ಜನಸ್ಪಂದನ ನ್ಯೂಸ್, ಸಿನೆಮಾ : ಸಿನಿಮಾ ಶೂಟಿಂಗ್ ವೇಳೆ ತಮಿಳು ಸ್ಟಾರ್ ಅಜಿತ್ ಕುಮಾರ್ ಅವರು ಓಡಿಸುತ್ತಿದ್ದ ಕಾರಿಗೆ ಭೀಕರ ಅಪಘಾತ ಸಂಭವಿಸಿದೆ. ಅಜಿತ್ ಅನೇಕ ಸಿನಿಮಾಗಳಲ್ಲಿ ರಿಸ್ಕಿ ಸ್ಟಂಟ್‌ಗಳನ್ನು ಮಾಡಿದ್ದಾರೆ ಮತ್ತು ಅಪಘಾತಗಳನ್ನು ಎದುರಿಸಿದ್ದಾರೆ.
ಸಿನಿಮಾದಲ್ಲಿ ಅಜಿತ್ ಯಾವುದೇ ಡ್ಯೂಪ್ ಇಲ್ಲದೆ ರಿಸ್ಕಿ ಶಾಟ್ ಮಾಡುತ್ತಾರೆ. ಹಾಗೆ ಇದೀಗ ‘ವಿಡ ಮುಯಿರ್ಚಿ’ ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶಕ ಮಾಗಿಜ್ ತಿರುಮೇನಿ ಪ್ರಸ್ತುತ ಈ ಚಿತ್ರದ ಕಾರ್ ಆಕ್ಷನ್ ಸೀಕ್ವೆನ್ಸ್ ಅನ್ನು ನಿರ್ದೇಶಿಸುತ್ತಿದ್ದಾರೆ.
ನಡುರಸ್ತೆಯಲ್ಲೇ ಶಾಸಕ ಲಕ್ಷ್ಮಣ ಸವದಿ ಆಪ್ತನ ಬ*ರ್ಬ*ರ ಹ*ತ್ಯೆ.!
ಈ ಚಿತ್ರೀಕಣ ವೇಳೆ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಈ ವೇಳೆ ಅಜಿತ್ ಜತೆಗೆ ಮತ್ತೊಬ್ಬ ನಟ ಕೂಡ ಕಾರಿನಲ್ಲಿದ್ದರು.
ಅಪಘಾತದ ಸಮಯದಲ್ಲಿ ಕಾರಿಗೆ ಸಾಕಷ್ಟು ಹಾನಿಯಾಗಿದೆ ಎಂದು ಶೂಟಿಂಗ್ ವೀಡಿಯೊ ತೋರಿಸುತ್ತದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ.
ಇದನ್ನು ನೋಡಿದ ಅಭಿಮಾನಿಗಳು ಅಜಿತ್‌ಗೆ ಏನಾದರೂ ಗಾಯವಾಗಿದೆಯೇ ಎಂಬ ಆತಂಕದಲ್ಲಿದ್ದಾರೆ. ಆದರೆ ಅಪಘಾತದ ವೇಳೆ ರೆಕಾರ್ಡ್ ಆಗಿರುವ ವಿಡಿಯೊದಲ್ಲಿ ಅಜಿತ್ ತಾನು ಚೆನ್ನಾಗಿದ್ದೀನಿ ಎಂದು ಹೇಳಿದ್ದು ದಾಖಲಾಗಿದೆ.
Recruitment : ಜಿಲ್ಲಾ ನ್ಯಾಯಾಲಯಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ರಿಸ್ಕ್ ಶಾಟ್ ಗೆ ನೆಟಿಜನ್ ಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಿಜ ಜೀವನದಲ್ಲೂ ಅಜಿತ್ ಹೀರೋ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.
Bravery knows no bounds! 💪 Witness Ajith Kumar's fearless dedication as he takes on a daring stunt sequence in #VidaaMuyarchi without any stunt double. 🫡 🔥#AjithKumar pic.twitter.com/62NyEG4cvG
— Lyca Productions (@LycaProductions) April 4, 2024