Thursday, September 19, 2024
spot_img
spot_img
spot_img
spot_img
spot_img
spot_img
spot_img

ನಿಮ್ಮ ಸ್ಮಾರ್ಟ್‌ಫೋನ್‌ Update ಮಾಡದಿದ್ದರೆ ಏನಾಗುತ್ತೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಎಲ್ಲರ ಕೈಯಲ್ಲಿ ಸ್ಮಾರ್ಟ್​ ಫೋನ್ ಗಳು ಇವೆ. ಇನ್ನೂ ಸ್ಮಾರ್ಟ್​ ಫೋನ್ ಎಂದಮೇಲೆ ಅದರಲ್ಲಿ ಅಪ್ಡೇಟ್​ಗಳು ಬರುವುದು ಸಾಮಾನ್ಯ. ಆದರೆ ಕೆಲವರು ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ.

ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕಲೇಬೇಡಿ ; ಇಲ್ಲಾಂದ್ರೆ ಜೈಲುವಾಸ Guarantee.!

ಈ ಅಪ್ಡೇಟ್ ಸೂಚನೆ ತಿಂಗಳುಗಳ ಕಾಲ ಕಾಣಿಸುತ್ತಲೇ ಇರುತ್ತದೆ. ನೀವು ಅಪ್ಡೇಟ್ ಮಾಡದಿದ್ದರೆ ಸಮಸ್ಯೆ ಏನು? ಅಪ್ಡೇಟ್ ಮಾಡದೇ ಹೋದ್ರೆ ನಿಮ್ಮ ಫೋನ್​ನಲ್ಲಿ ಹಲವಾರು ಸಮಸ್ಯೆಗಳು ಕಾಣಿಸುತ್ತವೆ.

ನೀವು ನಿಮ್ಮ ಸ್ಮಾರ್ಟ್‌ ಫೋನ್ ಸಾಫ್ಟ್‌ವೇರ್ ಅನ್ನು ದೀರ್ಘಕಾಲದವರೆಗೆ ಅಪ್ಡೇಟ್‌ ಮಾಡದೇ ಬಿಟ್ಟರೆ, ಮದರ್‌ ಬೋರ್ಡ್ ಒಂದು ಹಂತದಲ್ಲಿ ಕೆಟ್ಟದಾಗಿ ಹೋಗಬಹುದು. ಪರಿಣಾಮವಾಗಿ, ಫೋನ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಥವಾ ಫೋನ್ ಪದೇ ಪದೇ ಹ್ಯಾಂಗ್ ಆಗುವ ಸಾಧ್ಯತೆ ಕೂಡ ಇದೆ.

ಸಮಯಕ್ಕೆ ಸರಿಯಾಗಿ ಅಪ್ಡೇಟ್ ಆಗದೇ ಇದ್ದಾಗ ಮೊಬೈಲ್ ಬಿಸಿಯಾಗಲು ಪ್ರಾರಂಭಿಸುತ್ತದೆ.

ಸೆಕ್ಯುರಿಟಿ ಸಮಸ್ಯೆ ಕಾಣಿಸಬಹುದು.

ಫೋನ್ ಹ್ಯಾಕ್ ಆಗುವ ಸಾಧ್ಯತೆ ಕೂಡ ಇರುತ್ತದೆ.

ಇದನ್ನು ಓದಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 215 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಅನ್ನು ನವೀಕರಿಸಿದಾಗಲೆಲ್ಲಾ ಅದು ಸ್ಮಾರ್ಟ್‌ಫೋನ್‌ನ ವೇಗವನ್ನು ಬಹಳಷ್ಟು ಹೆಚ್ಚಿಸುತ್ತದೆ. ಆಗ ಫೋನ್​ನಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಹ್ಯಾಂಗ್ ಆಗುವ ಸಮಸ್ಯೆ ಬರುವುದಿಲ್ಲ. ನೀವು ಮೊಬೈಲ್​ನಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಅಪ್ಡೇಟ್ ಕೊಡಲೇ ಬೇಕು.

ಫೋನ್‌ನಲ್ಲಿ ಯಾವುದೇ ದೋಷಗಳು ಅಥವಾ ವೈರಸ್‌ಗಳು ಇದ್ದರೆ, ಅವುಗಳನ್ನು ಅಪ್‌ಡೇಟ್ ಮೂಲಕ ತೆಗೆದುಹಾಕಲಾಗುತ್ತದೆ. ಹಾಗಾಗಿ ಈ ಸೈಬರ್ ಕ್ರೈಮ್ ಜಗತ್ತಿನಲ್ಲಿ ಫೋನ್ ಅನ್ನು ಹ್ಯಾಕಿಂಗ್ ನಿಂದ ರಕ್ಷಿಸಲು ಸರಿಯಾದ ಸಮಯಕ್ಕೆ ಸ್ಮಾರ್ಟ್​ಫೋನ್ ಸಾಫ್ಟ್ ವೇರ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.

ಮೊಬೈಲ್ ಕಂಪನಿಗಳು ಅಪ್ಡೇಟ್ ನೀಡುವುದು ಏಕೆಂದರೆ ನಿಮ್ಮ ಸ್ಮಾರ್ಟ್​ಫೋನ್​ಗಳಿಗೆ ಯಾವುದೇ ತೊಂದರೆ ಅಥವಾ ವೈರಸ್ ಅಟ್ಯಾಕ್ ಆಗದಿರಲಿ ಮತ್ತು ಸುರಕ್ಷತೆಗಾಗಿ ನವೀಕರಣಗಳನ್ನು ನೀಡಲಾಗುತ್ತದೆ. ಈ ಅಪ್ಡೇಟ್ ನೀಡುವುದನ್ನು ಕಂಪನಿ ನಿಲ್ಲಿಸಿದಾಗ ಫೋನ್ ಬದಲಾವಣೆ ಮಾಡುವುದು ಉತ್ತಮ ನಿರ್ಧಾರ.

ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!

ಫೋನ್ ಅಪ್‌ಡೇಟ್ ಆದ ತಕ್ಷಣ ಫೋನ್‌ನಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಅಲ್ಲದೆ ಫೋನಿನ ಸೆಕ್ಯುರಿಟಿ ಕೂಡ ಸಾಕಷ್ಟು ಹೆಚ್ಚುತ್ತದೆ.
ಹಾಗಾಗಿಯೇ ಸ್ಮಾರ್ಟ್​ಫೋನ್ ಸಾಫ್ಟ್ ವೇರ್​ಗಳನ್ನು ಸರಿಯಾದ ಸಮಯಕ್ಕೆ ಅಪ್ಡೇಟ್ ಮಾಡುವುದು ಬಹಳ ಮುಖ್ಯ ಎನ್ನುವುದು ಟೆಕ್ ತಜ್ಞರ ಅಭಿಪ್ರಾಯ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img