Saturday, July 27, 2024
spot_img
spot_img
spot_img
spot_img
spot_img
spot_img

Special news : ಮಧ್ಯರಾತ್ರಿ ಬಾಯಾರಿಕೆಯಾಗ್ತಿದೆಯಾ.? ಹಾಗಿದ್ರೆ ಈ ಸುದ್ದಿ ಓದಿ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನೀರು ಎಲ್ಲರಿಗೂ ಬೇಕಾಗಿರುವ ಪದಾರ್ಥ. ದೇಹದ ಸರ್ವರೀತಿಯ ಆರೋಗ್ಯವನ್ನು ಕಾಪಾಡಲು ನೀರು (Water) ಅತ್ಯಾವಶ್ಯಕವಾಗಿದೆ. ಭೂಮಿಯ ಮೇಲಿನ ಪ್ರತೀ ಜೀವಿಗೂ ಜೀವಿಸಲು ನೀರು ಬೇಕು.

ಆಗಾಗ ಬಾಯಾರಿಕೆಯಾಗುವುದು ಸಾಮಾನ್ಯ. ಕೆಲವೊಮ್ಮೆ ದೇಹ ಕೊಂಚ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿದ್ದ ವೇಳೆ ಸಾಮಾನ್ಯವಾಗಿ ಬಾಯಾರಿಕೆ (thirst) ಆಗುತ್ತದೆ.

ಇದನ್ನು ಓದಿ : Be alert : ಗಂಟೆಗಟ್ಟಲೆ Internet ಬಳಸ್ತೀರಾ.? ಮೆದುಳಿನಲ್ಲಿ ಹೆಚ್ಚುತ್ತಂತೆ ಈ ಕೆಮಿಕಲ್.!

ಆದರೆ ಮಧ್ಯರಾತ್ರಿ ಬಾಯಾರಿಕೆಯಿಂದ ನಿದ್ರೆಯಿಂದ ನಿಮಗೆ ಎಚ್ಚರವಾಗಬಹುದು. ಆಗ ಬೇಕಾದಷ್ಟು ನೀರು ಕುಡಿದು ನೀವು ಮತ್ತೆ ಮಲಗುತ್ತೀರಿ. ಆದರೆ ಈ ವೇಳೆ ಮತ್ತೆ ನಿಮಗೆ ನಿದ್ರೆ ಬರಲು ಕಷ್ಟವಾಗುತ್ತದೆ. ಇದೇ ರೀತಿ ಆಗಾಗ ರಾತ್ರಿ ಹೊತ್ತು ಏಕೆ ತುಂಬಾ ಬಾಯಾರಿಕೆ ಉಂಟಾಗುತ್ತದೆ ಅಂತ ನಿಮಗೇನಾದ್ರೂ ಗೊತ್ತಾ.?

ಇದನ್ನು ಅನೇಕ ಜನರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದು ಕೆಲವು ಕಾಯಿಲೆಗಳ ಸಂಕೇತವಾಗಿದೆ. ಅತಿಯಾದ ಬಾಯಾರಿಕೆಯಿಂದ ರಾತ್ರಿಯ ನಿದ್ರೆ ಕೂಡ ಕಳೆದುಕೊಳ್ಳುತ್ತೀರಿ. ಈ ರೀತಿ ಏಕೆ ಬಾಯಾರಿಕೆ ಆಗುತ್ತದೆ ಎಂದು ತಿಳಿಯೋಣ ಬನ್ನಿ.

* ಅಧಿಕ ರಕ್ತದೊತ್ತಡದ (high blood pressure) ಸಮಸ್ಯೆ ಉಂಟಾದಾಗ ಆರೋಗ್ಯ ಹದಗೆಡುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು. ಅಧಿಕ ರಕ್ತದೊತ್ತಡವು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಪರಿಣಾಮವಾಗಿ, ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಎಚ್ಚರಗೊಂಡು ಬಾಯಾರಿಕೆಯನ್ನು ಅನುಭವಿಸಬಹುದು.

* ಸಾಮಾನ್ಯವಾಗಿ ರಾತ್ರಿ ಹೊತ್ತು ನಾವು ಗಾಢವಾದ ನಿದ್ರೆಯಲ್ಲಿರುವಾಗ, ನಮಗೆ ಬಾಯಾರಿಕೆ ಮತ್ತು ನಿದ್ದೆ ಬರುತ್ತದೆ.

* ರಕ್ತದಲ್ಲಿನ ಸಕ್ಕರೆ ಮಟ್ಟವು (sugar level) ಹೆಚ್ಚಾದಾಗ, ದೇಹವು ಮೂತ್ರದ ಮೂಲಕ ಸಕ್ಕರೆಯನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಇದು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ.

ಇದನ್ನು ಓದಿ : ಬಿಯರ್‌ ಖರೀದಿ ಮಾಡ್ತಿದ್ದ ಮಗನನ್ನು ಚಪ್ಪಲಿಯಿಂದ ಮನಸೋಇಚ್ಛೆ ಹೊಡೆದ ತಂದೆ ; Video Viral.!

ಅದರ ಸಹಾಯದಿಂದ, ನೀರು ಹೆಚ್ಚಾಗಿ ದೇಹದಿಂದ ಹೊರಬರುತ್ತದೆ. ಇದು ಹೆಚ್ಚಾಗಿ ಬಾಯಾರಿಕೆಯನ್ನು ಉಂಟುಮಾಡುತ್ತದೆ.

* ಅಧಿಕ ರಕ್ತದೊತ್ತಡ ದೇಹವನ್ನು ವಿಪರೀತವಾಗಿ ಬೆವರುವಂತೆ ಮಾಡುತ್ತದೆ. ಇದು ನಿರ್ಜಲೀಕರಣದ (Dehydration) ಸಮಸ್ಯೆಯನ್ನು ಉಂಟುಮಾಡಬಹುದು. ಎಷ್ಟೇ ನೀರು ಕುಡಿದರೂ ಬಾಯಾರಿಕೆ ನೀಗುವುದಿಲ್ಲ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img