್ತೆ ಮಧ್ಯೆ ಸಾಗುತ್ತಿದ್ದಾಗ, ಒಮ್ಮೇಲೆ ನಾಲ್ಕೈದು ಬೀದಿ ನಾಯಿಗಳ (Stray dogs) ಗುಂಪು ದಾಳಿ ನಡೆಸಿವೆ. ಬೀದಿ ನಾಯಿಗಳ ಗುಂಪುನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಒಂದು ಮನೆಯ ಹತ್ತಿರ ತೆರಳಿ ಹೇಗೋ ಪಾರಾಗಿದ್ದಾಳೆ.
ಕೆಲ ಸಮಯದ ನಂತರ ಅವೇ ನಾಲ್ಕೈದು ಬೀದಿ ನಾಯಿಗಳ (Stray dogs) ಗುಂಪು ಪುನಃ ಯುವತಿಯ ಮೇಲೆ ದಾಳಿಗೆ ಮುಂದಾಗಿವೆ. ಸುದೈವಶಾತ್ ಇದೇ ವೇಳೆ ಅದೆ ರಸ್ತೆಯಲ್ಲಿ ಇನ್ನೋಬ್ಬ ಯುವತಿ (ವಿದ್ಯಾರ್ಥಿನಿಯ ಸ್ನೇಹಿತೆ) ಬರುತ್ತಿರಬೇಕಾದರೆ ನಾಲ್ಕೈದು ಬೀದಿ ನಾಯಿಗಳ (Stray dogs) ಗುಂಪು ದಾಳಿ ಮಾಡಲು ಮುಂದಾಗಿರುವುದನ್ನು ಗಮನಿಸಿದ್ದಾಳೆ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಈ ವೇಳೆ ಸ್ನೇಹಿತೆ ಧೈರ್ಯದಿಂದ ಆಕೆಯ ನೆರವಿಗೆ ಧಾವಿಸಿ, ಕೈಯಲ್ಲಿ ಕಲ್ಲು ಹಿಡಿಯುತ್ತಲೇ ಬೀದಿ ನಾಯಿಗಳು ಅಲ್ಲಿಂದ ಓಡಿ ಹೋಗಿವೆ. ಸ್ನೇಹಿತೆಯ ಸಮಯಪ್ರಜ್ಷೆಯಿಂದ ಯುವತಿ ಬೀದಿ ನಾಯಿ (Stray dogs) ಗಳಿಂದ ಪಾರಾಗಿದಾಳೆ.
ಗಂಭೀರ ಗಾಯ, ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು :
ನಾಯಿಗಳ ಹಲ್ಲೆಯಿಂದ ಯುವತಿಗೆ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ : Private video threat : ಪೋಲೀಸ್ ಕಾನ್ಸ್‌ಟೇಬಲ್ ಮತ್ತು ಮಹಿಳೆಯ ಪತಿ ಬಂಧನ.!
ವೈರಲ್ ವಿಡಿಯೋ: ಆತಂಕ ಮೂಡಿಸಿದ ದೃಶ್ಯ :
ಜುಲೈ 15ರಂದು @Incognito_qfs ಎಂಬ ಫ್ಲಾಟ್‌ಪಾರಂನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, 7.8 ಮಿಲಿಯನ್‌ವೇಳೆ ವೀಕ್ಷಣೆ ಪಡೆದಿದೆ. ವಿಡಿಯೋದಲ್ಲಿ, ತನ್ನ ಪಾಡಿಗೆ ನಡೆಯುತ್ತಿದ್ದ ಯುವತಿಯ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತಿದ್ದು, ದಾಳಿ ವೇಳೆ ಯುವತಿ ಕೆಳಗೆ ಬಿದ್ದು ನಾಯಿಗಳನ್ನು ಓಡಿಸಲು ಪಯತ್ನಿಸುತ್ತಿರುವುದು ನೋಡಬಹುದು.
ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಪ್ರತಿಕ್ರಿಯೆ :
ಈ ವಿಡಿಯೋ ಕುರಿತು ನೆಟ್ಟಿಗರು ತೀವ್ರ ಆತಂಕ ವ್ಯಕ್ತಪಡಿಸಿದ್ದು, “ಈ ಸ್ಥಳದಲ್ಲಿ ಮಕ್ಕಳಿದ್ದರೆ ಅವರ ಪ್ರಾಣಕ್ಕೂ ಅಪಾಯವಾಗಬಹುದಿತ್ತು” ಎಂದು ಒಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
ಬೀದಿ ನಾಯಿಗಳ (Stray dogs) ದಾಳಿಯ ವಿಡಿಯೋ :
https://x.com/i/status/1945043277796815117