ಜನಸ್ಪಂದನ ನ್ಯೂಸ್, ಡೆಸ್ಕ್ : ರೆಸ್ಟೋರೆಂಟ್‌ನಲ್ಲಿ ಪತಿಯೋರ್ವ ತನ್ನ ಗೆಳತಿ (Girlfriend) ಯೊಂದಿಗೆ ಇದ್ದಾಗ, ಇದಕ್ಕಿದಂತೆ ಪತ್ನಿ ಆ ಸೈಳಕ್ಕೆ ಆಗಮಿಸಿದ್ದಾಳೆ. ಪತ್ನಿಯನ್ನು ನೋಡಿದ್ದೇ ತಡ ಎದ್ನೋ ಬಿದ್ನೋ ಎನ್ನುವಂತೆ ಅಲ್ಲಿಂದ ಪತಿ ಪರಾರಿಯಾಗಿದ್ದಾನೆ. ಆದರೆ ಆತನ ಗೆಳತಿಯ ಗ್ರಹಚಾರ ಮಾತ್ರ ಕೆಟ್ಟಿತ್ತು ಅಂತ ಕಾಣುತ್ತೆ.
ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ಪಿಲ್ಖುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಟಕೀಯ ಘಟನೆ ಒಂದು ನಡೆದಿದೆ. ವಿವಾಹಿತ ವ್ಯಕ್ತಿಯೊಬ್ಬನು ತನ್ನ ಗೆಳತಿ (Girlfriend) ಯೊಂದಿಗೆ ರೆಸ್ಟೋರೆಂಟ್‌ನಲ್ಲಿ ಕಾಲ ಕಳೆಯುತ್ತಿದ್ದಾಗ, ಆತನ ಪತ್ನಿ ಅಚಾನಕ ಆಗಮಿಸಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇದನ್ನು ಓದಿ : Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!
ಸದ್ಯ ಆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಘಟನೆಯಲ್ಲಿ ಪತ್ನಿ, ಪತಿಯ ಗೆಳತಿಯನ್ನು ನಡುಬೀದಿಯಲ್ಲಿ ಹಿಗ್ಗಾಮುಗ್ಗ ಥಳಿಸಿರುವ ದೃಶ್ಯ ಈಗ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿನ ದೃಶ್ಯದಲ್ಲಿ, ವ್ಯಕ್ತಿಯೊಬ್ಬನು ತನ್ನ ಗೆಳತಿ (Girlfriend) ಯೊಂದಿಗೆ ಹಾಪುರದ ರೆಸ್ಟೋರೆಂಟ್‌ನಲ್ಲಿ ನಿಂತಿದ್ದಾನೆ. ಈ ಕುರಿತು ಮಾಹಿತಿ ತಿಳಿದ ಪತ್ನಿ ಹಾಗೂ ತಮ್ಮ ಕುಟುಂಬಸ್ಥರೊಂದಿಗೆ ಅಲ್ಲಿಗೆ ಧಾವಿಸುತ್ತಾಳೆ. ಪತ್ನಿಯನ್ನು ನೋಡಿದ್ದೇ ತಡ ಗಾಬರಿಗೊಂಡ ಪತಿ ತಕ್ಷಣವೇ ಆ ಸ್ಥಳದಿಂದ ಓಡಿಹೋಗುತ್ತಾನೆ.
ಆದರೆ ಕೋಪದಿಂದ ಕೆರಳಿದ್ದ ಪತ್ನಿ, ಪತಿಯ ಗೆಳತಿ (Girlfriend) ಯನ್ನು ಹಿಡಿದು ರೆಸ್ಟೋರೆಂಟ್‌ನಿಂದ ಎಳೆದು ನಡುಬೀದಿಗೆ ತಂದು ಥಳಿಸುತ್ತಾಳೆ.
ಇದನ್ನು ಓದಿ : IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!
ಅಕ್ರಮ ಸಂಬಂಧ :
ಘಟನೆಯಲ್ಲಿ ಪತ್ನಿ (Girlfriend) ಯು, ಕಳೆದ ಎರಡು ತಿಂಗಳಿಂದ ತನ್ನ ಪತಿಯ ಅಕ್ರಮ ಸಂಬಂಧದ ಬಗ್ಗೆ ತನಗೆ ಶಂಕೆ ಇದ್ದಿತ್ತೆಂದು ತಿಳಿಸಿದ್ದಾರೆ. ಈ ವೇಳೆ ಪತಿಯ ಗೆಳತಿಯನ್ನೂ ಎಚ್ಚರಿಸಿದ್ದರೂ ಸಹ ಅವಳು ಪತಿಯಿಂದ ದೂರವಿಲ್ಲದೆ ಸಂಬಂಧ ಮುಂದುವರೆಸಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಕೋಪ – ಪಾಠ ಕಲಿಸಿದ ಪತ್ನಿ :
ಅಕ್ರಮ ಸಂಬಂಧದ ಕಾರಣದಿಂದ ಮನಸ್ಸಿನಲ್ಲಿ ಕೋಪ ಮಡುಗಟ್ಟಿದ ಪತ್ನಿ, ಪತಿಯ ಸ್ನೇಹಿತೆಯ ಮೇಲೆ ತಿರಿಸಿಕೊಂಡಿರುವ ದೃಶ್ಯ ಸಾರ್ವಜನಿಕ ಸ್ಥಳದಲ್ಲಿ ನಡೆಯಿದ್ದು, ಜನರು ಕೂಡಾ ನೋಡುವುದಕ್ಕೆ ನೆರೆದಿದ್ದರು. ಕುಟುಂಬಸ್ಥರು ಮತ್ತು ಸಾರ್ವಜನಿಕರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಬಳಿಕ ಆಕೆಯನ್ನು ಬಿಡಲಾಗಿದೆ.
ಇದನ್ನು ಓದಿ : Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!
ವಿಡಿಯೋ ವೈರಲ್ :
ರೆಸ್ಟೋರೆಂಟ್‌ನ ಹೊರಗೆ ನಡೆದ ಈ ನಾಟಕೀಯ ಘಟನೆ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಯ ಕುರಿತು ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪೊಲೀಸರಿಂದ ಯಾವುದೇ ಅಧಿಕೃತ ಪ್ರಕ್ರಿಯೆ ನಡೆದಿದೆಯೇ ಎಂಬ ಮಾಹಿತಿ ಇನ್ನಷ್ಟೆ ಸ್ಪಷ್ಟವಾಗಬೇಕಿದೆ.
ವಿಡಿಯೋ :
🚨 हापुड़ : पत्नी ने पति को प्रेमिका के साथ पकड़ा 🚨
🆔 प्रेमिका संग होटल में कॉफ़ी पी रहा था पति
🕵️♂️ पत्नी ने प्रेमिका को कूटा, पति मौके से फरार
📍 होटल के बाहर पत्नी और प्रेमिका में मारपीट
📍 हाई वोल्टेज ड्रामा का वीडियो वायरल
📍 पिलखुवा कोतवाली क्षेत्र का मामला#Hapur… pic.twitter.com/LimJQAPAb4— भारत समाचार | Bharat Samachar (@bstvlive) August 1, 2025
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
ಮನೆಗೆ ಅಚಾನಕ್ ಬಂದ ಪತಿ : Lover ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪತ್ನಿ ; ಮುಂದೆ.?

ಜನಸ್ಪಂದನ ನ್ಯೂಸ್, ಹಾಸನ : ಅಚಾನಕ್ ಆಗಿ ಮನೆಗೆ ಬಂದಾಗ, ಪತ್ನಿ ಆಕೆಯ ಪ್ರಿಯಕರ (Lover) ನ ಜೊತೆ ಇದ್ದಾಗಲೇ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿರುವ ಘಟನೆ ಸಕಲೇಶಪುರ ತಾಲೂಕಿನ ಲಕ್ಮೀಪುರ ಗ್ರಾಮದಲ್ಲಿ ನಡೆದಿದ್ದು, ಪ್ರಶ್ನೆ ಮಾಡಿದ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಮಹಿಳೆಯ ಪತಿ ನಂದೀಶ್ ಅವರು ಕೆಲಸಕ್ಕೆಂದು ಮನೆಯಿಂದ ಹೊರಟು, ಅರ್ಧ ಗಂಟೆಯೊಳಗೆ ಕೆಲಸವಿಲ್ಲದ ಕಾರಣ ಮರಳಿ ಮನೆಗೆ ಬಂದಿದ್ದಾರೆ. ಮನೆಗೆ ಬರುವಷ್ಟರಲ್ಲಿ ಮನೆಯಲ್ಲಿಯ ದೃಶ್ಯ ನೋಡಿ ನಂದೀಶ್ ಹೌಹಾರಿದ್ದಾನೆ.
ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪತಿಯ ಮೇಲೆ Lover ಹಲ್ಲೆ :
ಮನೆ ಒಳಗೆ ತನ್ನ ಪತ್ನಿ ಶ್ರುತಿ ಹಾಗೂ ಪಕ್ಕದ ಗ್ರಾಮದ ಯುವಕ ಪತ್ನಿಯ Lover ಸುಜಿತ್ ಇಬ್ಬರೇ ಇದ್ದಿದ್ದನ್ನು ಕಂಡು ಶಾಕ್‌ಗೊಳಗಾಗಿದ್ದಾರೆ. ಈ ಕುರಿತು ನಂದೀಶ್ ಪ್ರಶ್ನಿಸುತ್ತಲೇ ವಿಷಯ ವಿಕೋಪಕ್ಕೆ ತಿರುಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಮೇಲೆ ಪತ್ನಿಯ ಪ್ರಿಯಕರ (Lover) ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಪತ್ನಿ ಮತ್ತು ಪ್ರಿಯಕರ (Lover) ಮಧ್ಯೆ ಹಿಂದಿನಿಂದಲೂ ಅಕ್ರಮ ಸಂಬಂಧವಿರುವುದು ಖಚಿತವಾಗಿದ್ದು, ಈ ಸಂಬಂಧವು ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಎನ್ನಲಾಗಿದೆ. ಆರೋಪಿ ಸುಜಿತ್ ಹೋಂ ಗಾರ್ಡ್ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 30 ರ ದ್ವಾದಶ ರಾಶಿಗಳ ಫಲಾಫಲ.!
ಅಕ್ರಮ ಸಂಬಂಧ ಬಯಲಾಗುತ್ತದೆ ಎಂಬ ಭಯದಿಂದ, ಸ್ಥಳದಲ್ಲಿಯೇ ಉಗ್ರನಾಗಿದ Lover ಸುಜಿತ್, ನಂದೀಶ್ ಅವರ ಮೇಲೆ ಹಲ್ಲೆ ನಡೆಸಿದ ಎಂದು ಹೇಳಲಾಗುತ್ತಿದೆ. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಂದೀಶ್ ಅವರನ್ನು ತಕ್ಷಣವೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಪ್ರಕರಣ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂದೀಶ್ ಕುಟುಂಬಸ್ಥರು ಆರೋಪಿ Lover ಸುಜಿತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.






