Friday, June 14, 2024
spot_img
spot_img
spot_img
spot_img
spot_img
spot_img

Health : ಈರುಳ್ಳಿ ಸೊಪ್ಪು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಸಾಂಬಾರ್, ಪ್ರೈಡ್ ರೈಸ್ ಇತ್ಯಾದಿ ಅಡುಗೆಗಳಲ್ಲಿ ಈರುಳ್ಳಿ ಸೊಪ್ಪು (spring onion) ನ್ನು ನೋಡಿರುತ್ತೇವೆ. ಚೈನೀಸ್ ಅಡುಗೆಯಲ್ಲಿ ಈರುಳ್ಳಿ ಸೊಪ್ಪಿನ ಬಳಕೆ ಅತ್ಯಂತ ಹೆಚ್ಚು.

ಈರುಳ್ಳಿ ಸೊಪ್ಪು, ಅಡುಗೆಯ ರುಚಿ ಖಂಡಿತಾ ಹೆಚ್ಚಿಸುತ್ತದೆ. ಆದರೆ, ಅದರ ಆರೋಗ್ಯದಲ್ಲಿ (health) ಅದರ ಮಹತ್ವ ಬಹಳಷ್ಟು ಜನರಿಗೆ ತಿಳಿದಿಲ್ಲ. ಈರುಳ್ಳಿ ಸೊಪ್ಪಿನಲ್ಲಿ ಕಾರ್ಬೊಹೈಡ್ರೇಟ್, ವಿಟಮಿನ್, ಪ್ರೊಟೀನ್, ಸಲ್ಫರ್ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತವೆ.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ಈರುಳ್ಳಿ ಸೊಪ್ಪು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು (Benefits) :

ಎಲುಬು ಸ್ಟ್ರಾಂಗ್ ಆಗಲು :
ಈರುಳ್ಳಿ ಸೊಪ್ಪಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶ ಇರುತ್ತದೆ. ಕ್ಯಾಲ್ಸಿಯಂ ಯಾವತ್ತಿಗೂ ಎಲುಬನ್ನು ಗಟ್ಟಿಯಾಗಿಡುತ್ತದೆ (Strong). ಈರುಳ್ಳಿ ಸೊಪ್ಪನ್ನು ಸಲಾಡ್‍ ನೊಂದಿಗೆ ಸೇವಿಸಬಹುದು. ಪಲ್ಯ ಮಾಡಿ ತಿನ್ನಬಹುದು. ಈರುಳ್ಳಿ ಸೊಪ್ಪು ಆರೋಗ್ಯವನ್ನು ವೃದ್ದಿಸುತ್ತದೆ ಎನ್ನುತ್ತಾರೆ ವೈದ್ಯರು.

ಕಣ್ಣುಗಳಿಗೆ ಹಿತಕಾರಿ :
ಈರುಳ್ಳಿ ಸೊಪ್ಪಿನಲ್ಲಿ ಕ್ಯಾರೋಟೆನಾಯಿಡ್ (Carotenoid) ಅಂಶವಿದೆ. ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಅಷ್ಟಲ್ಲದೇ, ಕಣ್ಣಿನ ಕಾಂತಿಯನ್ನು ಹೆಚ್ಚಿಸುತ್ತದೆ. ದೃಷ್ಟಿದೋಷ ನಿವಾರಣೆಯಾಗುವುದಕ್ಕೂ ಈರುಳ್ಳಿ ಸೊಪ್ಪು ಉಪಯುಕ್ತ.

ಕ್ಯಾನ್ಸರ್ ಹೋಗಲಾಡಿಸಲು :
ಈರುಳ್ಳಿ ಸೊಪ್ಪಿನಲ್ಲಿ ಸಲ್ಫರಲ್ಲಿ ಅಲೈಲ್ ಸಲ್ಫೈಡ್ ಮತ್ತು ಫ್ಲವೊನಾಯಿಡ್ಸ್ ಎಂಬ ಅಂಶಗಳಿವೆ. ಇವು ಕ್ಯಾನ್ಸರನ್ನು ದೂರ ತಳ್ಳುತ್ತದೆ. ಅಲ್ಲದೆ, ಕ್ಯಾನ್ಸರ್ (Cancer) ಕಾರಕಾಂಶಗಳನ್ನು ಆರಂಭದಲ್ಲೇ ಕೊಲ್ಲುತ್ತವೆ.

ಶೀತ, ಕೆಮ್ಮು, ಜ್ವರ ನಿವಾರಣೆ :
ಈರುಳ್ಳಿ ಸೊಪ್ಪಿನಲ್ಲಿ ಆಂಟಿಬ್ಯಾಕ್ಟೀರಿಯ ಮತ್ತು ಆಂಟಿ ವೈರಲ್ (Antivirals) ಗುಣವಿದೆ. ಒಂದು ರೀತಿಯಲ್ಲಿ ವೈರಸ್ ಮತ್ತು ಜ್ವರದ ವಿರುದ್ಧ ಹೋರಾಡುವಲ್ಲಿ ಇದು ಅತ್ಯಂತ ಸೂಕ್ತವಾದ ಅಸ್ತ್ರ.

ಹೊಟ್ಟೆ ಹಸಿವು ಹೆಚ್ಚಿಸುವುದು :
ಈರುಳ್ಳಿ ಸೊಪ್ಪಿನಲ್ಲಿ ಫೈಬರ್ ಅಂಶವು ಕೂಡ ಇರುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ಹೊಟ್ಟೆ ಹಸಿವು (Hungry) ಸಾಮಾನ್ಯವಾಗಿ ಹೆಚ್ಚುತ್ತದೆ.

ಇದನ್ನು ಓದಿ : Health : ನಮ್ಮ ದೇಹಕ್ಕೆ ಸ್ಲೋ ಪಾಯ್ಜನ್ ಇದ್ದ ಹಾಗೆ ಈ ಎಣ್ಣೆಗಳು.!

ಡಯಾಬಿಟಿಸ್ ನಿಂದ ರಕ್ಷಣೆ :
ಈರುಳ್ಳಿ ಸೊಪ್ಪಿನಲ್ಲಿ ಸಲ್ಫರ್ ಸಾಕಷ್ಟು ಪ್ರಮಾಣದಲ್ಲಿರುವ ಕಾರಣದಿಂದಾಗಿ ದೇಹದಲ್ಲಿ ಇನ್ಸುಲಿನ್ (Insulin) ಉತ್ಪಾದನೆ ಹೆಚ್ಚಾಗುವುದರಿಂದ ಡಯಾಬಿಟಿಸ್ ನಿಂದ ರಕ್ಷಿಸುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img