Friday, October 18, 2024
spot_img
spot_img
spot_img
spot_img
spot_img
spot_img
spot_img

Health : ಈ ಆಹಾರ ಪದಾರ್ಥಗಳನ್ನು ಒಟ್ಟೊಟ್ಟಿಗೆ ಸೇವಿಸಲೇಬಾರದು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರತಿಯೊಬ್ಬ ವ್ಯಕ್ತಿಯ ಬೇರೆ ಬೇರೆ ರೀತಿ ಆಹಾರ ಸೇವಿಸ್ತಾರೆ. ಒಬ್ರು ನಾನ್ ವೆಜ್ ಊಟ (lunch) ಮಾಡಿದ್ರೆ, ಮತ್ತೊಬ್ಬರು ವೆಜ್ ಊಟ ಮಾಡ್ತಾರೆ.

ಆದರೆ ಆಹಾರ ಸೇವನೆಯ ಅನಂತರ ಹೊಟ್ಟೆ ಉಬ್ಬಬಾರದು. ಇಂದ್ರಿಯಗಳಿಗೆ ಕಷ್ಟವಾಗಬಾರದು, ಎದೆಯಲ್ಲಿ ಉರಿ, ನೋವುಂಟಾಗಬಾರದು ಮತ್ತು ನಿಲ್ಲಲು, ಕುಳಿತುಕೊಳ್ಳಲು, ಮಲಗಲು (sleeping), ನಡೆದಾಡಲು ಕಷ್ಟವಾಗಬಾರದು.
ಮೊದಲು ಸೇವಿಸಿರುವ ಆಹಾರ ಪೂರ್ಣವಾಗಿ ಜೀರ್ಣವಾದ (Fully digested) ಅನಂತರವೇ ಮತ್ತೆ ಊಟ ಮಾಡಬೇಕು.

ಇದನ್ನು ಓದಿ : ಸೌರ ಚುಲ್ಹಾ ಯೋಜನೆ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ ‘ಸೋಲಾರ್ ಸ್ಟವ್’ : ಇಲ್ಲಿದೆ ಡೈರೆಕ್ಟ್‌ Link.!

ಹಸಿವಾದಾಗ ಆಹಾರಗಳನ್ನು ಸೇವನೆ ಮಾಡುವುದರಿಂದ ಹೊಟ್ಟೆ ತುಂಬುತ್ತದೆ ಏನೋ ನಿಜ. ಈ ಎಲ್ಲಾ ಆಹಾರಗಳನ್ನು ಒಟ್ಟಿಗೆ ತಿಂದರೆ, ಹುಳಿತೇಗು ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ಎದುರಾಗುತ್ತದೆ.

* ಹಾಲಿನಿಂದಲೇ ಮೊಸರನ್ನು (milk and curd) ತಯಾರಿಸುತ್ತೇವೆಯಾದರೂ ಒಟ್ಟಿಗೆ ಸೇವನೆ ಮಾಡುವುದರಿಂದ ಅಡ್ಡಪರಿಣಾಮಗಳೇ ಹೆಚ್ಚು. ಇದರಿಂದಾಗಿ ಗ್ಯಾಸ್ಟಿಕ್ ಮತ್ತು ಅಜೀರ್ಣದ ಸಮಸ್ಯೆಗಳು ಉಂಟಾಗುತ್ತದೆ.

* ಬಾದಾಮಿ, ಕಡಲೆಕಾಯಿ, ಸೋಯಾಬೀನ್ ಮತ್ತು ವಾಲ್‌ನಟ್‌ ಗಳಲ್ಲಿ ಫೈಟಿಕ್ ಆಮ್ಲ ಇರುತ್ತವೆ. ಇದನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸುವ ಅಭ್ಯಾಸವಿರಲಿ. ಇಲ್ಲದಿದ್ದರೆ ಈ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

* ಕೆಲವರಿಗೆ ಚಹಾದೊಂದಿಗೆ ಏನಾದರೂ ತಿನ್ನುವ ಅಭ್ಯಾಸವಿರುತ್ತದೆ. ಹಾಗಂತ ನಟ್ಸ್‌, ಹಸಿರು ಎಲೆಗಳ ತರಕಾರಿಗಳು (Green leafy vegetables) ಹಾಗೂ ಧಾನ್ಯಗಳಂತಹ ಆಹಾರ ಪದಾರ್ಥಗಳನ್ನು ಮುಟ್ಟಲೇಬೇಡಿ.

* ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ, ನಿಂಬೆ ಸೇರಿದಂತೆ ಇನ್ನಿತ್ತರ ಹಣ್ಣುಗಳನ್ನು ಈ ಹಾಲಿನೊಂದಿಗೆ ಸೇವಿಸುವುದನ್ನು ಆದಷ್ಟು ತಪ್ಪಿಸಿ.

* ಥೈರಾಯ್ಡ್ ಸಮಸ್ಯೆಯಿರುವವರು (thyroid problem) ಈ ಎಲೆಕೋಸು, ಹೂಕೋಸು ಹಾಗೂ ಕೋಸುಗಡ್ಡೆಯನ್ನು ಅಯೋಡಿನ್ ಭರಿತ ಆಹಾರಗಳೊಂದಿಗೆ ಅಪ್ಪಿ ತಪ್ಪಿಯೂ ಸೇವಿಸಲೇಬೇಡಿ. ಸೇವನೆ ಮಾಡಿದರೆ ಥೈರಾಯ್ಡ್ ಗ್ರಂಥಿಯ ಕಾರ್ಯವು ನಿಧಾನವಾಗಿ ಸಮಸ್ಯೆಯು ಅತಿರೇಕಕ್ಕೆ ತಿರುಗುವ ಸಾಧ್ಯತೆಯಿರುತ್ತದೆ.

ಇದನ್ನು ಓದಿ : Poison : ಹಾವೂ ಕಚ್ಚಿದಾಗ ಮನುಷ್ಯ ಏಕೆ ಸಾಯುತ್ತಾನೆ ಗೊತ್ತೇ ; ಈ ವೈರಲ್‌ ವಿಡಿಯೋ ನೋಡಿ.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img