ಜನಸ್ಪಂದನ ನ್ಯೂಸ್, ಡೆಸ್ಕ್ : ಬಿಹಾರದ ಸೀತಾಮರ್ಹಿಯಲ್ಲಿ ನಡೆದ ವಿಚಿತ್ರ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ.
ನಾಗರಹಾವು ಕಡಿತ (Bite) ಕ್ಕೊಳಗಾದ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಗ್ರಾಮಸ್ಥರು ಬ್ಲಾಕ್ ಮ್ಯಾಜಿಕ್ ಮೂಲಕ ಚಿಕಿತ್ಸೆ ನೀಡಲು ಪ್ರಯತ್ನಿಸಿದ ಘಟನೆ ವಿಡಿಯೋ ರೂಪದಲ್ಲಿ ವೈರಲ್ ಆಗಿದೆ.
Liver : ಹಾಳಾದ ಲಿವರ್ ಗುಣಪಡಿಸಲು ನಿತ್ಯ 1 ಗ್ಲಾಸ್ ಈ ಪಾನೀಯ ಕುಡಿಯಿರಿ.!
ವಿಡಿಯೋದಲ್ಲಿ, ಹಾವು ಕಡಿತ (Bite) ಕ್ಕೆ ಒಳಗಾದ ಮಹಿಳೆಯ ಹತ್ತಿರ ನಾಗರಹಾವನ್ನು ಇಟ್ಟು, ಅದರಿಂದಲೇ ವಿಷ ಹೀರಿಸಬಹುದು ಎಂಬ ನಂಬಿಕೆಯಿಂದ ಗ್ರಾಮಸ್ಥರು ಪ್ರಯತ್ನಿಸುತ್ತಿರುವುದು ಕಾಣಿಸಿದೆ. ಮಹಿಳೆ ಹಳದಿ ಸೀರೆಯಿಂದ ಮುಖ ಮುಚ್ಚಿಕೊಂಡಿದ್ದಾಳೆ ಮತ್ತು ಕೈ-ಕಾಲು ಮಾತ್ರ ಗೋಚರಿಸುತ್ತವೆ. ಹಾವು ಹೊರಗೆ ಹೋಗಲು ಯತ್ನಿಸಿದಾಗ, ಕೆಲವರು ಕೋಲುಗಳಿಂದ ಅದನ್ನು ಮತ್ತೆ ಮಹಿಳೆಯ ದೇಹದತ್ತ ತಳ್ಳುತ್ತಿರುವ ದೃಶ್ಯವೂ ದಾಖಲಾಗಿದೆ.
ನೆಟ್ಟಿಗರ ಆಕ್ರೋಶ :
ಈ ವಿಡಿಯೋ ಹರಿದಾಡಿದ ಬಳಿಕ, ನೆಟ್ಟಿಗರು ಗ್ರಾಮಸ್ಥರ ಅಜ್ಞಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಅಂಧಶ್ರದ್ಧೆಗಳಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ” ಎಂದು ಹಲವರು ಟೀಕಿಸಿದ್ದಾರೆ.
Belagavi ಸಮೀಪ ಬಸ್ ಪಲ್ಟಿ : ಇಬ್ಬರ ದುರ್ಮರಣ, 9 ಮಂದಿಗೆ ಗಾಯ.!
ತಜ್ಞರ ಸಲಹೆ :
ತಜ್ಞರ ಪ್ರಕಾರ, ನಾಗರಹಾವು ಕಡಿತ (Sneck Bite) ತುಂಬಾ ಅಪಾಯಕಾರಿ. ಹಾವು ಕಡಿದ ತಕ್ಷಣ ಆ ಭಾಗವನ್ನು ಸೋಪಿನಿಂದ ತೊಳೆದು, ಬಿಗಿಯಾಗಿ ಕಟ್ಟಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವುದು ಮಾತ್ರವೇ ಸರಿಯಾದ ಚಿಕಿತ್ಸೆ. ತಡವಾದರೆ ಸಾವು ತಪ್ಪದೇ ಸಂಭವಿಸುತ್ತದೆ.
ನಾಗರಹಾವು ಕಡಿತ (Bite) ದ ವಿಡಿಯೋ :
https://twitter.com/i/status/1960332229051343099
harassing : ಯುವತಿಯರನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ 2 ಜನ ಯುವಕರು ; ಮುಂದೆನಾಯ್ತು.?

ಸಂಪಾದಕೀಯ : ಈ ಘಟನೆ ಮತ್ತೊಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ಅಜ್ಞಾನ ಹಾಗೂ ಅಂಧಶ್ರದ್ಧೆಯ ಪರಿಣಾಮವಾಗಿ ಜೀವಕ್ಕೆ ಎಷ್ಟು ದೊಡ್ಡ ಅಪಾಯ ಉಂಟಾಗಬಹುದು ಎಂಬುದನ್ನು ತೋರಿಸಿದೆ.
Instagram-love : ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ 21 ವರ್ಷದ ಯುವಕನಿಗೆ 60 ವರ್ಷಗಳ ಕಠಿಣ ಜೈಲು ಶಿಕ್ಷೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಾಟಾಂಬಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು ಭೀಕರ ತೀರ್ಪು ನೀಡಿದೆ. ಇನ್‌ಸ್ಟಾಗ್ರಾಮ್ (instagram-love) ಮೂಲಕ ಪರಿಚಯವಾದ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಆರೋಪಿಗೆ ಕಠಿಣ ಜೈಲು ಶಿಕ್ಷೆ.!
ಹೌದು, ಎಡತ್ತನಾಟ್ಟುಕರ ವಡಮ್ಮಣ್ಣಪುರಂ ನಿವಾಸಿ ಮೊಹಮ್ಮದ್ ಅಜಾಸ್ (21) ಗೆ 60 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ.20,000/- ದಂಡವನ್ನು ವಿಧಿಸಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಾಟಾಂಬಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು ಕಠಿಣ ತೀರ್ಪು ನೀಡಿದೆ.
Instagram-love : ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ 21 ವರ್ಷದ ಯುವಕನಿಗೆ 60 ವರ್ಷಗಳ ಕಠಿಣ ಜೈಲು ಶಿಕ್ಷೆ.!
ನ್ಯಾಯಾಲಯವು ದಂಡದ ಮೊತ್ತವನ್ನು ದೌರ್ಜನ್ಯಕ್ಕೊಳಗಾದ ಯುವತಿಗೆ ನೀಡುವಂತೆ ನಿರ್ದೇಶಿಸಿದೆ. 2021ರಲ್ಲಿ ಯುವತಿ ಮಣ್ಣಾರ್ಕಾಡ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ 24 ದಾಖಲೆಗಳು ಮತ್ತು 15 ಸಾಕ್ಷಿಗಳ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು.
ಶಾಸಕರ ವಿರುದ್ಧವೂ ಕ್ರಮ :
ಇದೇ ವೇಳೆ, ಪಾಲಕ್ಕಾಡ್ ಶಾಸಕರಾದ ರಾಹುಲ್ ಮಮ್‌ಕೂಟತಿಲ್ ವಿರುದ್ಧವೂ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಿದೆ. ಮಹಿಳೆಯರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಾಗಿದ್ದು, ಡಿಜಿಪಿಗೆ ಸಲ್ಲಿಕೆಯಾದ ದೂರುಗಳ ಆಧಾರದ ಮೇಲೆ ತನಿಖೆ ಪ್ರಾರಂಭವಾಗಿದೆ.
RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮುಖ್ಯಮಂತ್ರಿ ಈ ಕುರಿತು ಸ್ಪಷ್ಟನೆ ನೀಡಿದ ನಂತರ, ಕ್ರೈಂ ಬ್ರಾಂಚ್ ಮಹಿಳೆಯರ ಹೇಳಿಕೆಗಳನ್ನು ಸಂಗ್ರಹಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಶಾಸಕರ ವಿರುದ್ಧ ಐಪಿಸಿನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Courtesy : Suvarna News






