ಶುಕ್ರವಾರ, ನವೆಂಬರ್ 28, 2025

Janaspandhan News

HomeHealth & FitnessWinter ನಲ್ಲಿ ಈ ಸಣ್ಣ ತಪ್ಪೇ ಬಾತ್‌ ರೂಮಿನಲ್ಲಿ ಹಠಾತ್‌ ಸಾವಿಗೆ ಕಾರಣ.!
spot_img
spot_img
spot_img

Winter ನಲ್ಲಿ ಈ ಸಣ್ಣ ತಪ್ಪೇ ಬಾತ್‌ ರೂಮಿನಲ್ಲಿ ಹಠಾತ್‌ ಸಾವಿಗೆ ಕಾರಣ.!

- Advertisement -

ಜನಸ್ಪಂನ ನ್ಯೂಸ್‌, ಆರೋಗ್ಯ : ಕೊರೊನಾ ನಂತರ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. ಕುಳಿತಲ್ಲಿ, ನಿಂತಲ್ಲಿ, ಕೆಲಸ ಮಾಡುವಾಗ ಅಷ್ಟೇ ಏಕೆ ಕೆಲವರು ಬಾತ್ ರೂಮ್ ಅಥವಾ ರಸ್ತೆಯಲ್ಲಿ ಹಠಾತ್ ಬಿದ್ದು ಸಾವನ್ನಪ್ಪುತ್ತಿದ್ದಾರೆ.

ವಿಶೇಷವಾಗಿ ಚಳಿಗಾಲ (winter) ದಲ್ಲಿ ಈ ಘಟನೆಗಳು ಹೆಚ್ಚು ಸಂಭವಿಸುತ್ತವೆ. ಚಳಿಗಾಲದಲ್ಲಿ ಬಾತ್ ರೂಮ್ ಅಪಾಯಕಾರಿ ಸ್ಥಳವೆಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಇದನ್ನು ಓದಿ : ಚಳಿಗಾಲದಲ್ಲಿ ಒಡೆಯುವ Heels ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ.!
ಚಳಿಗಾಲ (winter) ದಲ್ಲಿ ಬಾತ್ ರೂಮ್‌ನಲ್ಲಿ ಹೃದಯಾಘಾತಕ್ಕೆ ಕಾರಣಗಳು :
  1. ಮಲಬದ್ಧತೆ : ಮಲಬದ್ಧತೆ ಇರುವವರು ಮಲವಿಸರ್ಜನೆ ವೇಳೆ ಬಲ ಪ್ರಯತ್ನ ಮಾಡುತ್ತಾರೆ. ಉಸಿರನ್ನು ಹಿಡಿದು ಬಲ ಪ್ರಯತ್ನ ಮಾಡುವ “ವಲ್ಸಲ್ವಾ ಕುಶಲ್” ಪ್ರಕ್ರಿಯೆ ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ.

  2. ಹೃದಯದ ರಕ್ತ ಹರಿವು ಕಡಿಮೆ ಆಗಿ ಮೆದುಳಿಗೆ ಆಮ್ಲಜನಕ ತಗ್ಗುತ್ತದೆ. ಹೃದ್ರೋಗ, ಉನ್ನತ ರಕ್ತದೊತ್ತಡ ಅಥವಾ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವವರಿಗೆ ಅಪಾಯ ಹೆಚ್ಚಾಗುತ್ತದೆ.

  3. ಬಾತ್ ರೂಮ್ ತಾಪಮಾನ ಮತ್ತು ತೂಕದ ಬದಲಾವಣೆ : ಚಳಿಗಾಲ (winter) ದಲ್ಲಿ ದೇಹದ ರಕ್ತನಾಳಗಳು ಸಂಕುಚಿತವಾಗಿರುತ್ತವೆ. ತಣ್ಣಗಿನ ಬಾತ್ ರೂಮ್ ಪ್ರವೇಶಿಸಿ, ಬಿಸಿಯಾದ ನೀರನ್ನು ತಲುಪಿಸುವುದು ಹಠಾತ್ ಉಷ್ಣತೆಯ ಬದಲಾವಣೆಗೆ ಕಾರಣವಾಗುತ್ತದೆ. ಇದು ಹೃದಯದ ಬಡಿತಕ್ಕೆ ಕಾರಣವಾಗಿ ಹೃದಯಾಘಾತಕ್ಕೆ ದಾರಿ ಮಾಡಿಸುತ್ತದೆ.

  4. ಸ್ಲಿಪ್ ಅಥವಾ ಉಸಿರುಗಟ್ಟಿ ಕುಸಿತ : ಚಳಿಗಾಲ (winter) ದಲ್ಲಿ ಬಾತ್ ರೂಮ್‌ನಲ್ಲಿ ಸರಿಯಾಗಿ ಹಿಡಿತವಿಲ್ಲದೆ ನಡೆಯುವವರು ಅಥವಾ ಹಠಾತ್ ಕುಸಿದವರು, ಹೃದಯದ ಮೇಲಿನ ಒತ್ತಡ ಹೆಚ್ಚಾಗಿ ಸಾವಿಗೆ ಕಾರಣರಾಗಬಹುದು.

ಚಳಿಗಾಲ (winter) ದಲ್ಲಿ ಸುರಕ್ಷಿತ ಸ್ನಾನಕ್ಕೆ ಸಲಹೆಗಳು :
  • ಹೃದಯ ಸಂಬಂಧಿ ಸಮಸ್ಯೆ ಇರುವವರು ಸ್ನಾನಕ್ಕೆ ಹೋಗುವ ಮೊದಲು ಮನೆ ಸದಸ್ಯರಿಗೆ ತಿಳಿಸಿ. ಬಾತ್ ರೂಮ್ ಲಾಕ್ ಹಾಕಬೇಡಿ.
  • ಸ್ನಾನಕ್ಕೆ ಹೋಗುವ ಮೊದಲು ಸ್ವಲ್ಪ ನಡೆಯಿರಿ. ಇದು ರಕ್ತ ಪರಿಚಲನೆಯನ್ನು ಸಾಮಾನ್ಯಗೊಳಿಸುತ್ತದೆ.
  • ಬೆಳಗ್ಗೆ ತಣ್ಣನೆಯ ಬಾತ್ ರೂಮ್ ಪ್ರವೇಶಿಸಬೇಡಿ. ಬಾತ್ ರೂಮ್ ಬೆಚ್ಚಗಿನಂತೆ ನೋಡಿಕೊಳ್ಳಿ.
  • ಬಿಸಿಯಾದ ನೀರನ್ನು ನೇರವಾಗಿ ತಲೆಗೆ ಹಾಕಬೇಡಿ; ಮೊದಲು ಕೈ ಮತ್ತು ಕಾಲುಗಳಿಗೆ ಹಾಯಿಸಿ ನಂತರ ತಲೆಗೆ ಹಾಕಿ.
  • ಖಾಲಿ ಹೊಟ್ಟೆಯಲ್ಲಿ ಸ್ನಾನ ಮಾಡಬೇಡಿ; ಬಿಪಿ ಇಳಿಯುವ ಅಪಾಯ ಕಡಿಮೆ ಮಾಡುತ್ತದೆ.
ಇದನ್ನು ಓದಿ : “Ants ಕಾಟದಿಂದ ಬೇಸತ್ತಿದ್ದೀರಾ? ಇಲ್ಲಿದೆ ಸರಳ ಮನೆಮದ್ದುಗಳ ಪರಿಹಾರ”.!
ಮಲಬದ್ಧತೆ ನಿವಾರಣೆಗೆ ಟಿಪ್ಸ್ :
  • ನಾರಿನಂಶದ ಆಹಾರ ಸೇವಿಸಿ, ಹಣ್ಣು ಮತ್ತು ತರಕಾರಿ (ಮಾವು, ಸೌತೆಕಾಯಿ) ಸೇವನೆ ಮಾಡಿರಿ.
  • ಸಾಕಷ್ಟು ನೀರು ಕುಡಿಯಿರಿ.
  • ನಿಯಮಿತ ದೈಹಿಕ ವ್ಯಾಯಾಮ ಮಾಡಿ.

ಚಳಿಗಾಲ (winter) ದಲ್ಲಿ ಬಾತ್ ರೂಮ್ ಅಪಾಯಗಳನ್ನು ತಡೆದುಕೊಳ್ಳಲು ಈ ಮೇಲಿನ ಎಚ್ಚರಿಕೆಗಳನ್ನು ಪಾಲಿಸುವುದು ಅತ್ಯಂತ ಮಹತ್ವಪೂರ್ಣ. ಈ ಸರಳ ಕ್ರಮಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತವೆ ಮತ್ತು ಸುರಕ್ಷಿತ ಸ್ನಾನಕ್ಕೆ ಸಹಾಯ ಮಾಡುತ್ತವೆ.


KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!

kvs-nvs-total-14937-vacancies-apply-online

ಜನಸ್ಪಂದನ ನ್ಯೂಸ್‌, ನೌಕರಿ : ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) ಮತ್ತು ನವೋದಯ ವಿದ್ಯಾಲಯ ಸಂಘಟನೆ (NVS) 2025ನೇ ಸಾಲಿನಲ್ಲಿ ಒಟ್ಟು 14,937 ಹುದ್ದೆಗಳ ನೇಮಕಾತಿಗಾಗಿ ಭಾರೀ ಅಧಿಸೂಚನೆಯನ್ನು ಪ್ರಕಟಿಸಿದೆ. ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಅಧಿಸೂಚನೆಯಲ್ಲಿ ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ವಿಧಾನ, ಶುಲ್ಕ ವಿವರಗಳು, ಹಾಗೂ ಪ್ರಮುಖ ದಿನಾಂಕಗಳು ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.

ಇದನ್ನು ಓದಿ : MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.
ನೇಮಕಾತಿ ನಡೆಸುತ್ತಿರುವ ಇಲಾಖೆ :
  • ಕೇಂದ್ರೀಯ ವಿದ್ಯಾಲಯ ಸಂಘಟನೆ (KVS)
  • ನವೋದಯ ವಿದ್ಯಾಲಯ ಸಂಘಟನೆ (NVS)
ಒಟ್ಟು ಹುದ್ದೆಗಳ ಸಂಖ್ಯೆ : 14,937
KVS – ಹುದ್ದೆಗಳ ಪಟ್ಟಿ :
ಹುದ್ದೆಹುದ್ದೆಗಳ ಸಂಖ್ಯೆ
ಮುಖ್ಯೋಪಾಧ್ಯಾಯರು134
ಸಹಾಯಕ ಆಯುಕ್ತರು08
ಉಪ ಪ್ರಾಂಶುಪಾಲರು58
PGT1465
TGT2794
ಮುಖ್ಯ ಗ್ರಂಥಪಾಲಕ147
ಪ್ರಾಥಮಿಕ ಶಿಕ್ಷಕರು (PRT)3365
ಆಡಳಿತಾಧಿಕಾರಿ12
ಫೈನಾನ್ಸ್ ಆಫೀಸರ್05
ಅಸಿಸ್ಟೆಂಟ್ ಇಂಜಿನಿಯರ್02
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್74
ಜೂನಿಯರ್ ಟ್ರಾನ್ಸ್‌ಲೇಟರ್08
ಸೀನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್280
ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್714
ಸ್ಟೇನೋಗ್ರಾಫರ್ ಗ್ರೇಡ್ I03
ಸ್ಟೇನೋಗ್ರಾಫರ್ ಗ್ರೇಡ್ II57

NVS – ಹುದ್ದೆಗಳ ಪಟ್ಟಿ :
ಹುದ್ದೆಹುದ್ದೆಗಳ ಸಂಖ್ಯೆ
ಸಹಾಯಕ ಆಯುಕ್ತರು09
ಮುಖ್ಯೋಪಾಧ್ಯಾಯರು93
PGT1531
TGT3391
ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್ (HQ/RO)46
ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್ (JNV)552
ಲ್ಯಾಬ್ ಅಟೆಂಡೆಂಟ್165
MTS24
ವಯೋಮಿತಿ :

ಅಧಿಸೂಚನೆಯ ಪ್ರಕಾರ ಗರಿಷ್ಠ ವಯೋಮಿತಿ 50 ವರ್ಷ (ಹುದ್ದೆಗಳಿಗೆ ಅನುಗುಣವಾಗಿ ಬದಲಾಗುತ್ತದೆ).
ವಿವರಗಳಿಗೆ ಅಧಿಕೃತ PDF ಪರಿಶೀಲಿಸಿ.

ಶೈಕ್ಷಣಿಕ ಅರ್ಹತೆ :

ಹುದ್ದೆಯ ಪ್ರಕಾರ ವಿದ್ಯಾರ್ಥಿಗಳು ಕೆಳಗಿನ ಶಿಕ್ಷಣ ಹೊಂದಿರಬೇಕು:

  • 10ನೇ ತರಗತಿ.
  • 12ನೇ ತರಗತಿ.
  • ಪದವಿ ಪೂರ್ಣ.
  • ಸ್ನಾತಕೋತ್ತರ ಪದವಿ.

ಯಾವ ಹುದ್ದೆಗೆ ಯಾವ ಅರ್ಹತೆ ಅನ್ನೋದು ಅಧಿಸೂಚನೆಯಲ್ಲಿ ವಿವರವಾಗಿದೆ.

KKRTC : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅರ್ಜಿ ಶುಲ್ಕ :

ಅಧಿಕೃತ ನೋಟಿಫಿಕೇಶನ್‌ನಲ್ಲಿ ನಿಖರ ಶುಲ್ಕ ವಿವರಗಳು ಲಭ್ಯ.

ಆಯ್ಕೆ ಪ್ರಕ್ರಿಯೆ :

KVS – NVS ನೇಮಕಾತಿ 2025 ಅನ್ನು ಈ ಹಂತಗಳಲ್ಲಿ ಮಾಡಲಾಗುತ್ತದೆ:

  1. ಹಂತ-1 ಬರವಣಿಗೆ ಪರೀಕ್ಷೆ.
  2. ಹಂತ-2 ಪರೀಕ್ಷೆ.
  3. ಸಂದರ್ಶನ.
KVS & NVS ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಸಂಪೂರ್ಣ ಓದಿ
  3. ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ತೆರೆಯಿರಿ
  4. ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿ
  5. ಅಗತ್ಯವಿದ್ದರೆ ಶುಲ್ಕ ಪಾವತಿಸಿ
  6. ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ
  7. ಫಾರ್ಮ್ ಪರಿಶೀಲಿಸಿ Submit ಮಾಡಿ
  8. ಅಂತಿಮವಾಗಿ ಪ್ರಿಂಟ್‌ಔಟ್ ಉಳಿಸಿಕೊಳ್ಳಿ
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆಯ ಆರಂಭಿಕ ದಿನ : 14, ನವೆಂಬರ್ 2025.
  • ಅರ್ಜಿ ಸಲ್ಲಿಕೆಯ ಕೊನೆಯ ದಿನ : 04, ಡಿಸೇಂಬರ್ 2025.
KVS & NVS ಮುಖ್ಯ ಲಿಂಕ್‌ಗಳು :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments