Friday, October 18, 2024
spot_img
spot_img
spot_img
spot_img
spot_img
spot_img
spot_img

ಅತಿಯಾಗಿ ಟೀ ಕುಡಿಯುವುದರಿಂದ ಏನಾಗಬಹುದು ಗೊತ್ತೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಚಹಾವಿಲ್ಲದೆ ದಿನವನ್ನು ಉಳಿಸಿಕೊಳ್ಳುವುದು ಕಷ್ಟ. ಚಹಾವೆಂದರೆ (tea) ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ವಿಶ್ವದಾದ್ಯಂತ ಹೆಚ್ಚಿನ ಜನರು ಇಷ್ಟಪಡುವಂತಹ ಪಾನೀಯಗಳಲ್ಲಿ ಚಹಾವು ಒಂದಾಗಿದೆ.

ಭಾರತೀಯರು ಎಲ್ಲಾ ಸಮಯದಲ್ಲೂ ಚಹಾವನ್ನು ಅತಿ ಹೆಚ್ಚಾಗಿ ಇಷ್ಟಪಟ್ಟು ಸೇವಿಸುತ್ತಾರೆ. ಅತಿ ಹೆಚ್ಚು ಕೆಲಸ ಮಾಡಿ ದಣಿವಾದ ಟೈಮಲ್ಲಿ ಅಥವಾ ತಲೆನೋವಿನಿಂದ (headache) ಪರಿಹಾರ ಪಡೆಯಲು, ವಹಿಸಿದ ಕೆಲಸವನ್ನು ನಿರ್ವಹಿಸಲು ಹೀಗೆ ಮುಂತಾದ ಕಾರಣಗಳಿಗೆ ಚಹಾವನ್ನು ಸೇವಿಸುತ್ತಾರೆ.

ಇದನ್ನು ಓದಿ : ಉತ್ತರ ಪತ್ರಿಕೆ ಓದದೇ ರೀಲ್ಸ್ ಮಾಡುತ್ತ ಮಾರ್ಕ್ಸ್ ಕೊಟ್ಟ ಮೇಡಂ ; ಮುಂದೆನಾಯ್ತು Video ನೋಡಿ.

ಆದರೆ ಅತಿಯಾಗಿ ಚಹಾ ಕುಡಿಯುವುದರಿಂದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಲ್ಲದೇ ಹಲವಾರು ರೋಗಗಳನ್ನು ಎದುರಿಸಬೇಕಾಗುತ್ತದೆ.

* ಅತಿಯಾಗಿ ಟೀ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು (Stomach related diseases) ಬರಬಹುದು. ಸಾಮಾನ್ಯವಾಗಿ ಟೀ ಕುಡಿಯುವುದರಿಂದ ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆ ಎದುರಿಸಬೇಕಾಗುತ್ತದೆ.

* ನಾವು ಅತಿಯಾಗಿ ಟೀ ಕುಡಿಯುವುದರಿಂದ ದೇಹ ಸೋಮಾರಿಯಾಗುತ್ತದೆ (lazy). ಏಕೆಂದರೆ ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಅದು ಆಯಾಸ ಮತ್ತು ಚಡಪಡಿಕೆಗೆ ಕಾರಣವಾಗುತ್ತದೆ.

* ಅತಿಯಾಗಿ ಟೀ ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗುತ್ತದೆ. ವಾಸ್ತವವಾಗಿ ಚಹಾದಲ್ಲಿ ಕಂಡುಬರುವ ಟ್ಯಾನಿನ್ ಎಂಬ ವಸ್ತುವು ದೇಹದಲ್ಲಿರುವ ಕಬ್ಬಿಣಕ್ಕೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಕ್ರಮೇಣ ಕಡಿಮೆ ಮಾಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಹೆಚ್ಚು ಚಹಾ ಕುಡಿಯುವುದನ್ನು ತಪ್ಪಿಸಬೇಕು.

* ರಕ್ತದೊತ್ತಡ (blood pressure) ಹೊಂದಿರುವವರು ಜಾಸ್ತಿ ಚಹಾ ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಅತಿಯಾಗಿ ಚಹಾ ಕುಡಿಯುವುದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

* ಚಹಾ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಚಹಾದಲ್ಲಿರುವ ಕೆಫೀನ್ ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ, ಇದು ನೀರಿನ ಮಟ್ಟವನ್ನು ಕಡಿಮೆಗೊಳಿಸುತ್ತದೆ.

ಇದನ್ನು ಓದಿ : ಭಜನೆ ಮಾಡ್ತಿದ್ದ ಮಹಿಳೆಯರ ಮುಂದೆಯೇ ಅಂಡರ್‌ವೇರ್‌ನಲ್ಲೇ ಕುಳಿತ ಸಬ್ ಇನ್ಸ್‌ಪೆಕ್ಟರ್ ; Video Viral.!

* ಹೆಚ್ಚು ಟೀ ಕುಡಿಯುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಸರಿಯಾಗಿ ನಿದ್ರೆ ಬಾರದವರು ಹೆಚ್ಚು ಚಹಾ ಕುಡಿಯಬಾರದು

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img