Friday, October 18, 2024
spot_img
spot_img
spot_img
spot_img
spot_img
spot_img
spot_img

ಏ ಪುಟಾಣಿ ಒಳ್ಗಡೆನೇ ಆಡು, ಹೊರಗಡೆ ಬೇಡ ಅಂತ ಈ ಶ್ವಾನ ಮಾಡಿದ್ದೇನು ಗೊತ್ತಾ.? Video ನೋಡಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಯಲ್ಲಿ ಸಾಕಿದ ಪ್ರಾಣಿಗಳು ಆ ಮನೆಯವರಿಗೆ ನಿಷ್ಠೆಯಿಂದ ಇರುತ್ತವೆ. ತನ್ನ ಮನೆ ಮಕ್ಕಳು (children’s) ಯಾವುದಾದ್ರೂ ಅಪಾಯಕ್ಕೆ ಸಿಲುಕಿಕೊಂಡ್ರೆ, ಆ ತಕ್ಷಣ ಮಕ್ಕಳ ರಕ್ಷಣೆಗೆ ಈ ಶ್ವಾನಗಳು ಧಾವಿಸುತ್ತವೆ.

ಹೀಗೆ ಅಪಾಯದಲ್ಲಿ ಸಿಲುಕಿದ ಮಾಲೀಕರು, ಪುಟಾಣಿ ಮಕ್ಕಳನ್ನು ಸಾಕು ನಾಯಿಗಳು ರಕ್ಷಿಸಿದಂತಹ ಅದೆಷ್ಟೋ ಉದಾಹರಣೆಗಳಿವೆ (example’s). ಇದೀಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಅಂಬೆಗಾಲಿಡುವ ಪುಟಾಣಿಯನ್ನು ಮನೆಯಿಂದ ಹೊರ ಹೋಗದಂತೆ ಶ್ವಾನವು ಸ್ಟ್ರೀಕ್ಟ್ ಆಗಿ ಜೋಪಾನ ಮಾಡಿದೆ.

ಇದನ್ನು ಓದಿ : ಜಾತ್ರೆಗಳಲ್ಲಿ ಬರಿಗಾಲಲ್ಲಿ ಕೆಂಡ ಹಾಯ್ದ ಪೊಲೀಸ್ ಅಧಿಕಾರಿಗಳು ; video ವೈರಲ್.!

ವಿಡಿಯೋದಲ್ಲಿರುವ ದೃಶ್ಯ :
ಶ್ವಾನವೊಂದು (dog) ಅಂಬೆಗಾಲಿಡುವ ಮಗುವನ್ನು ಜೋಪಾನವಾಗಿ ನೋಡಿಕೊಳ್ಳುತ್ತಿರುವ ದೃಶ್ಯವನ್ನು ನೋಡಬಹುದು. ಮನೆಯ ಹಾಲ್ ಅಲ್ಲಿ ತನ್ನ ಪಾಡಿಗೆ ಮಲಗಿರುವ ನಾಯಿ, ಮಗು ಅಂಬೆಗಾಲಿಡುತ್ತಾ, ಮುಖ್ಯ ದ್ವಾರದ (door) ಬಳಿ ಆಟವಾಡಲು ಹೋಗುತ್ತಿರುವುದನ್ನು ಕಂಡಿದೆ.

ಈ ದೃಶ್ಯವನ್ನು ಕಂಡ ಈ ಬುದ್ಧಿವಂತ (intelligent) ಶ್ವಾನವು, ಮಗು ಹೊರಗಡೆ ಹೋಗಿ ಆಟವಾಡಿದ್ರೆ, ಅದಕ್ಕೆ ಪೆಟ್ಟಾಗಬಹುದು, ಮಗುವನ್ನು ಯಾವುದೇ ಕಾರಣಕ್ಕೂ ಹೊರಗೆ ಹೋಗಲು ಬಿಡಬಾರದು ಎನ್ನುತ್ತಾ, ತಾನೇ ಬಾಗಿಲ ಬಳಿ ಹೋಗಿ ಕುತ್ಕೊಂಡಿದೆ. ಆದರೂ ಮಗು ಹೊರಗಡೆ ಹೋಗಲು ಪ್ರಯತ್ನಿಸುತ್ತದೆ.

ಆ ಸಂದರ್ಭದಲ್ಲಿ ಇಲ್ಲ ಇಲ್ಲ ಮನೆಯ ಹೊರಗಡೆ ಹೋಗೊ ಹಾಗಿಲ್ಲ, ಒಳಗಡೆಯೇ ಆಟವಾಡ್ಬೇಕು (play) ಎಂದು ಈ ಶ್ವಾನ ಮಗುವನ್ನು ಮನೆಯ ಒಳಗಡೆ ಕರ್ಕೊಂಡು ಹೋಗುತ್ತೆ.

ಇದನ್ನು ಓದಿ : ʻಧಕ್ ಧಕ್ ಕರ್ನೆ ಲಗಾʼ ಹಾಡಿಗೆ ಮೈ ಚಳಿ ಬಿಟ್ಟು ಕುಣಿದ ನಟಿ ; Video viral.!

ವಿಡಿಯೋವನ್ನು @TheFigen_ ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದಕ್ಕಾಗಿಯೇ ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತ (Dogs are man’s best friend) ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img