ಜನಸ್ಪಂದನ ನ್ಯೂಸ್, ಡೆಸ್ಕ್ : ಅಪ್ರಾಪ್ತ ಬಾಲಕಿ (Underage girl) ಯೊಬ್ಬಳಿಗೆ ಯುವಕನೊಬ್ಬ ಕತ್ತಿಗೆ ಚಾಕು ಹಿಡಿದು ಬೆದರಿಕೆ ಹಾಕುತ್ತಿರುವ ಭಯಾನಕ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಅದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಬಸಪ್ಪ ಪೇಠ ಕರಂಜೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಈ ಪ್ರದೇಶದ ಜನತೆ ಬೆಚ್ಚಿಬಿದ್ದುಿದ್ದಾರೆ. ಸದ್ಯ ಅದರ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಂಜೆ 4 ಗಂಟೆಯ ಸುಮಾರಿಗೆ, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಬಾಲಕಿ (Underage girl) ಯನ್ನು ಈ ಯುವಕ ರಸ್ತೆಮಧ್ಯೆ ಅಡ್ಡಗಟ್ಟಿದ್ದಾನೆ. ವಿಡಿಯೋ ದೃಶ್ಯಗಳಲ್ಲಿ ಕಾಣಿಸುತ್ತಿರುವಂತೆ, ಆತ ಆಕೆಯ (Underage girl) ಕುತ್ತಿಗೆಗೆ ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದು, ಸುತ್ತಮುತ್ತ ಜನರು ಆತಂಕದಿಂದ ಕೂಗುತ್ತಿದ್ದರೂ ಕೂಡ ಯುವಕ ಯಾರ ಮಾತಿಗೂ ಕಿವಿಗೊಡದೆ ಬಾಲಕಿ (Underage girl) ಗೆ ಬೆದರಿಕೆ ಮುಂದುವರೆಸಿದ್ದಾನೆ.
ಘಟನೆಯ ಸಂದರ್ಭದಲ್ಲಿಯೇ ಸ್ಥಳೀಯ ಯುವಕನೋರ್ವ ಧೈರ್ಯ ತೋರಿ, ಸಮೀಪದ ಗೋಡೆಯೊಂದರ ಮೇಲೇರಿ ಹಿಂದಿನಿಂದ ಬಂದು ಆರೋಪಿಯನ್ನು ಹಿಡಿದು ಆಗಬಹುದಾದ ದುರ್ಘಟನೆಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.
ತಕ್ಷಣ ಸ್ಥಳದಲ್ಲಿದ್ದ ಜನರು ಆತನ ಕೈಯಿಂದ ಚಾಕು ಕಿತ್ತುಕೊಂಡು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಗೆ ಯಾವುದೇ ದೈಹಿಕ ಗಾಯವಾಗದಿರುವುದು ಸಹ ಶ್ಲಾಘನೀಯ.
ಆರೋಪಿ ಹಾಗೂ ಬಾಲಕಿ (Underage girl) ಒಂದೇ ಪ್ರದೇಶದವರು :
ಪ್ರಾಥಮಿಕ ವರದಿಗಳ ಪ್ರಕಾರ, ಆರೋಪಿ ಹಾಗೂ ಬಾಲಕಿ ಒಂದೇ ಪ್ರದೇಶದವರಾಗಿದ್ದು, ಈ ಘಟನೆಯ ಹಿಂದೆ ಏನು ಕಾರಣ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಈ ಬಾಲಕಿ (Underage girl) ಯನ್ನು ಕಳೆದ ಕೆಲವು ದಿನಗಳಿಂದ ಬೆನ್ನಟ್ಟುವುದು, ಬೆದರಿಕೆ ಹಾಗೂ ಕಿರುಕುಳ ನೀಡುತ್ತಾ ಬಂದಿದ್ದಾನೆ ಎನ್ನಲಾಗುತ್ತಿದೆ. ಈ ನಡುವೆ ಆರೋಪಿಯೂ ಸಹ ಅಪ್ರಾಪ್ತ ಎಂದು ಹೇಳಲಾಗುತ್ತಿದೆ.
ವಿಡಿಯೋ :
महाराष्ट्र में सतारा में नाबालिग छात्रा को चाकू दिखाकर धमकाने का वीडियो वायरल, आरोपी भी नाबालिग#Maharashtra | #ViralVideo pic.twitter.com/YY9nVwiqFh
— NDTV India (@ndtvindia) July 21, 2025
Female PSI : ಬಿ ರಿಪೋರ್ಟ್‌ಗಾಗಿ ಲಂಚ : ಮಹಿಳಾ ಪಿಎಸ್‌ಐ ಲೋಕಾಯುಕ್ತ ಬಲೆಗೆ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಗೋವಿಂದಪುರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (Female PSI) ಸಾವಿತ್ರಿ ಬಾಯಿ ಅವರು ಬಿ ರಿಪೋರ್ಟ್ ಸಲ್ಲಿಸಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.
ರೂ.1.25 ಲಕ್ಷಕ್ಕೆ ಬೇಡಿಕೆ ; ಹಣದೊಂದಿಗೆ ಬಂಧನ :
ಹೆಚ್‌ಬಿಆರ್ ಲೇಔಟ್ ನಿವಾಸಿ ಮೊಹಮದ್ ಯೂನಸ್ ವಿರುದ್ಧ ದಾಖಲಾದ ಪ್ರಕರಣದಲ್ಲಿ B ರಿಪೋರ್ಟ್ ಸಲ್ಲಿಸುವ ಸಲುವಾಗಿ ಮಹಿಳಾ ಪಿಎಸ್‌ಐ (Female PSI) ಸಾವಿತ್ರಿ ಬಾಯಿ ಅವರು ರೂ.1.25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ದೂರುದಾರನಿಂದ ಹಣ ಸ್ವೀಕರಿಸುತ್ತಿದ್ದ ವೇಳೆ, DSP ಪೂವಯ್ಯ ನೇತೃತ್ವದ ಲೋಕಾಯುಕ್ತ ತಂಡ ಮಹಿಳಾ ಪಿಎಸ್‌ಐ (Female PSI) ಅವರನ್ನು ಹಣದ ಸಮೇತ ಬಂಧಿಸಿದೆ. ಪ್ರಸ್ತುತ ಅಧಿಕಾರಿಯ ವಿಚಾರಣೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ.
ಪ್ರಕರಣದ ಹಿಂದಿನ ಹಿನ್ನೆಲೆ ಏನು?
ಮದುವೆಯಾದರೂ ಕೂಡ ವಿಷಯ ತಿಳಿಸದೇ ಆರೋಪಿ ಮೊಹಮದ್ ಯೂನಸ್ ಮತ್ತೊಬ್ಬ ಯುವತಿಯ ಜೊತೆ ಸಹಜೀವನ ನಡೆಸುತ್ತಿದ್ದರು. ವಿಷಯ ಬೆಳಕಿಗೆ ಬಂದಾಗ ಯುವತಿ ಅವರನ್ನು ಪ್ರಶ್ನಿಸಲು ಹೋಗಿದ್ದಾಗ ಗಲಾಟೆ ಉಂಟಾಗಿ ಆಕೆಯ ಮೇಲೆ ಹಲ್ಲೆ ನಡೆದಿತ್ತು.
ಮೇ 5ರಂದು ಆರೋಪಿಯು ಯುವತಿಯನ್ನು ಮತ್ತೆ ಭೇಟಿಯಾಗಿ ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದ. ಆಕೆ ನಿರಾಕರಿಸಿದಾಗ ಮತ್ತೊಮ್ಮೆ ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಲೋಕಾಯುಕ್ತದಿಂದ ಕಟ್ಟುನಿಟ್ಟಿನ ಕ್ರಮ :
ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಮಹಿಳಾ ಪಿಎಸ್‌ಐ (Female PSI) ಸಾವಿತ್ರಿ ಬಾಯಿ ಹಣ (ಲಂಚ) ಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಮೇರೆಗೆ ಲೋಕಾಯುಕ್ತವು ಕೈಚಳಕ ತೋರಿಸಿದ್ದು, ಇದೀಗ ಹಣದೊಂದಿಗೆ ಅಧಿಕಾರಿ (Female PSI) ಯನ್ನು ಬಂಧಿಸಿದೆ. ಸಲ್ಲದೆ ಆರೋಪದ ಬಗ್ಗೆ ಮುಂದಿನ ತನಿಖೆ ಮುಂದುವರೆದಿದೆ.