Wednesday, May 22, 2024
spot_img
spot_img
spot_img
spot_img
spot_img
spot_img

ನೀರಿನಿಂದ ಹೊರಬಂದು ಒದ್ದಾಡುತ್ತಿದ್ದ ಮೀನನ್ನು ರಕ್ಷಿಸಿದ ಕೊಕ್ಕರೆ ; ಅದ್ಹೇಂಗೆ? ಈ Video ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪಕ್ಷಿಗಳಲ್ಲಿ ಕೊಕ್ಕರೆಗಳು (ಬೆಳ್ಳಕ್ಕಿ) ಹೆಚ್ಚಾಗಿ ಜೌಗು ಪ್ರದೇಶ, ಕೆಸರು ಗದ್ದೆಗಳಲ್ಲಿ, ಕೆರೆಗಳಲ್ಲಿ ಕಪ್ಪೆ, ಏಡಿ ಮೀನುಗಳನ್ನು ತಿನ್ನುತ್ತಾ ಅಲ್ಲೇ ಓಡಾಡುತ್ತಿರುವುದನ್ನು ನೀವು ನೋಡಿರಬಹುದು.

ಆದರೆ ಇಲ್ಲೊಂದು ಬೆಳ್ಳಕ್ಕಿ (stork) ತದ್ವಿರುದ್ಧ ಕೆಲಸ ಮಾಡಿದ್ದು, ನೀರಿನಿಂದ ಹೊರ ಬಂದಂತಹ ಮೀನನ್ನು (fish) ತಿನ್ನದೆ, ಅದನ್ನು ವಾಪಸ್ ನೀರಿಗೆ ಬಿಟ್ಟಿದೆ.

ಇದನ್ನು ಓದಿ : Delete ಆದ ವಾಟ್ಸಾಪ್ ಮೆಸೇಜ್‌ಗಳನ್ನು ಮರಳಿ ಪಡೆಯುವುದು ಹೇಗೆ.?

ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಳ್ಳಕ್ಕಿಯ ಮಾನವೀಯ (humanitarian) ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ವಿಡಿಯೋದಲ್ಲಿರುವ ದೃಶ್ಯ :

ಕಾಗೆಯೊಂದು ನೀರಿನಿಂದ ಹೊರ ಬಂದ ಜೀವಂತ ಮೀನನ್ನು ತಿನ್ನಲು ಪ್ರಯತ್ನ ಪಡುತ್ತಿರುವ ದೃಶ್ಯವನ್ನು ಕಾಣಬಹುದು.

ಅಲ್ಲಿಗೆ ಬಂದ ಬೆಳ್ಳಕ್ಕಿಯೊಂದು ಕಾಗೆಯನ್ನು (crow) ಓಡಿಸಿ, ಪಾಪ ಮೀನಿನ ಜೀವ ಉಳಿದರೆ ಸಾಕಪ್ಪಾ ಎನ್ನುತ್ತಾ, ಮೀನನ್ನು ಬಾಯಲ್ಲಿ ಕಚ್ಚಿಕೊಂಡು (Biting in the mouth) ಹೋಗಿ ನೀರಲ್ಲಿ ಬಿಟ್ಟು ಬರುತ್ತೆ ಎಂಬುದು ಎಲ್ಲರ ಹಾರೈಕೆ.

ಇದನ್ನು ಓದಿ : Astrology : ಜನರ ಭಾವನೆಗಳೊಂದಿಗೆ ಆಟವಾಡುವ 4 ರಾಶಿಯವರು.!

ಬೆಳ್ಳಕ್ಕಿಯೊಂದು ನೀರಿನಿಂದ ಹೊರ ಬಂದ ಮೀನನ್ನು ತಿನ್ನದೆ, ಅದನ್ನು ವಾಪಸ್ ನೀರಿನಲ್ಲೇ ಬಿಟ್ಟು ಬಿಟ್ಟಿದೆ. ಇದೀಗ ಕೊಕ್ಕರೆಯ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿದ್ದಾರೆ.

ಈ ವಿಡಿಯೋವನ್ನು ಡಿಸಿ ಸಂಜಯ್ ಕುಮಾರ್ (@dc_sanjay_jas) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸಮಯ ಉತ್ತಮವಾಗಿದ್ದಾಗ, ನಿಮ್ಮ ಬದ್ಧ ವೈರಿಗಳೂ ಸಹ ನಿಮ್ಮ ಸಹಾಯಕರಾಗುತ್ತಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img