ಜನಸ್ಪಂದನ ನ್ಯೂಸ್, ಡೆಸ್ಕ್ : ಕರ್ವಾ ಚೌತ್ ಹಬ್ಬದ ಮುನ್ನಾದಿನದಂದು ಇಂದೋರ್‌ನಲ್ಲಿ ಸಿನಿಮೀಯ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗಿದೆ. ಪತಿಯು ತನ್ನ ಗೆಳತಿಯೊಂದಿಗೆ ಶಾಪಿಂಗ್ ಮಾಡುತ್ತಿರುವಾಗ ಪತ್ನಿ (Wife) ಗೆ ಆತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿಟ್ಟ ಘಟನೆ ಸ್ಥಳೀಯವಾಗಿ ಚರ್ಚೆಯ ವಿಷಯವಾಗಿದೆ.
ಮಾಹಿತಿಯ ಪ್ರಕಾರ, ನಂದಾ ನಗರ ಪ್ರದೇಶದ ನಿವಾಸಿಯಾದ ಮಹಿಳೆಯು ಹಬ್ಬದ ಸಿದ್ಧತೆಗಾಗಿ ಮಾರ್ಕೆಟ್‌ಗೆ ತೆರಳಿದ್ದಾಗ, ಅಕಸ್ಮಾತ್ತಾಗಿ ತನ್ನ ಪತಿಯನ್ನು ಬೇರೊಬ್ಬ ಮಹಿಳೆಯೊಂದಿಗೆ ಶಾಪಿಂಗ್ ಮಾಡುತ್ತಿರುವುದು ಕಣ್ಣಿಗೆ ಬಿದ್ದಿದೆ. ಅಚ್ಚರಿಗೊಳಗಾದ ಪತ್ನಿ (Wife) ಯು ತಕ್ಷಣ ಸ್ಥಳದಲ್ಲೇ ಇಬ್ಬರನ್ನೂ ಹಿಡಿದು ವಾಗ್ವಾದ ಆರಂಭಿಸಿದ್ದಾಳೆ.
ಬೆಳಿಗ್ಗೆ ಮೂತ್ರದಲ್ಲಿ ಈ ಲಕ್ಷಣಗಳಿದ್ದರೆ ಎಚ್ಚರ! Cholesterol ಹೆಚ್ಚಾಗಿರಬಹುದು.
ಘಟನೆಯ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾರೆ. ವೈರಲ್ ದೃಶ್ಯದಲ್ಲಿ, ಪತ್ನಿ (Wife) ಯು ಕೋಪದಿಂದ ಪತಿ ಮತ್ತು ಆತನ ಗೆಳತಿಯನ್ನು ಕೋಪದಿಂದ ಅವರ ಮೇಲೆ ಕೂಗುತ್ತಿರುವುದು ಕಾಣಿಸುತ್ತದೆ.
ಪತಿ ಬಿಡಿಸಿಕೊಳ್ಳಲು ಯತ್ನಿಸಿದರೂ, ಪತ್ನಿ (Wife) ಯು ತಾನು “ನಿನ್ನ ಮಕ್ಕಳ ತಾಯಿ” ಎಂದು ಕೋಪದಿಂದ ಕೂಗುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.
Raju : ಉತ್ತರ ಕರ್ನಾಟಕದ ಹಿರಿಯ ರಂಗ ಕಲಾವಿದ, ಹಾಸ್ಯನಟ ರಾಜು ತಾಳಿಕೋಟೆ ನಿಧನ.!
ಸ್ಥಳದಲ್ಲಿ ಜನಸಮೂಹ ಜಮಾಯಿಸಿದ್ದು, ಕೆಲವರು ಇಬ್ಬರನ್ನೂ ಶಾಂತಗೊಳಿಸಲು ಮುಂದಾಗಿದ್ದಾರೆ. ವಯಸ್ಸಾದ ವ್ಯಕ್ತಿಯೊಬ್ಬರು ಮಧ್ಯಪ್ರವೇಶಿಸಿದ ಬಳಿಕ ಪರಿಸ್ಥಿತಿ ಸ್ವಲ್ಪ ಶಮನಗೊಂಡಿದೆ. ಸುಮಾರು ಅರ್ಧ ಗಂಟೆಗಳ ಕಾಲ ವಾಗ್ವಾದ ಮುಂದುವರಿದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಪತಿಯು ಇಂದೋರ್ ನಗರಾಡಳಿತ ಇಲಾಖೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಕರ್ವಾ ಚೌತ್ ಶಾಪಿಂಗ್‌ಗೆ ತನ್ನ ಗೆಳತಿಯನ್ನು ಕರೆದುಕೊಂಡು ಹೋಗಿದ್ದಾಗ ಪತ್ನಿ (Wife) ಯು ಅವರನ್ನು ಆಕಸ್ಮಿಕವಾಗಿ ನೋಡಿದ್ದಾಳೆ.
Train ಹಳಿ ಮೇಲೆ ಬೈಕ್ ಸ್ಕಿಡ್ ಆಗಿ ಬಿದ್ದ ಯುವಕ : ಕ್ಷಣಾರ್ಧದಲ್ಲೇ ಬಂದ ರೈಲು ; ಮುಂದೆನಾಯ್ತು.? ವಿಡಿಯೋ ನೋಡಿ.!
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಈಗಾಗಲೇ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಖಲಿಸಿದ್ದು, ನೆಟ್ಟಿಗರು ಪತ್ನಿ (Wife) ಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. “ಪತಿ ಮೋಸ ಮಾಡಿದಾಗ ಅದು ತುಂಬಾ ನೋವುಂಟುಮಾಡುತ್ತದೆ” ಎಂದು ಒಬ್ಬ ಬಳಕೆದಾರರು ಬರೆದರೆ, “ನಾನು ಅವರ ಸ್ಥಾನದಲ್ಲಿದ್ದರೆ ನಾನೂ ಹೀಗೆಯೇ ಪ್ರತಿಕ್ರಿಯಿಸುತ್ತಿದ್ದೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆ ದಾಂಪತ್ಯ ನಂಬಿಕೆ, ನಿಷ್ಠೆ ಹಾಗೂ ಸಂಬಂಧಗಳ ಮೌಲ್ಯದ ಕುರಿತ ಚರ್ಚೆಗೆ ಕಾರಣವಾಗಿದೆ. ಹಲವರು ಪತಿಯ ವರ್ತನೆಯನ್ನು ಖಂಡಿಸುತ್ತಿದ್ದಾರೆ.
ವಿಡಿಯೋ :
इंदौर के नंदा नगर में करवा चौथ से पहले सड़क पर हुआ दिलचस्प और हाईवोल्टेज ड्रामा! अर्बन एडमिनिस्ट्रेशन विभाग के कर्मचारी संदीप शमी को उनकी पत्नी ने प्रेमिका के साथ शॉपिंग करते रंगे हाथों पकड़ लिया। इसके बाद सड़क पर करीब आधे घंटे तक हंगामा और गाली-गलौज जारी रही, जिसे राहगीरों ने… pic.twitter.com/UWULABfEjx
— AajTak (@aajtak) October 12, 2025
Train ಹಳಿ ಮೇಲೆ ಬೈಕ್ ಸ್ಕಿಡ್ ಆಗಿ ಬಿದ್ದ ಯುವಕ : ಕ್ಷಣಾರ್ಧದಲ್ಲೇ ಬಂದ ರೈಲು ; ಮುಂದೆನಾಯ್ತು.? ವಿಡಿಯೋ ನೋಡಿ.!

ಜನಸ್ಪಂದನ ನ್ಯೂಸ್, ಗ್ರೇಟರ್ ನೋಯ್ಡಾ : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಜಿಲ್ಲೆಯ ದಾದ್ರಿ ರೈಲ್ವೆ (Train) ಕ್ರಾಸಿಂಗ್‌ನಲ್ಲಿ ನಡೆದ ದುರ್ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೇಗವಾಗಿ ಬರುತ್ತಿದ್ದ ರೈಲಿಗೆ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಮೃತ ಯುವಕ ರೈಲ್ವೆ (Train) ಹಳಿ ದಾಟುವ ಪ್ರಯತ್ನದಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಯುವಕನ ಬೈಕ್ ರೈಲ್ವೆ ಹಳಿ ಸಮೀಪ ಬರುತ್ತಿದಂತೆಯೇ ಬ್ರೆಕ್ ಹಾಕಿದ್ದಾನೆ. ಆದರೆ ಬೈಕ್ ಸ್ಕಿಡ್ ಆಗಿ ಕೆಳಗೆ ಬೀಳುತ್ತಾನೆ.
IPPB ನಲ್ಲಿ 348 ಹುದ್ದೆಗಳ ನೇಮಕಾತಿ ; ಇಲ್ಲಿದೆ ಸಂಪೂರ್ಣ ವಿವರ.!
ಇದೇ ವೇಳೆ ರೈಲು (Train) ಬರುವ ಶಬ್ದ ಕೇಳಿ ಹಳಿ ಮೇಲೆ ಬಿದ್ದಿದ್ದ ಬೈಕ್ ಎತ್ತಲು ಯುವಕ ಪ್ರಯತ್ನಿಸಿದ್ದಾನೆ. ರೈಲು ಸಮೀಪಿಸುತ್ತಿರುವುದನ್ನು ಕಂಡು ಆತಂಕಗೊಂಡು ಓಡಲಾರಂಭಿಸುತ್ತಾನೆ. ಆದರೆ ಕ್ಷಣಾರ್ಧದಲ್ಲಿ ವೇಗವಾಗಿ ಬಂದ ರೈಲು ನೇರವಾಗಿ ಆತನಿಗೆ ಡಿಕ್ಕಿ ಹೊಡೆದಿದೆ.
ಘಟನೆಯ ಸಂಪೂರ್ಣ ದೃಶ್ಯವು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದ್ದು, ರೈಲು ಅವನನ್ನು ಢಿಕ್ಕಿ ಹೊಡೆದ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಸದ್ಯ ಅದರ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್ ಮಸಾಲೆ Water ಕುಡಿಯಿರಿ; ಬೊಜ್ಜು, ಮಧುಮೇಹ ಸೇರಿ 5 ಕಾಯಿಲೆಗಳಿಗೆ ಪರಿಹಾರ.!
ಸ್ಥಳೀಯರ ಪ್ರಕಾರ, ಅಲ್ಲಿ ಸರಿಯಾಗಿ ರೈಲ್ವೆ (Train) ಗೇಟ್ ಇರಬೇಕಾಗಿತ್ತು. ಆದರೆ ಆ ಕ್ರಾಸಿಂಗ್‌ನಲ್ಲಿ ಯಾವುದೇ ಬ್ಯಾರಿಕೇಡ್ ಅಥವಾ ಎಚ್ಚರಿಕೆ ಬೋರ್ಡ್ ಕಾಣಿಸದಿರುವುದು ಈ ದುರಂತಕ್ಕೆ ಒಂದು ಪ್ರಮುಖ ಕಾರಣವಾಗಿದೆ. “ಯುವಕ ಬೈಕನ್ನು ಬಿಟ್ಟು ಪಕ್ಕಕ್ಕೆ ಸರಿದಿದ್ದರೆ ಬದುಕುಳಿದಿರುತ್ತಿದ್ದ,” ಎಂದು ಸ್ಥಳೀಯರು ಹೇಳಿದ್ದಾರೆ.
ಅಪಘಾತದ ಬಳಿಕ ರೈಲ್ವೆ (Train) ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮೃತ ಯುವಕನ ಗುರುತು ಬಹಿರಂಗವಾಗಿದ್ದು, ಆತ ಮುಂದಿನ ತಿಂಗಳಲ್ಲಿ ಮದುವೆಯಾಗಬೇಕಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ದುರಂತದ ಸುದ್ದಿ ಕೇಳಿ ಕುಟುಂಬಸ್ಥರು ಶೋಕಸಮುದ್ರದಲ್ಲಿ ಮುಳುಗಿದ್ದಾರೆ.
Raju : ಉತ್ತರ ಕರ್ನಾಟಕದ ಹಿರಿಯ ರಂಗ ಕಲಾವಿದ, ಹಾಸ್ಯನಟ ರಾಜು ತಾಳಿಕೋಟೆ ನಿಧನ.!
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಅನೇಕ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಹಲವರು ಸುರಕ್ಷತೆಯ ಕೊರತೆಯ ಕುರಿತು ರೈಲ್ವೆ (Train) ಇಲಾಖೆಯ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ. ರೈಲ್ವೆ ಹಳಿ ದಾಟುವ ಸ್ಥಳಗಳಲ್ಲಿ ಸರಿಯಾದ ಭದ್ರತಾ ಕ್ರಮಗಳು ಇರದಿರುವುದು ಇಂತಹ ಅಪಘಾತಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಮತ್ತೊಮ್ಮೆ ಸಾರ್ವಜನಿಕರಿಗೆ ಎಚ್ಚರಿಕೆಯ ಘಂಟೆ ಮೊಳಗಿಸಿದೆ. ರೈಲ್ವೆ (Train) ಹಳಿ ದಾಟುವಾಗ ಯಾವಾಗಲೂ ಜಾಗ್ರತೆ ವಹಿಸಬೇಕು ಎಂಬ ಸಂದೇಶವನ್ನು ಇದು ಸ್ಪಷ್ಟವಾಗಿ ನೀಡಿದೆ.
ವಿಡಿಯೋ :
#ग्रेटर_नोएडा
बोडाकी रेलवे लाइन पार करते वक़्त बाइक अनियंत्रित होकर गिरी. युवक ने बाइक उठाने का प्रयास किया.. पीछे से आ रही तेज रफ्तार ट्रेन की चपेट में आने से युवक की मौत हो गई. 22 नवंबर को होनी थी युवक की शादी.. pic.twitter.com/0gi6Fddn1T— Pravendra Singh Sikarwar (@Pravendra_Sikar) October 13, 2025
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.






