Wednesday, May 22, 2024
spot_img
spot_img
spot_img
spot_img
spot_img
spot_img

Suicide case : ಪ್ರೀತಿಸಿ ಮದುವೆಯಾದ ನವ ದಂಪತಿ ಆತ್ಮಹತ್ಯೆಗೆ ಶರಣು.!

spot_img

ಜನಸ್ಪಂದನ ನ್ಯೂಸ್, ವಿಜಯಪುರ : ವಿಜಯಪುರ ‌ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯೊಂದರಲ್ಲಿ ನವ ದಂಪತಿ (New couple) ನೇಣಿಗೆ ಶರಣಾದ ಘಟನೆ ನಡೆದಿದೆ.

ಇದನ್ನು ಓದಿ : Special news : ವಿವಾದಗಳನ್ನು ಪರಿಹರಿಸಲು ಎತ್ತಿದ ಕೈಯಂತೆ ಈ 4 ರಾಶಿಯವರು.!

ನೇಣಿಗೆ ಶರಣಾದವರು ಮನೋಜಕುಮಾರ ಪೋಳ (30) ಮತ್ತು ರಾಖಿ (23) ಎಂದು ತಿಳಿದು ಬಂದಿದೆ.

ನಾಲ್ಕು ತಿಂಗಳ ಹಿಂದೆಯಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ತಡರಾತ್ರಿ ಊಟ ಮಾಡಿದ ಬಳಿಕ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮನೋಜಕುಮಾರ ಹಾಗೂ ರಾಖಿ ದಂಪತಿ ತಾವಿಬ್ಬರೇ ಮನೆಯಲ್ಲಿದ್ದಾಗ ಈ ದುರ್ಘಟನೆ ನಡೆದಿದೆ.

ಇನ್ನೂ ಮನೋಜಕುಮಾರ ಅವರ ತಾಯಿ ಭಾರತಿ ಅವರು ತಮ್ಮ ಮಗಳ ಊರಿಗೆ ಹೋಗಿದ್ದರು. ಇಂದು‌ ಬುಧವಾರ ಬೆಳಿಗ್ಗೆ ವಾಪಸ್ (return) ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇದನ್ನು ಓದಿ : ಪೊಲೀಸರ ಮೇಲೆ ಹಲ್ಲೆಗೆ ಯತ್ನ ; rowdy sheeter ಕಾಲಿಗೆ ಗುಂಡೇಟು.!

ನವ ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

spot_img
spot_img
spot_img
- Advertisment -spot_img