Friday, October 18, 2024
spot_img
spot_img
spot_img
spot_img
spot_img
spot_img
spot_img

Health : ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳುವುದು ಹೇಗೆ ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಡೆಂಗ್ಯೂ ಜ್ವರ ಈ ಋತುಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲೂ ಮಕ್ಕಳೇ ಡೆಂಗ್ಯೂ ಜ್ವರಕ್ಕೆ ಮುಖ್ಯ ಟಾರ್ಗೆಟ್‌ ಆಗುತ್ತಿದ್ದಾರೆ. ನಿಮಗೆ ಈಗಾಗಲೇ ತಿಳಿದಂತೆ ಡೆಂಗ್ಯೂ ಜ್ವರ ಡೆಂಗ್ಯೂ ವೈರಸ್‌ನಿಂದ ಉಂಟಾಗುತ್ತದೆ.

ವಿಪರೀತ ಜ್ವರ, ತಲೆ ನೋವು, ವಾಂತಿ, ಸ್ನಾಯುಗಳ ಮತ್ತು ಕೀಲುಗಳ ನೋವು ಕಾಣಿಸಿ ಕೊಳ್ಳುವುದು ಈ ಜ್ವರದ ಪ್ರಮುಖ ಲಕ್ಷಣಗಳು. ಒಂದು ವೇಳೆ ವ್ಯಕ್ತಿ, ಡೆಂಗ್ಯೂ ವೈರಸ್ ಸೋಂಕಿಗೆ ಒಳಗಾದರೆ, ಬೇಗ ಚೇತರಿಕೊಳ್ಳಲು ಈ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು.

ಇದನ್ನು ಓದಿ : ಮದುವೆಯನ್ನೇ ಬ್ಯುಸಿನೆಸ್ ಮಾಡಿಕೊಂಡ ಲೇಡಿ ; ಪೊಲೀಸ್‌ ಅಧಿಕಾರಿಗಳು ಸೇರಿ 50 ಜನರ ಜೊತೆ ಮದುವೆ.!

* ಡೆಂಗ್ಯೂ ಜ್ವರ ಕಾಣಿಸಿಕೊಂಡವರಲ್ಲಿ, ನಿರ್ಜಲೀಕರಣ ಸಮಸ್ಯೆ ಅತಿಯಾಗಿ ಕಾಡುವುದರಿಂದ, ಸರಿಯಾಗಿ ನೀರು ಕುಡಿಯಬೇಕು. ಇದರಿಂದ ದೇಹ ಹೈಡ್ರೇಟ್ ಆಗಿರುವುದು.

* ಅರಿಶಿನ ಹಾಲನ್ನು ಕುಡಿಯುವುದರಿಂದ, ಡೆಂಗ್ಯೂ ಜ್ವರ ಹೊಂದಿರುವ ವ್ಯಕ್ತಿ ಬಹಳ ಬೇಗನೇ ಚೇತರಿಸಿಕೊಳ್ಳಬಹುದು.

* ಬ್ಯಾಕ್ಟೀರಿಯಾ ವಿರೋಧಿ ಗುಣಗಳು, ಕಂಡು ಬರುವ ಬೇವಿನ ಎಲೆಗಳ ಕಷಾಯ ಮಾಡಿ ಕುಡಿದರೆ, ರಕ್ತದಲ್ಲಿ ಪ್ಲೆಟ್ಲೇಟ್ ಹಾಗೂ ಬಿಳಿ ರಕ್ತದ ಕಣಗಳ ಗಣತಿ ಹೆಚ್ಚಾಗಿ ಮಾಡುವಲ್ಲಿ ಡೆಂಗ್ಯೂ ಜ್ವರವನ್ನು ನಿಯಂತ್ರಣ ಮಾಡಬಹುದು.

* ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ, ಡೆಂಗ್ಯೂ ಜ್ವರದ ರೋಗ ಲಕ್ಷಣಗಳನ್ನು ಕಡಿಮೆ ಮಾಡಬಹುದು ಎಂದು ವೈದ್ಯರು ಕೂಡ ಹೇಳುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಈ ಎಲೆಯುಲ್ಲಿ ಕಂಡು ಬರುವ ಕ್ಯಾರೊಕೇನ್ ಮತ್ತು ಪಪೈನ್ ಎನ್ನುವ ಅಂಶ, ರಕ್ತದ ಪ್ಲೇಟ್ಲೆಟ್ ನ್ನು ಪರಿಣಾಮಕಾರಿ ಆಗಿ ಹೆಚ್ಚಿಸುವುದು.

* ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ ಹಾಗೂ ಪೊಟ್ಯಾ ಷಿಯಂ ಅಂಶದ ಪ್ರಮಾಣ ತುಂಬಾನೇ ಹೆಚ್ಚಾಗಿ ಸಿಗುತ್ತದೆ. ಇವು ದೇಹದಲ್ಲಿ ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚು ಮಾಡಿ, ಡೆಂಗ್ಯೂ ಜ್ವರವನ್ನು ನಿಯಂತ್ರಣ ಮಾಡಲು ನೆರವಿಗೆ ಬರುತ್ತದೆ.

* ಪಾಲಾಕ್ ಸೊಪ್ಪು
ಪಾಲಾಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹಾಗೂ ಒಮೆಗಾ-3 ಕೊಬ್ಬಿ ನಾಂಶಗಳು ಹೆಚ್ಚಾಗಿ ಸಿಗುವುದರಿಂದ ರಕ್ತದಲ್ಲಿ ಪ್ಲೇಟ್ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿ, ಡೆಂಗ್ಯೂ ಜ್ವರವನ್ನು ನಿಯಂತ್ರಣಕ್ಕೆ ಬರುವಂತೆ ಮಾಡುತ್ತದೆ.

* ಪ್ರಬಲ ಆಂಟಿ ಆಕ್ಸಿಡೆಂಟ್ ಹೊಂದಿರುವ ಈ ಹಣ್ಣಿನ ಬೀಜ ಗಳನ್ನು ಸೇವನೆ ಮಾಡುವುದರಿಂದ ಡೆಂಗ್ಯೂ ಜ್ವರ ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಪ್ಲೇಟ್ಲೆಟ್‌‌ಗಳ ಸಂಖ್ಯೆ ಹೆಚ್ಚಾಗಲು ನೆರವಾ ಗುತ್ತದೆ.

* ಡೆಂಗ್ಯೂ ಜ್ವರ ಹೊಂದಿದ ವ್ಯಕ್ತಿ, ವಿಟಮಿನ್ ಸಿ ಅಂಶಗಳು ಹೆಚ್ಚಾಗಿ ಸಿಗುವ ಹಣ್ಣುಗಳಾದ ಕಿತ್ತಳೆ, ಮೂಸಂಬಿ ಹಣ್ಣುನ್ನು ಸೇವನೆ ಮಾಡುವುದರಿಂದ ಅಥವಾ ಇದರ ಜ್ಯೂಸ್ ಕುಡಿಯುವು ದರಿಂದ, ಈ ಜ್ವರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು

* ಎಳನೀರಿನಲ್ಲಿ ಸಾಕಷ್ಟು ಎಲೆಕ್ಟ್ರೋಲೈಟ್ ಅಂಶಗಳಿರುವು ದರಿಂದ, ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡಿ, ಡೆಂಗ್ಯೂ ಜ್ವರವನ್ನು ನಿಯಂತ್ರಣ ಮಾಡಲು ನೆರವಾಗುವುದು.

ಇದನ್ನು ಓದಿ : Video : ಕಾಲೇಜು ಮುಂದೆ ನಿಂತಿದ್ದ ಯುವತಿಯರಿಗೆ ಗುಪ್ತಾಂಗ ತೋರಿಸಿ ಪರಾರಿಯಾದ ಕಾಮುಕ ಪೊಲೀಸ್ ವಶಕ್ಕೆ.!

* ಹಲವಾರು ಬಗೆಯ ಔಷಧೀಯ ಗುಣಗಳನ್ನು ಒಳಗೊಂಡಿರುವ ತುಳಸಿ ಎಲೆಗಳನ್ನು ಜಗಿದು, ಅದರ ರಸವನ್ನು ಹೀರುತ್ತಾ ಬಂದರೆ, ಪರಿಣಾಮಕಾರಿ ಆಗಿ ಡೆಂಗ್ಯೂ ಜ್ವರವನ್ನು ನಿಯಂತ್ರಣ ಮಾಡಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img