Saturday, July 13, 2024
spot_img
spot_img
spot_img
spot_img
spot_img
spot_img

ಮದುವೆಯನ್ನೇ ಬ್ಯುಸಿನೆಸ್ ಮಾಡಿಕೊಂಡ ಲೇಡಿ ; ಪೊಲೀಸ್‌ ಅಧಿಕಾರಿಗಳು ಸೇರಿ 50 ಜನರ ಜೊತೆ ಮದುವೆ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಓರ್ವ ಮಹಿಳೆ ಮದುವೆಯನ್ನೇ ಬಂಡವಾಳ ಮಾಡಿಕೊಂಡು ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿರುವ ಘಟನಯೊಂದು ಇದೀಗ ಬೆಳಕಿಗೆ ಬಂದಿದೆ.

ತಮಿಳುನಾಡಿನ ಈ ಮಹಿಳೆ ಬಟ್ಟೆಗಳನ್ನು ಬದಲಾಯಿಸುವ ಹಾಗೇ ಗಂಡಂದಿರನ್ನೇ ಬದಲಾಯಿಸಿದ್ದಾಳೆ. ಹೀಗೆ ಗಂಡಂದಿರರನ್ನು ಬದಲಾಯಿಸಿದ ಮಹಿಳೆಯ ಹೆಸರು 30 ವರ್ಷದ ಸಂಧ್ಯಾ ಎಂದು ತಿಳಿದುಬಂದಿದೆ.

ಇದನ್ನು ಓದಿ : Belagavi : ಖಾಲಿ ಇರುವ ಅಂಗನವಾಡಿ ಕೇಂದ್ರಗಳಲ್ಲಿ ನೇರ ನೇಮಕಾತಿ.!

ಈ 30 ವರ್ಷದ ಮಹಿಳೆ ಅವಿವಾಹಿತರನ್ನೇ ಟಾರ್ಗೆಟ್‌ ಮಾಡಿ ಮದುವೆಯಾಗೋದು. ಆಮೇಲೆ ಅವರ ಹತ್ತಿರ ಇದದ್ದನ್ನು ದೋಚಿ ಪರಾರಿಯಾಗುತ್ತಿದ್ದಳು. ತನ್ನಲ್ಲಿದ್ದ ಹಣ ಖರ್ಚಾಗುತ್ತಿದಂತೆಯೇ ಮತ್ತೋಬ್ಬ ಅವಿವಾಹಿತ ಯುವಕನನ್ನು ಮದುವೆಯಾಗುತ್ತಿದಳಂತೆ. ಆತನನ್ನು ದೋಚಿ ಪರಾರಿಯಾಗುತ್ತಿದ್ದಳು ಈ ಕಿಲಾಡಿ ಲೇಡಿ. ಹೀಗೆಯೆ ಮದುವೆಯಾಗುವುದನ್ನೇ ತನ್ನ ಕಸಬು ಮಾಡಿಕೊಂಡಿದ್ದ ಈಕೆ ಇದೀಗ ತಮಿಳುನಾಡು ಪೊಲೀಸರ ಅತಿಥಿಯಾಗಿದ್ದಾಳೆ.

ಲಭ್ಯ ಮಾಹಿತಿ ಪ್ರಕಾರ, 35 ವರ್ಷದ ತಿರುವುರ್ ಎನ್ನುವ ವ್ಯಕ್ತಿಯೊಬ್ಬರು, ‘ದಿ ತಮಿಳ್ ವೇ’ ಎನ್ನುವ ವೆಬ್‌ಸೈಟ್‌ನಲ್ಲಿ ಸಂಧ್ಯಾ ಎನ್ನುವ ಮಹಿಳೆಯ ಪ್ರೊಫೈಲ್ ನೋಡಿ ಮನೆಯವರನ್ನು ಒಪ್ಪಿಸಿ ಮದುವೆಯಾದರು.

ಇದನ್ನು ಓದಿ : PM ಆವಾಸ್ ಯೋಜನೆಯ ಹಣ ಬರ್ತಿದ್ದಂತೆ ಪ್ರಿಯಕರರೊಂದಿಗೆ ಓಡಿಹೋದ 11 ಮಹಿಳೆಯರು.?

ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದ್ದಾಗ, ಸಂಧ್ಯಾ ಅವರ ವರ್ತನೆಯಲ್ಲಾದ ಬದಲಾವಣೆಯನ್ನು ಗಮನಿಸಿ ತಿರುವುರ್ ಕುಟುಂಬಸ್ಥರು ಆಕೆಯ ಆಧಾರ್ ಕಾರ್ಡ್ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಆಕೆಯ ಗಂಡನ ಹೆಸರು ಬೇರೆಯದ್ದೇ ಆಗಿತ್ತು.

ಪರಿಣಾಮವಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ, ಆ ಕಿಲಾಡಿ ಲೇಡಿ ಸುಮಾರು 50ಕ್ಕೂ ಹೆಚ್ಚು ಜನರನ್ನು ಮದುವೆಯಾಗಿ ವಂಚಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಇದನ್ನು ಓದಿ : ನಿಮ್ಮ ಕೈ ಬೆರಳುಗಳೇ ಹೇಳುತ್ತವೆ ನಿಮ್ಮ ವ್ಯಕ್ತಿತ್ವದ ಬಗ್ಗೆ ; ಈ ಸುದ್ದಿ ಓದಿ.!

ಈ ಕಿಲಾಡಿ ಲೇಡಿ, ಓರ್ವ ಇನ್‌ಸ್ಪೆಕ್ಟರ್, ಓರ್ವ DSP ಹಾಗೂ ಮಧುರೈನ ಓರ್ವ ಪೊಲೀಸ್ ಅಧಿಕಾರಿಯೂ ಸೇರಿದಂತೆ 50 ಮಂದಿಯನ್ನು ಈಕೆ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಮದುವೆಯಾಗೋದು ಪರ್ಸ್ಟ್ ನೈಟ್ ಮುಗಿಸೋದು ಮರುದಿನ ಪತಿಯ ಜತೆ ಜಗಳ ಮಾಡಿಕೊಂಡು ಹಣ ಹಾಗೂ ಆಭರಣ ಪಡೆದುಕೊಂಡು ಪರಾರಿಯಾಗುವುದೇ ಈಕೆಯ ಖಯಾಲಿಯಾಗಿತ್ತೆಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಇದೀಗ ಸಂಧ್ಯಾ ಪೊಲೀಸರ ವಶದಲ್ಲಿದ್ದು, ಆಕೆಯ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

spot_img
spot_img
- Advertisment -spot_img