Saturday, July 27, 2024
spot_img
spot_img
spot_img
spot_img
spot_img
spot_img

Special news : ಊಟವಾದ ತಕ್ಷಣ ನೀರು ಕುಡಿಯಬಾರದು ಏಕೆ ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಹಕ್ಕೆ ನೀರು ಅತ್ಯಗತ್ಯ, ತಿಂದ ಆಹಾರ ಜೀರ್ಣವಾಗಲು ನೀರು (water) ಕುಡಿಯುವುದು ಅತ್ಯಗತ್ಯ. ಹಾಗಾಗಿ ಊಟ ಅಥವಾ ತಿಂಡಿ ತಿಂದ ನಂತರ ನಾವು ನೀರು ಕುಡಿಯುತ್ತೇವೆ.

ಆದರೆ ಆಯುರ್ವೇದದ (Ayurveda) ಪ್ರಕಾರ ನೀರು ಕುಡಿಯುವುದಕ್ಕೂ ಸಮಯವಿದೆ. ಹೌದು, ಆ ಸಮಯದಲ್ಲಿ ಮಾತ್ರ ನೀರು ಕುಡಿಯಬೇಕು. ಅದರಲ್ಲೂ ಊಟ ತಿಂಡಿ ತಿನ್ನುವ ಮೊದಲು ಹಾಗೂ ನಂತರ ನೀರು ಕುಡಿಯಲು ನಿರ್ದಿಷ್ಟ ಸಮಯವನ್ನು (specific time) ಪಾಲಿಸಲೇಬೇಕು. ಹಾಗಾದರೆ ಇದಕ್ಕೆ ಕಾರಣವೇನು ಅಂತ ಗೊತ್ತಾ.?

ಇದನ್ನು ಓದಿ : Health : ಈರುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

ಊಟದ ನಂತರ ನೀರು ಕುಡಿಯಬಾರದು ಏಕೆ.?
ಊಟವಾದ ಬಳಿಕ ಅಥವಾ ಆಹಾರವನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕಾರಿ ರಸ (Digestive juice) ದುರ್ಬಲವಾಗುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತವೆ. ಇದು ಸತ್ಯ ಎಂದು ವಿಜ್ಞಾನವೂ ಹೇಳುತ್ತದೆ.

ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ತೆಗೆದುಕೊಳ್ಳುವ ನೈಸರ್ಗಿಕ ಸಮಯವನ್ನು ಬದಲಾಯಿಸುತ್ತದೆ. ಇದು ನಿರೀಕ್ಷೆಗಿಂತ ಮುಂಚೆಯೇ ಹಸಿವಾಗಲು ಕಾರಣವಾಗುತ್ತದೆ.

ಆಗ ನಾವು ಅತಿಯಾಗಿ (too much) ಅಥವಾ ಬಾಯಿಗೆ ಸಿಕ್ಕಿದನ್ನೆಲಾ ತಿನ್ನುತ್ತೇವೆ. ಇದರಿಂದ ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ವೈದ್ಯರು. ಹೀಗಾಗಿ ತಿಂದ ತಕ್ಷಣ ನೀರು ಕುಡಿದರೆ ಬೇಗ ತೂಕ ಹೆಚ್ಚುತ್ತದೆ ಮತ್ತು ಬೊಜ್ಜು (obesity) ಬರುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ತಿಂದ ತಕ್ಷಣ ನೀರು ಕುಡಿಯುವುದರಿಂದ ಹೆಚ್ಚಿನ ಆಹಾರ ಜೀರ್ಣವಾಗದೇ ಉಳಿಯುತ್ತದೆ. ಇದು ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. ಈ ಪ್ರಕ್ರಿಯೆಯು ಇನ್ಸುಲಿನ್ ಮಟ್ಟವನ್ನು (insulin levels) ಗಣನೀಯವಾಗಿ ಹೆಚ್ಚಿಸಲು ಕಾರಣವಾಗಬಹುದು. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಮಧುಮೇಹ ಇರುವವರು ತಿಂದ ತಕ್ಷಣ ನೀರು ಕುಡಿಯಬಾರದು. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಒಂದೇ ಬಾರಿಗೆ ಏರಿಕೆಯಾಗಬಹುದು.

ಊಟದ ನಂತರ ನೀರು ಕುಡಿಯುವುದು ಜೀರ್ಣಕಾರಿ ಕಿಣ್ವಗಳನ್ನು (Digestive enzymes) ದುರ್ಬಲಗೊಳಿಸುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ.

ಇದನ್ನು ಓದಿ : ಮೊಬೈಲ್ ಚಾರ್ಜ್ ಬೇಗನೆ ಖಾಲಿಯಾಗ್ತಿದೆಯಾ? ಈ ರೀತಿ ಸೆಟ್ಟಿಂಗ್ಸ್ ಚೇಂಜ್ ಮಾಡಿ.!

ಹಾಗಾದ್ರೆ ಯಾವಾಗ ನೀರು ಕುಡಿಯಬೇಕು.?
ಆಹಾರ ಸೇವಿಸುವ ಅರ್ಧ ಗಂಟೆ ಮೊದಲು ಮತ್ತು ಆಹಾರ ಸೇವಿಸಿದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ಉತ್ತಮ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ.

ಆದರೆ ತಣ್ಣೀರು (cold water) ಕುಡಿಯಬಾರದು. ಏಕೆಂದರೆ ಅನ್ನ ತಿಂದ ತಕ್ಷಣ ತಣ್ಣೀರು ಕುಡಿದರೆ ಜೀರ್ಣಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ವಿಷಾಂಶ ಸಂಗ್ರಹವಾಗುವ ಸಾಧ್ಯತೆಯೂ ಇದೆ. ಆಸಿಡ್ ರಿಫ್ಲೆಕ್ಸ್‌ನಂತಹ ಸಮಸ್ಯೆಗಳೂ ಬರಬಹುದು.

spot_img
spot_img
- Advertisment -spot_img