ಜನಸ್ಪಂದನ ನ್ಯೂಸ್, ಡೆಸ್ಕ್ : ಎಲ್ಲರಲ್ಲಿಯೂ ಒಂದೇ ತರ ಭಾವನೆ, ಗುಣ ಇರುತ್ತದೆ ಹೇಳಲಿಕ್ಕೆ ಅಸಾಧ್ಯ. ಒಬ್ಬೊಬ್ಬರ ಸ್ವಭಾವ (nature) ಒಂದೊಂದು ರೀತಿ ಇರುತ್ತದೆ.
ಅದರಲ್ಲಿಯೂ ಕೆಲವರು ತಮ್ಮ ಅನುಕೂಲಕ್ಕಾಗಿ ಅಥವಾ ತಮಾಷೆಗಾಗಿ (fun) ಮತ್ತೊಬ್ಬರ ಭಾವನೆಯನ್ನು ಬಳಸಿಕೊಳ್ಳುತ್ತಾರೆ. ಅವರ ಭಾವನೆಗಳ ಜೊತೆ ಆಟ ಆಡುತ್ತಾರೆ.
ಇಂತಹ ಸ್ವಭಾವ ಜಾಸ್ತಿ ಇರುವ 4 ರಾಶಿಗಳ ಬಗ್ಗೆ ಇಲ್ಲಿ ನೋಡೋಣ. ಈ ರಾಶಿಯ ಎಲ್ಲರೂ ಹೀಗೇ ಇರುತ್ತಾರೆ ಅಂತಲ್ಲ. ಆದರೆ ಈ ರಾಶಿಗಳ ವ್ಯಕ್ತಿಗಳ ಸ್ವಭಾವದಲ್ಲಿ ಅಂಥಾ ಅಂಶ ಜಾಸ್ತಿ ಇರುತ್ತದೆ ಎನ್ನಬಹುದು.
ಇದನ್ನು ಓದಿ : ಹಾವು ಹಿಡಿಯುವುದು ಇಷ್ಟು ಸುಲಭನಾ.? ಹಾ, ನೀವು try ಮಾಡಬೇಡಿ ಹುಷಾರ್ ; ವಿಡಿಯೋ ನೋಡಿ.
ಇನ್ನೂ ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು (Individual Personality) ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.
ವೃಶ್ಚಿಕ ರಾಶಿ :
ಇವರು ಸಂಬಂಧಗಳಲ್ಲಿ ಹೆಚ್ಚು ಪೊಸೆಸಿವ್ ನೆಸ್ ಹೊಂದಿರುತ್ತಾರೆ. ಇನ್ನೊಬ್ಬರ ಭಾವನೆಗಳ ಜೊತೆ ಆಟ ಆಡುವ ಸಾಮರ್ಥ್ಯವೂ ಇವರಿಗಿದೆ. ಇನ್ನೊಬ್ಬರ ನಿಷ್ಠೆ ಮತ್ತು ಭಾವುಕತೆಯನ್ನು (Loyalty and sentimentality) ಪರೀಕ್ಷೆ ಮಾಡಲು ಮುಂದಾಗುವ ಗುಣ ಇದೆ. ತೀವ್ರವಾಗಿ ಬದುಕುತ್ತಾರೆ.
ಕಂಟ್ರೋಲ್ ಮಾಡಲು ಮೈಂಡ್ ಗೇಮ್ ಗಳನ್ನೂ ಆಡುತ್ತಾರೆ. ಅವರ ಈ ಕೆಲವು ಗುಣಗಳ ಹೊರತಾಗಿಯೂ ಅವರು ನಂಬಿಕೆಗೆ ಅರ್ಹರಾಗಿಯೂ ಉಳಿಯಬಲ್ಲರು. ಉತ್ಸಾಹದಿಂದ ಇರುತ್ತಾರೆ. ಜೊತೆಗೆ ನಿಗೂಢವಾಗಿಯೂ (mystery) ಇರುತ್ತಾರೆ. ಅರ್ಥವಾಗದಂತೆಯೂ ಕಾಣುತ್ತಾರೆ.
ಇದನ್ನು ಓದಿ : Health : ರಾತ್ರಿ ಬೇಗ ಊಟ ಮಾಡುವುದಕ್ಕೂ, ತೂಕ ಇಳಿಸುವುದಕ್ಕೂ ಏನ್ ಸಂಬಂಧ.?
ಮಿಥುನ ರಾಶಿ :
ಒಂದು ಕೆಲಸ ಆರಂಭಿಸಿದರೆ ಅದರ ಮೇಲೆ ಬಹುಬೇಗ ಆಸಕ್ತಿ ಕಳೆದುಕೊಳ್ಳುತ್ತಾರೆ. ಸಂಬಂಧಗಳಲ್ಲಿ ಸ್ಥಿರತೆಗಿಂತ (Consistency) ಹೆಚ್ಚಾಗಿ ವೈವಿಧ್ಯಕ್ಕೆ ಗಮನ ಕೊಡುತ್ತಾರೆ. ಅವರಿಗೆ ಬೋರ್ ಆಗುವುದು ಬೇಗ ಆದ್ದರಿಂದ ನಿರುದ್ದೇಶಪೂರ್ವಕವಾಗಿ ಇನ್ನೊಬ್ಬರ ಭಾವನೆಗಳ ಜೊತೆ ಆಟ ಆಡಬಹುದಾಗಿದೆ.
ಎಲ್ಲಿ ಬೇಕಾದರೂ ಹೊಂದಿಕೊಳ್ಳುತ್ತಾರೆ. ಮೋಡಿ ಮಾಡುವ ಸ್ವಭಾವ ಹೊಂದಿರುತ್ತಾರೆ. ಇತರರ ಗಮನ ಸೆಳೆಯುವ ಬುದ್ಧಿವಂತಿಕೆ ಪಡೆದಿರುತ್ತಾರೆ. ಅವರಿಗೆ ಬೌದ್ಧಿಕ ಚರ್ಚೆಗಳು ಇಷ್ಟವಾಗುತ್ತವೆ. ಆದರೆ ಅವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ.
ಇವರ ಸಂವಹನ ಶಕ್ತಿ ಸ್ಟ್ರಾಂಗ್ ಇರುವುದರಿಂದ ಇತರರ ಭಾವನೆಗೆ ಅನುಗುಣವಾಗಿ ಮಾತನಾಡಿ ಮೋಡಿ ಮಾಡಬಹುದಾಗಿದೆ.
ಮೀನ ರಾಶಿ :
ಇವರು ಸಂವೇದನಾ ಶೀಲ ವ್ಯಕ್ತಿಗಳು (Sensitive people). ಸಂಘರ್ಷಗಳನ್ನು ತಪ್ಪಿಸಲು ಭಾವನೆಗಳನ್ನು ನಿಯಂತ್ರಿಸಬಲ್ಲರು. ತಾಳ್ಮೆ ಮತ್ತು ಅರ್ಥೈಸುವಿಕೆಯ ಮೂಲಕ ಅವರು ಅತ್ಯುತ್ತಮ ಸಂಬಂಧವನ್ನು ಕಟ್ಟಿಕೊಳ್ಳಬಲ್ಲರು.
ತಮ್ಮ ಜೊತೆಗಿರುವ ವ್ಯಕ್ತಿಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಅವರು ಉದ್ದೇಶಪೂರ್ವಕವಾಗಿ ಇನ್ನೊಬ್ಬರ ಭಾವನೆಗಳನ್ನು ಬಳಸಿಕೊಳ್ಳದಿದ್ದರೂ ವಾಸ್ತವದಿಂದ ತಪ್ಪಿಸಿಕೊಳ್ಳುವ ಅವರ ವ್ಯಕ್ತಿತ್ವ ಮತ್ತು ಕಲ್ಪನೆಯಲ್ಲಿ (personality and imagination) ಕಳೆದುಹೋಗುವ ಗುಣದಿಂದಾಗಿ ಅಪಾರ್ಥ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಭಾವನಾತ್ಮಕ ಆಘಾತಗಳೂ ಉಂಟಾಗಬಹುದು.
ಇದನ್ನು ಓದಿ : Health : ಪ್ಲಾಸ್ಟಿಕ್ ಕಪ್‌ನಲ್ಲಿ ಚಹಾ ಕುಡಿತೀರಾ? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.!
ಸಿಂಹ ರಾಶಿ :
ಭಾವನೆಗಳನ್ನು ಬಳಸಿಕೊಂಡು ಪ್ರೀತಿ ಗಳಿಸಬಹುದಾಗಿದೆ. ಇಗೋಗೆ ಹರ್ಟ್ ಆದರೆ ಖಂಡಿತವಾಗಿಯೂ ಇನ್ನೊಬ್ಬರ ಭಾವನೆ ಜೊತೆ ಆಟ ಆಡುತ್ತಾರೆ. ಪ್ರಾಮಾಣಿಕತೆ (sincerity), ನಿಷ್ಠೆಯ ಮೂಲಕ ಗಟ್ಟಿಯಾದ ಸಂಬಂಧ ನಿರ್ವಹಿಸುವುದೂ ಇವರಿಗೆ ಗೊತ್ತು.
ಅಡ್ವೆಂಚರ್ ಅನ್ನು ಇಷ್ಟಪಡುವ ಸಾಹಸಮಯತೆ ಪಡೆದಿರುತ್ತಾರೆ. ಪ್ರೀತಿ ಪ್ರೇಮ ಪ್ರಣಯದಲ್ಲಿಯೂ ಸಾಹಸ ಮಾಡಬಲ್ಲರು. ಇವರು ಸುತ್ತಮುತ್ತಲಿನವರೂ ಮೆಚ್ಚಬೇಕೆಂದು ಆಸೆ ಪಡುತ್ತಾರೆ. ಉದಾರವಾಗಿರುತ್ತಾರೆ. ಇನ್ನೊಬ್ಬರ ಕಾಳಜಿ ವಹಿಸುತ್ತಾರೆ. ಪ್ರೇಮಮಯ ವ್ಯಕ್ತಿತ್ವ (Loving personality) ಹೊಂದಿರುತ್ತಾರೆ. ಎಲ್ಲರಿಂದ ಮೆಚ್ಚುಗೆ ಬಯಸುವ ಅವರ ಗುಣದಿಂದಾಗಿ ಇನ್ನೊಬ್ಬರ ಭಾವನೆಗಳ ಜೊತೆ ಆಟ ಆಡುವ ಸಾಧ್ಯತೆ ಇದೆ.
ಜನಸ್ಪಂದನ ನ್ಯೂಸ್, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.