Wednesday, May 22, 2024
spot_img
spot_img
spot_img
spot_img
spot_img
spot_img

Love Failure : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ಯುವಕ ಮಾಡಿದ್ದೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಬೆಂಗಳೂರು ಗ್ರಾಮಾಂತರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಕೊಡಿಗೇಹಳ್ಳಿಯಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟ ಕಾರಣಕ್ಕೆ ಮನನೊಂದ ಯುವಕ ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ನಡೆದಿದೆ.

ಬಾಲಾಜಿ (23) ಎಂಬ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : SSLC ಪಾಸಾಗಿದ್ದೀರಾ : ಕರ್ನಾಟಕದಲ್ಲಿದೆ ಪೋಸ್ಟ್ ಆಫೀಸ್‌ನಲ್ಲಿ ಉದ್ಯೋಗ ; ನಾಳೆಯೇ ಕೊನೆಯ ದಿನ.!

ಯುವಕ ಬಾಲಾಜಿಗೆ ಇನ್ಸ್ಟಾಗ್ರಾಮ್‌ನಲ್ಲಿ ಒಂದು ವರ್ಷದ ಹಿಂದೆ ಯುವತಿಯೊಬ್ಬಳ ಪರಿಚಯವಾಗಿತ್ತು. ಕನಕಪುರ ಮೂಲದ ಯುವತಿ ಈ ಪರಿಚಯವು ಪ್ರೀತಿಗೆ ತಿರುಗಿತ್ತು.

ಪ್ರೀತಿ- ಪ್ರೇ‌ಮದ ಗುಂಗಿನಲ್ಲಿ ಇಬ್ಬರು ಒಟ್ಟೊಟ್ಟಿಗೆ ಸುತ್ತಾಟ ನಡೆಸಿದ್ದಾರೆ. ಎಲ್ಲ ಕಡೆ ಜತೆಯಾಗಿ ಸುತ್ತಾಡಿ ಕೊನೆಗೆ ಬೇರೊಬ್ಬನನ್ನು ಲವ್ ಮಾಡುತ್ತಿರುವುದಾಗಿ ಹೇಳಿ ಕೈಕೊಟ್ಟಿದ್ದಾಳೆ ಎಂಬ ಆರೋಪಿಸಲಾಗಿದೆ. ಯುವತಿ ಕೈಕೊಟ್ಟ ಹಿನ್ನಲೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ : ಪುಟ್ಟ ಮಗಳನ್ನು ಮನಸೋಇಚ್ಛೆ ಹಿಗ್ಗಾಮುಗ್ಗಾ ಥಳಿಸಿದ ರಾಕ್ಷಸ ರೂಪದ ತಾಯಿ ; Video Viral.!

ಮದುವೆ ಮಾಡಿಕೊಳ್ಳೋಣ ಅಂದಿದ್ದಕ್ಕೆ ಮನೆಯಲ್ಲಿ ಒಪ್ಪಲ್ಲ ಎಂದಿದ್ದಳಂತೆ. ಜತೆಗೆ ಬೇರೆ ಯುವಕನ ಜತೆ ಲವ್‌ನಲ್ಲಿರುವುದಾಗಿ ಹೇಳಿದ್ದಳಂತೆ. ಈ ಕಾರಣಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಮೆಜಾನ್‌ನಲ್ಲಿ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಾಲಾಜಿ ಕುಟುಂಬಕ್ಕೆ ಆಧಾರವಾಗಿದ್ದ ಎಂದು ತಿಳಿದು ಬಂದಿದೆ.

ಇನ್ನೂ ಯುವತಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಮೃತ ಯುವಕನ ಕುಟುಂಬಸ್ಥರು ದೂರು ನೀಡಿದ್ದಾರೆ.

spot_img
spot_img
spot_img
- Advertisment -spot_img