Saturday, July 27, 2024
spot_img
spot_img
spot_img
spot_img
spot_img
spot_img

ಚರ್ಚ್‌ನ ಕಾಲು ಹಾದಿಯಲ್ಲಿ ಓಂ, ಸ್ವಸ್ತಿಕ್ ಚಿಹ್ನೆಯ Tiles ; ವಿವಾದ ಸೃಷ್ಟಿಸಿದ ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ವಸ್ತಿಕ, ಓಂ ಚಿಹ್ನೆಗಳನ್ನು ಹಿಂದೂ ಧರ್ಮದಲ್ಲಿ (Hinduism) ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಅವುಗಳನ್ನು ಜನರು ತುಳಿದುಕೊಂಡು ಹೋಗುವ ಟೈಲ್ಸ್‌ನಲ್ಲಿ ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​​ ಆಗಿದ್ದು, ವಿಡಿಯೋದಲ್ಲಿ ಆಂಧ್ರಪ್ರದೇಶದ (Andra Pradesh) ಚರ್ಚ್ ಒಂದರ ಮುಂಭಾಗದಲ್ಲಿ ಹಾಕಲಾದ ಟೈಲ್ಸ್‌ನಲ್ಲಿ ಓಂ ಮತ್ತು ಸ್ವಸ್ತಿಕ್ ಚಿಹ್ನೆ ಬಳಸಿರುವುದನ್ನು ಕಾಣಬಹುದು.

ಸೌರ ಚುಲ್ಹಾ ಯೋಜನೆ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ ‘ಸೋಲಾರ್ ಸ್ಟವ್’ : ಇಲ್ಲಿದೆ ಡೈರೆಕ್ಟ್‌ Link.!

ಇದು ರಾಜ್ಯದ ಮಂಗಳಾಪುರ ಪ್ರದೇಶದಲ್ಲಿರುವ ಚರ್ಚ್​​ (church) ಎಂದು ಗುರುತಿಸಲಾಗಿದೆ.

@arunpudur ಎಂಬ ಹೆಸರಿನ ಟ್ವಿಟರ್​​ ಖಾತೆಯಲ್ಲಿ ಈ ವಿಡಿಯೋವನ್ನು ಏಪ್ರಿಲ್​ 2ರಂದು ಶೇರ್ ಮಾಡಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 95 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ (view’s) ಪಡೆದಿದೆ.

Video : ಸಿನೆಮಾ ಚಿತ್ರಿಕರಣ ವೇಳೆ ಭೀಕರ ಅಪಘಾತ ; ನುಜ್ಜು ಗುಜ್ಜಾದ ಸ್ಟಾರ್ ನಟನ ಕಾರು.!

ಹಿಂದೂ ಧರ್ಮದಲ್ಲಿ ದೈವಿಕವೆಂದು ಪರಿಗಣಿಸಲಾಗಿರುವ ಓಂ ಮತ್ತು ಸ್ವಸ್ತಿಕ (Om & Swastik) ಚಿಹ್ನೆಗಳನ್ನು ಈ ರೀತಿ ಬಳಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಒಂದು ಧರ್ಮಕ್ಕೆ ಅಗೌರವ ತೋರಿರುವವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.

ಸಾಕಷ್ಟು ನೆಟ್ಟಿಗರು ಕಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img